No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Wednesday, July 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಪುನೀತ್ ಜಿ. ಕೂಡ್ಲೂರು

ಆಪ್ತಮಿತ್ರನ ನಿರ್ಗಮನ: ಒಂಟಿಯಾದ ಭೀಷ್ಮ!!

kalpa News by kalpa News
August 17, 2018
in ಪುನೀತ್ ಜಿ. ಕೂಡ್ಲೂರು
0
Share on FacebookShare on TwitterShare on WhatsApp

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಭಾರತಮಾತೆಯಲ್ಲಿ ಲೀನವಾದರು. ಅವರ ಪಾರ್ಥೀವ ಶರೀರವನ್ನು ನೋಡಲು ದೇಶದ ಗಣ್ಯಾತಿಗಣ್ಯರೆಲ್ಲ ತೆರಳಿದ್ದರು. ಆದರೆ ಇಲ್ಲಿ, ಲಾಲ್ ಕೃಷ್ಣ ಅಡ್ವಾಣಿಯವರ ಭೇಟಿ ವಿಶೇಷವಾದುದು. ಹೀಗಾಗಿ, ಕೆಲವು ಮಾತುಗಳನ್ನು ಹೇಳಲೇಬೇಕು.

ಈ ವಾಜಪೇಯಿ ಮತ್ತು ಅಡ್ವಾಣಿಯವರ ಬಲಪಂಥೀಯ ಜೋಡಿ ಭಾರತದ ರಾಜಕೀಯದ ದಿಕ್ಕನ್ನೇ ಬದಲಿಸಿತು ಮತ್ತು ಭಾರತವನ್ನು ಬದಲಿಸಿತು ಎಂದರೆ ತಪ್ಪಾಗಲಾರದು. ವಾಜಪೇಯಿಯವರಿಗಿಂತ ಮೂರು ವರ್ಷ ಚಿಕ್ಕವರಿರುವ ಅಡ್ವಾಣಿಯವರು. ಆದರೂ, ವಾಜಪೇಯಿಯವರ ಸುದೀರ್ಘ 65 ವರ್ಷದ ಸ್ನೇಹಿತರು, ಪಕ್ಷದ ಸಮಪಾಲುದಾರರು ಮತ್ತು ನಿರಂತರ 7 ದಶಕಗಳ ಸಹೋದ್ಯೋಗಿಗಳು.

ಇಬ್ಬರ ವ್ಯಕ್ತಿತ್ವಗಳು ಭಿನ್ನ ವಾಜಪೇಯಿ ವಿಶಾಲವಾದಿ ಮತ್ತು ಸಮಾಜವಾದಿ. ಆದರೆ ಅಡ್ವಾಣಿಯವರು ಕಟ್ಟರ್ ಹಿಂದೂವಾದಿ, ವಿಶೇಷ ಎಂದರೆ ಇಬ್ಬರದು ಆದರ್ಶ ಒಂದೇ ಅದು ಸಮರ್ಥ ಹಿಂದುರಾಷ್ಟ್ರ ಮತ್ತು ಬಲಿಷ್ಠ ಭಾರತ. ಇವರ ಅಭಿಪ್ರಾಯ ಭೇದಗಳು ಪಕ್ಷವನ್ನು ಒಡೆಯಲಿಲ್ಲ ಆದರೆ ಮತ್ತಷ್ಟು ಬಲಪಡಿಸಿತು.

ಇಬ್ಬರಿಗೂ ಅವರದೇ ಆದ ಹಿಂಬಾಲಕರು, ಇಬ್ಬರನ್ನು ಹಿಂಬಾಲಿಸುವ ಬೃಹತ್ ಸಮೂಹ, ಇಬ್ಬರು ಪಕ್ಷಕಟ್ಟಲು ಸುತ್ತದ ಊರಿಲ್ಲ, ಕೇರಿಯಿಲ್ಲ. ಇವರಿಬ್ಬರ ಪರಿಶ್ರಮವೇ ಇಂದಿನ ಎನ್‌ಡಿಎ ಸರ್ಕಾರದ ತಳಹದಿ. ಇವರಿಬ್ಬರ ಸಮಾನ ವೇದಿಕೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇಬ್ಬರ ಆಸಕ್ತಿಗಳು ಸಾಹಿತ್ಯ, ಪತ್ರಿಕೆ ಮತ್ತು ಸಿನಿಮಾ ಸಹ.

1951 ರಿಂದ 2014ರ ತನಕ ನಿರಂತರ 63 ವರ್ಷ ಪಕ್ಷ ಮತ್ತು ಸಂಘಟನೆ ಕಟ್ಟಿದ ಮತ್ತು ಬೆಳೆಸಿದ ನಿರ್ಮಾತೃಗಳು ಇವರು. ವಾಜಪೇಯಿಯವರು ಉತ್ತಮ ಸಂಸದೀಯ ಪಟು ಮತ್ತು ದೀನ ದಯಾಳ್ ಉಪಾಧ್ಯಾಯರ ನಂತರ ಪಕ್ಷದ ಜವಾಬ್ಧಾರಿ ಹೊತ್ತರು ಮತ್ತು ಅಡ್ವಾಣಿಯವರು ಆ ಮುಂದಿನ ದಿನಗಳ ಪರಿಶ್ರಮದ ಪಾಲುದಾರರಾದರು ನಂತರ ಅಡ್ವಾಣಿಯವರೇ ಪಕ್ಷವನ್ನು ನಡೆಸಿದರು. ಇಂದಿನ ಪ್ರಧಾನಿಯಾಗಬೇಕಾದವರು ಮತ್ತೊಬ್ಬ ಸಮರ್ಥನಿಗೆ ಜಾಗ ಮಾಡಿ ಹಿಂದೆ ಸರಿದರು.

ಇಂದು ಅಡ್ವಾಣಿಯವರ ಸ್ಥಾನದಲ್ಲಿ ನಿಂತು ಒಂದು ಕ್ಷಣ ಯೋಚಿಸಿದರೆ ಅವರ ಮುಂದೆ ಕಾಣುವುದು ಶೂನ್ಯತಾ ಭಾವ. ತನ್ನ ಸುದೀರ್ಘ ಸ್ನೇಹಿತ, ಪಕ್ಷದ ನೊಗದ ಮತ್ತೊಂದು ಎತ್ತು ಇಂದು ಇಲ್ಲ. ತನ್ನ ಎಲ್ಲಾ ಕಷ್ಟ ಸುಖಗಳಿಗೆ ಭಾಗಿಯಾದ ವ್ಯಕ್ತಿ, ಆದರ್ಶಗಳಿಗಾಗಿ ಸಹಭಾಗಿತ್ವದಲ್ಲಿ ನಿಸ್ವಾರ್ಥತೆಯಿಂದ ದುಡಿದ ಮನಗಳು ಮತ್ತು ದೇಹಗಳು ಇಂದು ಭೌದ್ದಿಕವಾಗಿ ಬೇರೆ ಬೇರೆಯಾದವು.

ವಾಜಪೇಯಿಯವರ ಅನಾರೋಗ್ಯವೇ ಅಡ್ವಾಣಿಯವರನ್ನು ಒಂಟಿಯಾಗಿಸಿತ್ತು. ದಶಕಗಳಿಂದ ಬದಲಾಗುತ್ತಿರುವ ರಾಜಕಾರಣ ಮತ್ತು ದೇಶದ ಆಂತರಿಕ ಮನಸ್ಥಿತಿಗಳು ಅವರನ್ನು ಬಲುವಾಗಿ ಕಾಡಿರಬಹುದು. ಇಂದು ಅವರ ಪಕ್ಷದಲ್ಲೇ ಇವರು ಅಕ್ಷರಸಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಗಣ್ಯರಾಗಿದ್ದಾರೆ ಎಂದರೆ ಅದು ಸುಳ್ಳಲ್ಲ.

ಅಡ್ವಾಣಿಯವರ ಕೋಟಿ ಕೋಟಿ ಅಭಿಮಾನಿಗಳಲ್ಲಿ ಅವರನ್ನು ರಾಷ್ಟ್ರಪತಿಯಾಗಿ ನೋಡುವ ಹಂಬಲವಿತ್ತು. ಆದರೆ ಅದು ಆಗಲಿಲ್ಲ. ಪರದೆಯ ಹಿಂದೆ ಸರಿದ ವ್ಯಕ್ತಿ ತನ್ನ ಆಪ್ತಮಿತ್ರರನ್ನು ಕಳೆದುಕೊಂಡು ಸಂಸ್ಥಾಪಕ ಮಂಡಳಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದಾರೆ ಭಾರತದ ಈಗಿನ ಭೀಷ್ಮ.

-ಪುನೀತ್ ಜಿ. ಕೂಡ್ಲೂರು, ಮೈಸೂರು

Tags: Ajathashatru Atal JiAtal Bihari VajpayeeAtal Bihari Vajpayee deathBJP BhishmaL K Advani
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇವರ ಮನೆಯಲ್ಲಿ ವಾಜಪೇಯಿ ಫೋಟೋ ಇಟ್ಟು ಪೂಜಿಸಿದ ಅಭಿಮಾನಿ

Next Post

ಪ್ರಕೃತಿ ಶಾಂತಗೊಳಿಸಲು ಪ್ರಕಾಶ್ ಅಮ್ಮಣ್ಣಾಯರಿಂದ ವಿಶೇಷ ದೀಪ ನಮಸ್ಕಾರ

kalpa News

kalpa News

Next Post

ಪ್ರಕೃತಿ ಶಾಂತಗೊಳಿಸಲು ಪ್ರಕಾಶ್ ಅಮ್ಮಣ್ಣಾಯರಿಂದ ವಿಶೇಷ ದೀಪ ನಮಸ್ಕಾರ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL