ನವದೆಹಲಿ: ಸುಮಾರು 2000 ಸಾವಿರ ಕೋಟಿ ರೂ. ಅವ್ಯವಹಾರದ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜಾರಿ ನಿರ್ದೇಶನಾಲಯ ಸುಮಾರು 8 ಗಂಟೆ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೆ ಕುಂದ್ರಾ ಪತ್ನಿ-ನಟಿ ಶಿಲ್ಪಾ ಶೆಟ್ಟಿ, ಹಾಗೂ ನಟಿ ಸನ್ನಿ ಲಿಯೋನ್ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೂಲಗಳ ಮಾಹಿತಿಯಂತೆ, ರಾಜ್ ಕುಂದ್ರಾ ವಿಚಾರಣೆ ನಡೆಸುವ ವೇಳೆ ಪ್ರಕರಣದಲ್ಲಿ ಇನ್ನು ಯಾರ ಯಾರ ಕೈವಾಡವಿದೆ ಎಂಬ ಕುರಿತಾಗಿ ಪ್ರಶ್ನಿಸಲಾಗಿದ್ದು, ಈ ವೇಳೆ ಬಾಲಿವುಡ್‌ನ ಹಲವು ಸೆಲೆಬ್ರಟಿಗಳ ಹೆಸರುಗಳು ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.
ಇದರ ಆಧಾರದಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಸನ್ನಿ ಲಿಯೋನ್ ನಂತರ, ಪ್ರಚಿ ದೇಸಾಯಿ, ಆರ್ತಿ ಛಾಬ್ರಿಯಾ, ಸೋನಲ್ ಚೌಹಾಣ್, ಕರಿಶ್ಮಾ ತನ್ನಾ, ಝರೀನ್ ಖಾನ್, ನೇಹಾ ಭೂಪಿಯಾ, ಹುಮಾ ಖುರೇಶಿ ಹಾಗೂ ನರ್ಗೀಸ್ ಫಕ್ರಿ ಸೇರಿದಂತೆ ಇನ್ನೂ ಹಲವರ ಹೆಸರುಗಳು ಕೇಳಿಬಂದಿದೆ ಎನ್ನಲಾಗಿದ್ದು, ಇವರೆಲ್ಲರ ವಿಚಾರಣೆ ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
Discussion about this post