ಉನ್ನಾವೋ: ದೇಶದಾದ್ಯಂತ ಅತ್ಯಾಚಾರಗಳ ಸರಣಿ ಮುಂದುವರೆದಿದ್ದು, ಉತ್ತರ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.
ಮೂವರು ದುರುಳರು ಮಹಿಳೆಯನ್ನು ಮನಸೋಇಚ್ಚೇ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸುತ್ತಾರೆ. ಆದರೆ, ಆಕೆ ಭಯ್ಯಾ ಐಸಾ ಮತ್ ಕರೋ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾರೆ. ಆದರೆ, ಕರುಣೆಯಿಲ್ಲದ ಪಾಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ಈ ವಿಡಿಯೋವನ್ನು ಸ್ವತಃ ಆರೋಪಿಗಳೇ ಇಂಟರ್‌ನೆಟ್‌ನಲ್ಲಿ ಹರಿ ಬಿಟ್ಟಿದ್ದಾರೆ ಎಂದು ಹೇಳಲಾಗಿದ್ದರೂ, ಈ ಕುರಿತಂತೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇನ್ನು ಈ ವೀಡಿಯೋದಿಂದ ಜಾಗೃತರಾದ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಇನ್ನೊಬ್ಬನಿಗಾಗಿ ಬಲೆ ಬೀಸಲಾಗಿದೆ.
Discussion about this post