ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದ ಕುರಿತಾಗಿ ಭಾರೀ ಗೊಂದಲು ಏರ್ಪಟ್ಟಿದ್ದು, ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಗೊಂದಲವನ್ನು ಸೃಷ್ಠಿಸಿದೆ.
ಆಸ್ಪತ್ರೆಯಿಂದ ಹೊರಬಂದಿದ್ದ ರಾಜನಾಥ್ ಸಿಂಗ್, ಅವರು ನಮ್ಮೊಂದಿಗಿಲ್ಲ, ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತೇವೆ ಎಂದರು. ಆನಂತರ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ವಾಜಪೇಯಿ ಆರೋಗ್ಯ ವಿಷಮ ಸ್ಥಿತಿಯಲ್ಲಿದೆ ಎಂದಿದ್ದರು.
ಈ ಹೇಳಿಕೆಯನ್ನು ಆಧರಿಸಿ ಸರ್ಕಾರಿ ಸ್ವಾಮ್ಯದ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನು ಆಧರಿಸಿ ದೇಶದ ಹಲವಾರು ಮಾಧ್ಯಮಗಳು ವಾಜಪೇಯಿ ಇನ್ನಿಲ್ಲ ಎಂಬ ಸುದ್ದಿಯನ್ನು ಪ್ರಕಟಿಸಿದವು.
ಆದರೆ, ಆನಂತರ ಆಸ್ಪತ್ರೆ ಸ್ಪಷ್ಟನೆ ನೀಡಿದ್ದು, ವಾಜಪೇಯಿ ಇನ್ನೂ ಚಿಂತಾಜನಕ ಸ್ಥಿತಿಯಲ್ಲೇ ಇದ್ದಾರೆ ಎಂದು ಹೇಳಿದೆ.. ಈ ಹಿನ್ನೆಲೆಯಲ್ಲಿ ಮೊದಲು ಸುದ್ದಿ ಪ್ರಕಟಿಸಿದ್ದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಪ್ರಮಾದಕ್ಕೆ ಕ್ಷಮೆ ಕೋರಿದೆ.
ಈ ಸುದ್ದಿಯನ್ನು ಪ್ರಕಟಿಸಿದ್ದಕ್ಕೆ ಕಲ್ಪ ನ್ಯೂಸ್ ಸಹ ವಿಷಾದ ವ್ಯಕ್ತಪಡಿಸುತ್ತದೆ.
ಸದ್ಯ ಆಸ್ಪತ್ರೆಯ ಪ್ರಕಟಣೆಯಂತೆ ವಾಜಪೇಯಿಯವರೂ ಇನ್ನೂ ಐಸಿಯುನಲ್ಲೇ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
Discussion about this post