ನವದೆಹಲಿ: ಇದೇ ಜೂನ್ 28ರಿಂದ ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಆರಂಭವಾಗಲಿದ್ದು ಇದಕ್ಕಾಗಿ, ಸಾವಿರಾರು ಯಾತ್ರಾರ್ಥಿಗಳು ತಯಾರಿ ನಡೆಸಿದ್ದಾರೆ. ಆದರೆ, ಇವರ ಯಾತ್ರೆಗೆ ಉಗ್ರರ ದಾಳಿ ಭೀತಿ ಈಗ ಎದುರಾಗಿದೆ.
ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಪಾಕಿಸ್ಥಾನ ಕೃಪಾಪೋಷಿತ ಸುಮಾರು 450 ಉಗ್ರರು ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಎಚ್ಚರಿಸಿದ್ದಾರೆ.
ದಾಳಿ ನಡೆಸಲು ಎಲ್‌ಒಸಿಯಲ್ಲಿ ಹಲವಾರು ಲಾಂಚ್ ಪ್ಯಾಡ್ ಗಳನ್ನು ಉಗ್ರರು ರೂಪಿಸಿಕೊಂಡಿದ್ದು, ಇದರಲ್ಲಿ ಮುಖ್ಯವಾಗಿ ಪಾಕ್ ಮೂಲದ ಉಗ್ರರು, ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಎಲ್‌ಇಟಿ ಸಂಘಟನೆಗೆ ಸೇರಿದ ಉಗ್ರರು ಅಮರನಾಥ ಯಾತ್ರೆಯನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಎಚ್ಚರಿಸಿದೆ.
ರಂಜಾನ್ ಮಾಸಾಚರಣೆ ಅಂಗವಾಗಿ ಸೇನೆಯಿಂದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಕೊಂಚ ಬ್ರೇಕ್ ನೀಡಿರುವುದು, ಹೆಚ್ಚು ಹೆಚ್ಚು ಉಗ್ರರನ್ನು ತಯಾರು ಮಾಡಿಕೊಳ್ಳಲು ಉಗ್ರ ಸಂಘಟನೆಗೆ ಸಹಕಾರಿಯಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ ಎಂದು ವರದಿಯಾಗಿದೆ.
ಭಾರತೀಯ ಸೇನೆ ಎಲ್‌ಒಸಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಇಂತಹ ದೊಡ್ಡ ಬೆಳವಣಿಗೆ ಉಗ್ರರ ಕಡೆಯಿಂದ ನಡೆಯುತ್ತಿರುವುದು ಇದೇ ಮೊದಲು ಎಂದಿರುವ ಇಲಾಖೆ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ.
ಮಾಹಿತಿ ಅನ್ವಯ ಹೀಗಿವೆ ನೋಡಿ ಲಾಂಚ್ ಪ್ಯಾಡ್ ಗಳು:
- ಲಾಂಚ್ ಪ್ಯಾಡ್ 1: ಗುರೇಜ್ ಸೆಕ್ಟರ್ – 20 ಉಗ್ರರು
- ಲಾಂಚ್ ಪ್ಯಾಡ್ 2: ಮಚೀಲ್ ಸೆಕ್ಟರ್ – 50 ಉಗ್ರರು
- ಲಾಂಚ್ ಪ್ಯಾಡ್ 3: ಕೇರನ್ ಸೆಕ್ಟರ್ – 55 ಉಗ್ರರು
- ಲಾಂಚ್ ಪ್ಯಾಡ್ 4: ಥಂಗ್ದಾರ್ ಸೆಕ್ಟರ್ – 65 ಉಗ್ರರು
- ಲಾಂಚ್ ಪ್ಯಾಡ್ 5: ನೌಗಮ್ ಸೆಕ್ಟರ್ – 7 ಉಗ್ರರು
- ಲಾಂಚ್ ಪ್ಯಾಡ್ 6: ಉರಿ ಸೆಕ್ಟರ್ – 50 ಉಗ್ರರು
- ಲಾಂಚ್ ಪ್ಯಾಡ್ 7: ಪೂಂಚ್ ಸೆಕ್ಟರ್ – 35 ಉಗ್ರರು
- ಲಾಂಚ್ ಪ್ಯಾಡ್ 8: ಬಿಂಬೇರ್ ಸೆಕ್ಟರ್ – 120 ಉಗ್ರರು
- ಲಾಂಚ್ ಪ್ಯಾಡ್ 9: ನೌಶೇರಾ ಸೆಕ್ಟರ್ – 30 ಉಗ್ರರು
- ಲಾಂಚ್ ಪ್ಯಾಡ್ 10: ರಾಂಪುರ್ ಸೆಕ್ಟರ್ – 30 ಉಗ್ರರು
Discussion about this post