70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಠಿಸಿದ್ದ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರ ಈಗ ಹೊಸ ತಂತ್ರಜ್ಞಾನದೊಂದಿಗೆ ತೆರೆಯ ಮೇಲೆ ಬರಲು ಸಿದ್ದವಾಗಿದ್ದು, ಇದರ ಟೀಸರ್ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಸೃಷ್ಠಿಸಿ, ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.
ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ಬರಲಿರುವ ನಾಗರಹಾವು ಚಿತ್ರದ ಟೀಸರ್ ಅನ್ನು ಕಿಚ್ಚ ಸುದೀಪ್ ಅವರ ಟ್ವಿಟ್ಟರ್ ಅಕೌಂಟ್ ನಲ್ಲಿ ಶುಕ್ರವಾರ ಬಿಡುಗಡೆ ಮಾಡಿದ್ದು, ವಿಷ್ಣು ಸರ್ ಓರ್ವ ಅದ್ಭುತ ನಟರಾಗಿದ್ದು, ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರ ಚಿತ್ರದ ಟೀಸರ್ ಬಿಡುಗಡೆ ಮಾಡಲು ಅವಕಾಶ ದೊರೆತಿರುವುದು ನನಗೆ ಸಂತೋಷ ತಂದಿದೆ. ಹೊಸ ಅವತಾರದಲ್ಲಿ ಮರಳಿದ್ದಾರೆ ರಾಮಚಾರಿ ಎಂದು ಸುದೀಪ್ ಬರೆದುಕೊಂಡಿದ್ದಾರೆ.
Vishnu sir is one of those rare actors who’s legacy still rules over crores of hearts all across. So happy n honoured to be releasing my idol’s teaser. Presenting #Nagarahaavu in a new Avataar. Make way my friends,, Ramachaari is back. https://t.co/wvXhDuvT6l
Bst wshs Balaji.— Kichcha Sudeepa (@KicchaSudeep) June 22, 2018
ಚಾಮಯ್ಯ ಮೇಷ್ಟ್ರ ಶಿಷ್ಯನಾಗಿ ಅಭಿಯಿಸಿದ್ದ ವಿಷ್ಣುವರ್ಧನ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಚಿತ್ರ. ಈಗ ಮತ್ತೊಮ್ಮೆ ಆ ಚಿತ್ರವನ್ನು ಹೊಸ ಅವತಾರದಲ್ಲಿ ತೆರೆಗೆ ತರಲು ಈಶ್ವರಿ ಪ್ರೊಡಕ್ಷನ್ ಸಿದ್ಧವಾಗಿದೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಂದು 35ಎಂಎಂನಲ್ಲಿ ಬಿಡುಗಡೆಗೊಳಿಸಿದ್ದ ಚಿತ್ರವನ್ನು ಇಂದು ಸಿನಿಮಾಸ್ಕೋಪ್ ಸಿದ್ಧಪಡಿಸುತ್ತಿದೆ. ಅದನ್ನು ದೊಡ್ಡ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಬೃಹತ್ ಪರದೆ ಮೇಲೆ ಮೂಡಿಸಲು ಮುಂದಾಗಿದೆ.
ನಾಗರಹಾವು ಟೀಸರ್ ಅನ್ನು ಯುಟ್ಯೂಬ್‌ನಲ್ಲಿ ಈಗಾಗಲೇ ಸುಮಾರು 32 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
Discussion about this post