ಶಿವಮೊಗ್ಗ: ಮಲೆನಾಡಿನಲ್ಲಿ ಆರಂಭವಾಗಿ ರಾಜ್ಯಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯಲ್ಲಿ ಟೀಂಸುಪ್ರಯೋಗ ಥಿಯೇಟರ್ ಲ್ಯಾಬ್ ಅಡಿಯಲ್ಲಿ ನಿರ್ಮಾಣಗೊಂಡ ಕೇಳಿ ಎಂಬ ಕಿರುಚಿತ್ರ ಹಲವು ವಿಭಾಗಗಳಿಗೆ ಆಯ್ಕೆಯಾಗಿದೆ.
ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಸಂಕಲನ ಹಾಗೂ ಅತ್ಯುತ್ತಮ ಚಿತ್ರಕಥೆ ನಯನ್ ಅರೇಹಳ್ಳಿ, ಅತ್ಯುತ್ತಮ ನಟಿ ಅನುಪಮಾ ರಾವ್, ಅತ್ಯುತ್ತಮ ಹಿನ್ನೆಲೆ ಸಂಗೀತ ರಶೀದ್ ಅಹ್ಮದ್ ಖಾನ್, ಅತ್ಯುತ್ತಮ ಸಂಗೀತ ಪ್ರವೀಣ್ ದೇವಧರ್ ಆಯ್ಕೆಯಾಗಿದ್ದಾರೆ.
ಇನ್ನು, ಕೇಳಿ ಕಿರುಚಿತ್ರ ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಪಡೆದಿದೆ.
ಯುವತಂಡದ ಪ್ರಯತ್ನಕ್ಕೆ ಇಷ್ಟೊಂದು ಮೆಚ್ಚುಗೆ ದೊರೆತಿರುವುದು ಯುವ ಸಮೂಹಕ್ಕೆ ಪ್ರೇರಣೆಯಾಗಿದೆ.
Discussion about this post