ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ತಮ್ಮ ನೂತನ ಕಚೇರಿಯನ್ನು ನೆಹರೂ ರಸ್ತೆಯ ಶಿವಪ್ಪನಾಯಕ ಮಾರುಕಟ್ಟೆ ಸಂಕೀರ್ಣದ ಹಿಂಬದಿಯ ಆವರಣದಲ್ಲಿರುವ ಇಂದು ಆರಂಭಿಸಿದ್ದು, ಹೋಮ ಮತ್ತು ಪೂಜೆಗಳನ್ನು ನಡೆಸಲಾಯಿತು.
ಇಂದು ಮುಂಜಾನೆ ನಡೆದ ಪೂಜೆ ಮತ್ತು ಹೋಮ ಕಾರ್ಯಕ್ರಮದಲ್ಲಿ ಈಶ್ವರಪ್ಪ ದಂಪತಿ ಪಾಲ್ಗೊಂಡಿದ್ದರು. ಕೋಟೆ ಆಂಜನೇಯ ಸ್ವಾಮಿಯ ಫೋಟೋ, ಈಶ್ವರಪ್ಪ ಅವರ ಮನೆ ದೇವರ ಫೋಟೋ ಹಾಗೂ ಕಳಸವನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸಲಾಯಿತು.
ರವೀಂದ್ರ ನಗರ ಪ್ರಸನ್ನಗಣಪತಿ ದೇವಸ್ಥಾನದ ಮುಖ್ಯಅರ್ಚಕ ಅ.ಪ. ರಾಮಭಟ್ಟ ಅವರ ನೇತೃತ್ವದಲ್ಲಿ ಪೂಜೆ ನಡೆಸಲಾಯಿತು. ಕಚೇರಿಯನ್ನು ವಾಸ್ತುಪ್ರಕಾರ ಜೋಡಿಸಲಾಗಿದ್ದು, ಈ ಹಿಂದೆ ದಕ್ಷಿಣ ದಿಕ್ಕಿನಲ್ಲಿ ಇದ್ದ ಸ್ವಾಗತ ವಿಭಾಗದ ದಿಕ್ಕನ್ನು ಈಗ ಪೂರ್ವಕ್ಕೆ ಬದಲಾಯಿಸಲಾಗಿದೆ.
ಪೂಜೆಯಲ್ಲಿ ಈಶ್ವರಪ್ಪ ಪತ್ನಿ ಜಯಲಕ್ಷ್ಮೀ ಈಶ್ವರಪ್ಪ, ಪುತ್ರ ಹಾಗೂ ಜಿಪಂ ಸದಸ್ಯ ಕೆ.ಇ. ಕಾಂತೇಶ್, ಶಾಲಿನಿ ಕಾಂತೇಶ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
Discussion about this post