ಬೆಂಗಳೂರು: ಪ್ರತಿಷ್ಠಿತ ರಾಷ್ಟ್ರೋತ್ಥಾನ ಪರಿಷತ್ ನಿಜಕ್ಕೂ ತನ್ನ ವಿಭಿನ್ನ, ವಿಶಿಷ್ಠ, ರಾಷ್ಟ್ರ ಪ್ರೇಮದಿಂದಲೇ ಮನೆ ಮಾತಾಗಿದೆ. ಈಗ ಇಂತಹ ಸಂಸ್ಥೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಕಾಡು ಬೆಳೆಸುವ ಯೋಜನೆಯ ಭಾಗವಾಗಿ ವೃಂದಾವನ ಎಂಬ ವಿಶಿಷ್ಠ ಕಲ್ಪನೆಗೆ ಅಡಿಯಿಟ್ಟಿದೆ.
ಸೇವೆಯ ಜಗತ್ತನ್ನು ್ಝಜ್ಛಿಛಿ’ ಞಜಿಜಿಟ್ಞ ಆಗಿ ಸ್ವೀಕರಿಸಿ ಕಳೆದ 53 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್ ಇದೀಗ ಕಾಡು ಬೆಳೆಸುವ ನಿರ್ಧರಿಸಿದೆ. ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯ ಪರಿಸರದ 20 ಎಕರೆ ವಿಶಾಲ ಜಾಗದಲ್ಲಿ ಮರಗಿಡಗಳನ್ನು ನೆಟ್ಟು, ಪೋಷಿಸಿ, ಬೆಳೆಸಲು ಯೋಜನೆಯೊಂದನ್ನು ರೂಪಿಸಿದೆ.
ರಾಷ್ಟ್ರೋತ್ಥಾನ ಪರಿಷತ್ ದೇಸೀ ಗೋ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದ 110 ಎಕರೆ ಜಾಗದಲ್ಲಿ ರಾಷ್ಟ್ರೋತ್ಥಾನ ಗೋಶಾಲೆಯನ್ನು ನಡೆಸುತ್ತಿದ್ದು 10 ದೇಸೀ ತಳಿಗಳ 500ಕ್ಕೂ ಅಧಿಕ ಭಾರತೀಯ ಹಸುಗಳ ಸಂರಕ್ಷಣೆ ಮಾಡಲಾಗುತ್ತಿದೆ. ಇದೇ ಪರಿಸರದಲ್ಲಿ ಈ ಕಾಡು ನಿರ್ಮಾಣಗೊಳ್ಳಲಿದ್ದು ಈ ಯೋಜನೆಗೆ ವೃಂದಾವನ ಎಂದು ಹೆಸರಿಡಲಾಗಿದೆ.
ಸಾಂಪ್ರದಾಯಿಕ ಸ್ಥಳೀಯ ಹಾಗೂ ಹಣ್ಣುಹಂಪಲುಗಳನ್ನು ನೀಡುವ ಪಾಣಿಪಕ್ಷಿಸಂಕುಲಕ್ಕೆ ಪೂರಕವಾಗ ಸಸ್ಯಗಳನ್ನು ವೃಂದಾವನದಲ್ಲಿ ಕರ್ನಾಟಕ
ಸರ್ಕಾರದ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಬೆಳಸಲಾಗುತ್ತದೆ. ಇದಕ್ಕೆ ಪೂರಕವಾಗಿ ಸಂಪೂರ್ಣ ಸೋಲಾರ್ ಶಕ್ತಿಯನ್ನು ಬಳಸಿ ನೀರಾವರಿ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಖ್ಯಾತ ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ವೃಂದಾವನ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಇದರ ಪ್ರಾರಂಭಿಕ ಹಂತವಾಗಿ ಈ ವರ್ಷ ಸುಮಾರು 5 ಎಕರೆ ಜಾಗದಲ್ಲಿ 1000 ಗಿಡಗಳನ್ನು ನೆಟ್ಟು ಪೋಷಿಸಲು ನಿರ್ಧರಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಜುಲೈ 8ರ ಭಾನುವಾರ ನಡೆಯಲಿದೆ.
ಮನುಷ್ಯ ಸೇರಿದಂತೆ ಎಲ್ಲ ಜೀವಸಂಕುಲದ ಭವಿಷ್ಯವಿರುವುದು ಸುಂದರ, ಸ್ವಚ್ಛ ಪರಿಸರದಲ್ಲಿ ಮಾತ್ರ ಎಂಬುದು ಸಾರ್ವತ್ರಿಕ ಸತ್ಯ. ಆದರೆ ಇಂದು ಜಗತ್ತಿನ ಎಲ್ಲ ಕಡೆಯಲ್ಲೂ ಕಾಣುತ್ತಿರುವುದು ಪರಿಸರ ನಾಶವನ್ನೆ. ಅದರಲ್ಲೂ ಒಂದು ಕಡೆ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಆಧುನಿಕ ಜಗತ್ತು, ಇನ್ನೊಂದು ಕಡೆ ಪರಿಸರ ವಿನಾಶದ ಪ್ರತಿಕೂಲ ಪರಿಣಾಮಗಳಿಂದ ಮನುಕುಲದ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಭಯ. ದಶಕಗಳ ಹಿಂದೆ ವಾಯುಮಾಲಿನ್ಯ, ಜಲಮಾಲಿನ್ಯ ಇತ್ಯಾದಿಗಳು ಪಠ್ಯಪುಸ್ತಕದ ಕಥೆಗಳಾಗಿವೆ.
ಇಂದು ನಮಗೆ ಬೇಕೋ ಬೇಡವೋ ಇವೆಲ್ಲ ನಮ್ಮ ಕಣ್ಣ ಮುಂದಿರುವ ಕಟು ವಾಸ್ತವಗಳಾಗಿವೆ. ಇದಕ್ಕಿರುವ ಏಕಮೇವ ಪರಿಹಾರ ಗಿಡಮರಗಳನ್ನು ಬೆಳೆಸುವುದು ಹಾಗೂ ಕಾಡುಗಳನ್ನು ಸಂರಕ್ಷಿಸುವುದು ಎನ್ನುವುದನ್ನು ಮರೆಯದಿರಿ.
ಯೋಜನೆಯಲ್ಲಿ ಸಾರ್ವಜನಿಕರೂ ಕೈಜೋಡಿಸಬಹುದು
ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯ ಪರಿಸರದಲ್ಲಿ ಕಾಡನ್ನು – ವೃಂದಾವನ – ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್‌ನ ಈ ಯೋಜನೆಯಲ್ಲಿ ಸಾರ್ವಜನಿಕರೂ ಕೈಜೋಡಿಸಬಹುದು.
ರೂ. 1000 ನೀಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನಿಮ್ಮ ಈ ದೇಣಿಗೆಯಿಂದ 2 ಗಿಡಗಳನ್ನು ನೆಟ್ಟು ಹಲವು ವರ್ಷಗಳ ಕಾಲ ಅವುಗಳನ್ನು ಪೋಷಿಸಿ, ಬೆಳೆಸಿ, ಸಂರಕ್ಷಿಸಲಾಗುವುದು.
ನಮಗೆ ಸರ್ವವನ್ನೂ ನೀಡುವ ಪ್ರಕೃತಿಯ ಸಂರಕ್ಷಣೆಗೆ ಮುಂದಾಗೋಣ ಬನ್ನಿ… ರಾಷ್ಟ್ರೋತ್ಥಾನ ಪರಿಷತ್‌ನ ಈ ಪರಿಸರ ಕಾಳಜಿಯೊಂದಿಗೆ ನಾವೂ ಕೈ ಜೋಡಿಸೋಣ.
Discussion about this post