ಜಮ್ಮು: ಜೂನ್ 28ರ ಗುರುವಾರದಿಂದ ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಆರಂಭವಾಗಲಿದೆ. ಈ ಭಾರಿ ಯಾತ್ರೆಗೆ ದೊಡ್ಡ ಪ್ರಮಾಣದಲ್ಲಿ ಉಗ್ರರ ದಾಳಿ ಭೀತಿ ಇರುವುದರಿಂದ ಕೇಂದ್ರ ಸರ್ಕಾರ ಯಾತ್ರಿಗಳ ಭದ್ರತೆಗಾಗಿ ಹಿಂದೆಂದೂ ಕಂಡುಕೇಳರಿಯದ ರೀತಿಯನ್ನು ಭದ್ರತೆ ಒದಗಿಸತ್ತಿದೆ.
ಪ್ರಮುಖವಾಗಿ, ಸಿಆರ್‌ಪಿಎಫ್ ಯೋಧರ ವಿಶೇಷ ಮೋಟಾರ್ ಸ್ಟ್ರಾರ್ಡ್ ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ಫೂಲ್ ಪ್ರೂಫ್ ಭದ್ರತೆ ಒದಗಿಸಲಾಗಿದೆ.
ಒಟ್ಟು 60 ದಿನಗಳ ಕಾಲ ನಡೆಯಲಿರುವ ಯಾತ್ರೆ ಹಿಂದೂಗಳಿಗೆ ಅತ್ಯಂತ ಪವಿತ್ರವಾಗಿದ್ದು, ಶಿವ ದೇವರ ಆರಾಧನೆ ನಡೆಯಲಿದೆ.
ಪ್ರತಿವರ್ಷವೂ ಸಹ ಈ ಯಾತ್ರೆಗೆ ಉಗ್ರರ ಭೀತಿ ಇರುತ್ತದೆ. ಆದರೆ, ಈ ಭಾರೀ ಸ್ವಲ್ಪ ಹೆಚ್ಚೇ ಇರುವುದರಿಂದ ಕೇಂದ್ರ ಸರ್ಕಾರ ಯಾತ್ರಾರ್ಥಿಗಳ ಭದ್ರತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಸಹ ಕೈಗೊಳ್ಳಲು ಸೂಚನೆ ನೀಡಿದೆ.
ಯಾತ್ರಾರ್ಥಿಗಳು ಸಾಗುವ ಹಾದಿಯುದ್ದಕ್ಕೂ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಸಣ್ಣ ಪ್ರಮಾಣದ ಆಂಬ್ಯುಲೆನ್‌ಸ್ ಗಳನ್ನು ನಿಯೋಜನೆ ಮಾಡಲಾಗಿದೆ. ಇನ್ನು, ಅತ್ಯಂತ ಪ್ರಮುಖವಾಗಿ ಅಮರನಾಥ ಯಾತ್ರಾರ್ಥಿಗಳು ಸಂಚರಿಸುವ ಪ್ರತಿವಾಹನಕ್ಕೂ ರೇಡಿಯೋ ಫ್ರೀಕ್ವೆನ್ಸಿ(ಆರ್‌ಎಫ್) ಟ್ಯಾಗ್ ಅಳವಡಿಸಲಾಗಿದೆ. ಇದು, ವಾಹನ ಸಂಚಾರದ ಹಾಗೂ ಅಪಾಯದ ಪ್ರತಿ ಕ್ಷಣದ ಮಾಹಿತಿ ನೀಡುತ್ತದೆ. ಇದರೊಂದಿಗೆ ಯಾವುದೇ ರೀತಿಯ ಸ್ಫೋಟಕ ಇರುವ ಸುಳಿವು ದೊರೆತಾಕ್ಷಣ ಮಾಹಿತಿ ರವಾನಿಸುತ್ತದೆ.
ವಿವಿಧ ಭದ್ರತಾ ಸಮಿತಿಗಳನ್ನು ಸೇನೆಯೊಂದಿಗೆ ಹೊಂದಾಣಿಕೆ ಮಾಡಿ, ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ.
Discussion about this post