ಬೆಂಗಳೂರು: ನಟ ಯಶ್ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ಹಾಗೂ ಟ್ವೀಟ್ ಮಾಡದಂತೆ ಅಭಿಮಾನಿಗಳಲ್ಲಿ ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ.
ನಮ್ಮ ನೆಚ್ಚಿನ ನಟನನ್ನು ಯಶ್ ಏಕವಚನದಲ್ಲಿ ಸಂಭೋದಿಸಿದ್ದಾರೆ ಎಂದು ಬೇಸರಗೊಂಡಿರುವ ಸುದೀಪ್ ಅಭಿಮಾನಿಗಳು ಯಶ್ ವಿರುದ್ಧ ಕಿಡಿ ಕಾರಿದ್ದರು.
ಸುದೀಪ್ ಅವಮ ಹಮ್ ಫಿಟ್ ಐ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿ ವೀಡಿಯೋ ಪೋಸ್‌ಟ್ ಮಾಡಿದ್ದ ಯಶ್, ವಿಡಿಯೋದಲ್ಲಿ ಹಾಯ್ ಸುದೀಪ್ ಎಂದು ಕರೆದಿದ್ದರು ರಾಕಿಂಗ್ ಸ್ಟಾರ್.
Awesome ,,,, best wshs wth ur buddy. 🤗… looks like he’s found a good trainer in u. @NimmaYash https://t.co/mGa4jKf8lB
— Kichcha Sudeepa (@KicchaSudeep) June 4, 2018
ಯಶ್, ಸುದೀಪ್ ಅವರಿಗಿಂತ ಬಹಳ ಚಿಕ್ಕವರು, ಹಾಗಿರುವಾಗ ಏಕವಚನದಲ್ಲಿ ಕರೆಯುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಯಶ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
ಯಶ್ ನನ್ನ ಚಾಲೆಂಜ್ ಸ್ವೀಕರಿಸಿದ್ದಾರೆ ಅಷ್ಟು ಸಾಕು.. ನೀವು ಅವರ ಕುರಿತು ಕೆಟ್ಟದಾಗಿ ಟ್ವೀಟ್ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಕಿಚ್ಚ ಮನವಿ ಮಾಡಿದ್ದಾರೆ.
I request my frnz n fans not to post any harsh tweets towards Yash ,calling me by my name in the video he has posted. Accepting my fitness challenge and posting tat video was outta sheer luv n respect n I can see only that. Hope my request is respected.
— Kichcha Sudeepa (@KicchaSudeep) June 4, 2018
Discussion about this post