ಕಾನ್ಪುರ: ಉತ್ತರ ಪ್ರದೇಶದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದುರ್ಮರಣಕ್ಕೀಡಾದ ರೋಗಿಗಳ ಸಂಬಂಧಿಗಳು ನೋವು ಮಾಸುವ ಮುನ್ನವೇ, ಅಂತಹುದ್ದೇ ಘಟನೆ ಮತ್ತೆ ಅಲ್ಲಿ ನಡೆದಿದೆ.
ಇಲ್ಲಿನ ಲಾಲಾ ಲಜಪತ್ ರಾಯ್ ಆಸ್ಪತ್ರೆಯ ಐಸಿಯುನಲ್ಲಿ ಐವರ ಸಾವನ್ನಪ್ಪಿದ್ದು, ಐಸಿಯುನ ಎಸಿ ಪ್ಲಾಂಟ್‌ನ ದೋಷದಿಂದಾಗಿ ಮರಣಕ್ಕೀಡಾಗಿದ್ದಾರೆ ಎಂದು ಸತ್ತವರ ಸಂಬಂಧಿಗಳು ಆರೋಪಿಸಿದ್ದಾರೆ.
ಬುಧವಾರದಿಂದ ಇಲ್ಲಿನ ಎಸಿ ಪ್ಲಾಂಟ್ ಕಾರ್ಯನಿರ್ವಹಿಸದೇ ಇದ್ದುದು, ಈ ಕುರಿತಾಗಿ ಮುಖ್ಯದಾದಿ ಮೇಲಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಎಸಿ ಪ್ಲಾಂಟ್ ಕಾರ್ಯನಿರ್ವಹಣೆಯಾಗದ ಹಿನ್ನೆಲೆಯಲ್ಲಿ ಐಸಿಯುನ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆಯಲಾಗಿತ್ತು. ಆದರೆ, ಸಂಬಂಧಿಗಳ ಪ್ರಕಾರ ಇದು ಅಸ್ವಸ್ಥ ರೋಗಿಗಳಿಗೆ ಸಹಕಾರಿಯಾಗಲಿಲ್ಲ ಎಂದಿದ್ದಾರೆ.

















