ನವದೆಹಲಿ: ಜಗತ್ತಿನಾದ್ಯಂತ ಹಲವಾರು ಮಂದಿಯನ್ನು ಬಲಿ ಪಡೆದ ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ನಂತರ ಈಗ ಪ್ರಾಣಕ್ಕೆ ಸಂಚಕಾರ ತರುವ ಅಪಾಯಕಾರಿ ಮೊಮೊ ಚಾಲೆಂಜ್ ಸೃಷ್ಠಿಯಾಗಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್ ಮೂಲಕ ಈ ಚಾಲೆಂಜನ್ನು ಹರಡಿಸಲಾಗುತ್ತಿದ್ದು, ವೈರಲ್ ಆಗಿದೆ.
ಇದು ಜನರು ದೈಹಿಕವಾಗಿ ತಮ್ಮನ್ನು ತಾವೇ ಹಾನಿ ಮಾಡಿಕೊಳ್ಳುವ ಹಾಗೂ ಪ್ರಾಣ ಕಳೆದುಕೊಳ್ಳುವಂತಹ ಕೃತ್ಯಕ್ಕೆ ಪ್ರೇರೇಪಣೆ ಮಾಡುವ ದುಷ್ಟ ಚಾಲೆಂಜ್ ಆಗಿದೆ.
ಇದೊಂದು ಡೆಡ್ಲಿ ಗೇಮ್ ಆಗಿದ್ದು, ಒಂದು ವೇಳೆ ಈ ಆಟವನ್ನು ಪೂರ್ಣಗೊಳಿಸದಿದ್ದರೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತದೆ. ಇದರಿಂದ ಈ ಆಟವನ್ನು ಆಡಲು ಜನರು ಭಯಪಡುತ್ತಿದ್ದಾಾರೆ. ಈ ಮೊಮೊ ಜಾಲೆಂಜ್ ಅನ್ನು ಜಪಾನ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇಂತಹ ಒಂದು ಕೃತ್ಯ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಕುರಿತಾಗಿ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
Discussion about this post