ಮೇಘರಾಜ್ ಮೂವೀಸ್ ಲಾಂಛನದಲ್ಲಿ ಎಸ್. ರವಿರಾಜ್ ಹಾಗೂ ಎಸ್ ಕುಮಾರ್ ಅವರು ನಿರ್ಮಿಸುತ್ತಿರುವ ಪ್ರಭುತ್ವ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರ ಹಿಂದಿ ಭಾಷೆಗೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿರುವ ಸಂತಸದ ಸುದ್ದಿ ಚಿತ್ರತಂಡದಿಂದ ಬಂದಿದೆ.
ಆರ್. ರಂಗಾನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸೋಸಲೆ ಗಂಗಾಧರ್ ಸಂಗೀತ ನೀಡಿದ್ದು, ಎಮಿಲ್ ಹಿನ್ನಲೆ ಸಂಗೀತ ನೀಡಿದ್ದಾರೆ.
ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್, ಮಾಸ್‌ಮಾದ, ವಿಕ್ರಂ ಸಾಹಸ ನಿರ್ದೇಶನ, ಮೋಹನ್, ಕಲೈ ನೃತ್ಯ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ನರಸಿಂಹ ಜಾಲಹಳ್ಳಿ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಹಾಡುಗಳನ್ನು ಕವಿರಾಜ್, ಯೋಗರಾಜ್ ಭಟ್ ರಚಿಸಿದ್ದಾರೆ. ಸಂಭಾಷಣೆಯನ್ನು ವಿನಯ್ ಬರೆದಿದ್ದಾರೆ. ಮೇಘದಹಳ್ಳಿ ಶಿವಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಚೇತನ್ ಚಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಪಾವನ. ನಾಜರ್, ಮುನಿ, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ, ಆದಿಲೋಕೇಶ್, ಗಿರಿ, ಹರೀಶ್ ರೈ, ಪೂಜಾಲೋಕೇಶ್, ಅವಿನಾಶ್, ವೀಣಾಸುಂದರ್, ವಿಜಯ್ ಚೆಂಡೂರ್, ಅಮಿತಾ ಕುಲಾಳ್, ಅನಿತಾ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Discussion about this post