ಮುಂಬೈ: ಅದು ಭಾರತೀಯ ವೈದ್ಯಕೀಯ ಹಾಗೂ ಅಂಗಾಂಗಗಳ ಸಾಗಾಣೆಯ ಇತಿಹಾಸದಲ್ಲಿ ಮೊಟ್ಟ ಮೊದಲ ದಾಖಲೇ ಹೌದು…
ಜೀವಂತ ಹೃದಯವನ್ನು ವಾಣಿಜ್ಯ ನಗರಿ ಮುಂಬೈನಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ಕೇವಲ 2.5 ಗಂಟೆಗಳಲ್ಲಿ ರವಾನೆ ಮಾಡುವ ಮೂಲಕ ಮಂಗಳವಾರ ದಾಖಲೆ ಬರೆಯಲಾಗಿದ್ದು, 53 ವರ್ಷದ ಮಹಿಳೆಗೆ ಈ ಹೃದಯವನ್ನು ಜೋಡಿಸಲಾಗಿದೆ.
ಮುಂಬೈ-ನವದೆಹಲಿ ನಡುವಿನ ಸುಮಾರು 1,178 ಕಿಲೋ ಮೀಟರ್ ದೂರವನ್ನು ಕೇವಲ ಎರಡೂವರೆ ಗಂಟೆಗಳ ಕಾಲದಲ್ಲಿ ಕ್ರಮಿಸಲಾಗಿದ್ದು, ಪೋಟೀಸ್ ಎಸ್ಕಾರ್ಟ್ ಹಾರ್ಟ್ ಇಸ್ಟಿಟ್ಯೂಟ್ ನ ಹೃದಯರೋಗ ವಿಭಾಗದ ನಿರ್ದೇಶಕ ಡಾ.ಮೆಹರಲ್ ವಾಲಾ ಅವರ ನೇತೃತ್ವದಲ್ಲಿ ಹೃದಯವನ್ನು ರವಾನೆ ಮಾಡಲಾಗಿದೆ.
ಮುಂಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ 42 ವರ್ಷದ ವ್ಯಕ್ತಿಯೊಬ್ಬರ ಮೆದುಳು ಜೀವ ಕಳೆದುಕೊಂಡಿತ್ತು. ಆದರೆ, ಹೃದಯ ಇನ್ನೂ ಮಿಡಿಯುತ್ತಲೇ ಇತ್ತು. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯ ಕುಟುಂಬಸ್ಥರು ಹೃದಯವನ್ನು ದಾನ ಮಾಡಲು ನಿರ್ಧರಿಸಿದ್ದರು.
ತತಕ್ಷಣವೇ ಹೃದಯವನ್ನು ಹೊರತೆಗೆದು, ಸಂರಕ್ಷಿಸಿ ಮಧ್ಯಾಹ್ನ 3.15ಕ್ಕೆ ಮುಂಬೈನಿಂದ ನಿರ್ಗಮಿಸಿ, 5.05ಕ್ಕೆ ನವದೆಹಲಿ ವಿಮಾನ ನಿಲ್ದಾಣವನ್ನು ತಲುಪಲಾಗಿತ್ತು. ಎಫ್‌ಇಎಚ್‌ಐನಿಂದ ಒಕ್ಲಾದವರೆಗಿನ 23 ಕಿಮೀಗಳನ್ನು ಕೇವಲ 23 ನಿಮಿಷದಲ್ಲಿ ತಲುಪಲಾಗಿತ್ತು. ಪ್ರಮುಖವಾಗಿ ಆಂಬ್ಯುಲೆನ್‌ಸ್ ಸಂಚರಿಸುವ ರಸ್ತೆಯಲ್ಲಿ ಗ್ರೀನ್ ಕಾರಿಡಾರ್ ಮಾಡಿ, ಸಂಚಾರ ಮುಕ್ತವನ್ನಾಗಿಸಲಾಗಿತ್ತು.
ಇನ್ನು, 53 ವರ್ಷದ ಮಹಿಳೆಗೆ ಹೃದಯ ಬದಲಾವಣೆ ಮಾಡುವ ಅಗತ್ಯವಿತ್ತು. ಈಕೆಗೆ ಈ ಹೃದಯ ಜೋಡಿಸಲಾಗಿದೆ.
Discussion about this post