ಅತ್ಯಂತ ಸುಧೀರ್ಘ ಇತಿಹಾಸ ಹೊಂದಿದ ಪಕ್ಷ ಕಾಂಗ್ರೆಸ್. ದೇಶಕ್ಕಾಗಿ ಅನೇಕ ಬಲಿದಾನಿಗಳು ಇದರೊಳಗೆ ಬಂದು ಹೋದದ್ದಿದೆ. ಅಂತಹ ಒಂದು ಪಕ್ಷವನ್ನು ಉಳಿಸಿಕೊಂಡು ಬಂದ ಪರಂಪರೆಯ ಈ ಪಕ್ಷವನ್ನು ಹಿಗ್ಗಾಮುಗ್ಗಾ ಮಾನಹರಣ ಮಾಡುವ ಈ ರಾಹುಲ್ ಗಾಂಧಿಯನ್ನು ಯಾಕೆ ಬೆಂಬಲಿಸುತ್ತಾರೆ.
ಯಾವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೂ ರಾಹುಲ್ ಗಾಂಧಿಯ ತತ್ವಾದರ್ಶ ಬೇಕು, ನಮ್ಮ ಪೀಳಿಗೆಯು ಇಂತಹ ಗಂಡು ಮಗುವನ್ನು ಪಡೆಯಬೇಕು ಎಂದು ಯೋಚಿಸಲಾರರು ಎಂದೆನಿಸುತ್ತದೆ. ಒಂದು ವೇಳೆ ಯೋಚಿಸಿದರೆ ಅವರು ರಾಹುಲ್ ಗಾಂಧಿಯಂತಹ ಮೂರ್ಖ ಚಿಂತನೆಯವರೇ ಆಗುತ್ತಾರೆ.
ದೇಶದ ಪಕ್ಷಗಳೊಳಗೆ ಭಿನ್ನಾಭಿಪ್ರಾಯಗಳಿರಲಿ. ನರೇಂದ್ರ ಮೋದಿಯವರೊಡನೆ ಎಷ್ಟೇ ದ್ವೇಷ ಇರಲಿ, ಬಿಜೆಪಿಯೊಡನೆ ದ್ವೇಷಗಳೇ ಇರಲಿ. ಹಿಂದುತ್ವದ ಬಗ್ಗೆ ದ್ವೇಷವೇ ಇರಲಿ. ಅದು ಅವರವರ ಮನೋಭಾವನೆಯ ವಿಚಾರ ಎಂದು ಸುಮ್ಮನಾಗುತ್ತೇವೆ. ಆದರೆ ಒಂದು ಪಕ್ಷದ ಪ್ರಧಾನಮಂತ್ರಿ ಎಂದು ಇಂತಹ ಮನುಷ್ಯ ಬಿಂಬಿಸಲ್ಪಟ್ಟಾಗ ಆ ಭಾವನೆಗೆ ಅನುಗುಣವಾಗಿಯಾದರೂ ಕೆಲ ನಿಯಮ ಪಾಲನೆ ಮಾಡಲೇ ಬೇಕು.
ದೇಶ ಚಿಂತನೆ ಅಲ್ಲವೇ ಅಲ್ಲ
ಆಗಾಗ ವಿವಾದಾಸ್ಪದ ಹೇಳಿಕೆ ನೀಡಿ ಈ ದೇಶದಲ್ಲಿ ಮಾತ್ರವಲ್ಲ ಹೊರದೇಶದಲ್ಲೂ ಮಾನಹರಣ ಮಾಡುವುದು ಎಷ್ಟು ಸರಿ ಎಂದು ಕಾಂಗ್ರೆಸ್ಸಿಗರಿಗೆ ಕಾಣುವುದಿಲ್ಲವೇ? ಕಾಣುವುದಿಲ್ಲ ಎಂದರೆ ಕಾಂಗ್ರೆಸ್ಸಿನ ಸಂಪತ್ತಿನ ಆಸೆಗೋಸ್ಕರ, ಅಧಿಕಾರಕ್ಕೋಸ್ಕರವೇ ಬೆಂಬಲಿಸುತ್ತಾರೆಯೇ ವಿನಃ ದೇಶದ ಚಿಂತನೆಯಲ್ಲಿ ಅಲ್ಲವೇ ಅಲ್ಲ ಎಂದು ಹೇಳಬಹುದು.
ಜರ್ಮನಿಯಲ್ಲಿನ ಭಾಷಣವು ಭಾರತವನ್ನು ಹೀನ ಸ್ಥಿತಿಗೆ ತರುವ ವರ್ಣನೆಯಾಗಿದೆ ಮತ್ತು ಐಸಿಸ್ ನಂತಹ ಭಯೋತ್ಪಾದಕರನ್ನು ಬೆಳೆಸಲು ಹೊರಟಂತಿದೆ. ಮೋದಿಯವರ ದ್ವೇಷದಲ್ಲಿ ಭಾರತವನ್ನೇ ಬಲಿಕೊಡುವಂತಹ ಈ ಮನುಷ್ಯ ಭಾರತದ ಪ್ರಧಾನಮಂತ್ರಿಯಾದರೆ ಏನಾದೀತು ಎಂದು ಕಾಂಗ್ರೆಸ್ಸಿನವರೇ ಮೊದಲು ಉತ್ತರಿಸಲಿ. ಈ ದೇಶದ ಒಬ್ಬ ನಾಗರಿಕನಾಗಿ ನಾನು ಇದನ್ನು ಖಂಡಿಸುತ್ತೇನೆ.
ನತದೃಷ್ಠ ಪ್ರಧಾನಿಗಳು ಕಾಂಗ್ರೆಸ್‌ನಲ್ಲಿ ಮಾತ್ರ
ಉದ್ಯೋಗಕ್ಕಾಗಿ ಐಸಿಸ್ ಕಾರ್ಯ ಮಾಡುತ್ತಿದೆ ಅಂದರೆ, ಶಾಸ್ತ್ರಿಯವರ, ಇಂದಿರಾ ಗಾಂಧಿಯವರ, ರಾಜೀವ್ ಗಾಂಧಿಯವರ ಹತ್ಯೆಯೂ ಉದ್ಯೋಗಕ್ಕಾಗಿ ಮಾಡಿದ್ದಾಗಿದೆ ಎಂದಾಯ್ತು. ಹಾಗಾದರೆ ಈ ಉದ್ಯೋಗ ಕೊಟ್ಟವರು ಯಾರು? ಕಣ್ಣು ಮುಚ್ಚಿ ಹೇಳಬಹುದು. ಇವರ ಮಾತಿನ ಪ್ರಕಾರ ಕೊಲೆಮಾಡುವ ಉದ್ಯೋಗ ನೀಡಿದವರು ಕಾಂಗ್ರೆಸ್ಸಿನವರೇ ಆಗಿದ್ದಾರೆ ಎಂದು. ಯಾಕೆಂದರೆ ಈ ದೇಶದ ಪ್ರಧಾನಿಗಳ ಹತ್ಯೆಯಾಗಿದ್ದರೆ ಅದು ಕಾಂಗ್ರೆಸ್ಸಿನಲ್ಲಿ ಮಾತ್ರ. ಶಾಸ್ತ್ರಿ, ಇಂದಿರಾ, ರಾಜೀವ್ ಗಾಂಧಿ ಈ ನತದೃಷ್ಟರು ಈ ಕೊಲೆ ಉದ್ಯೋಗಿಗಳ ಕೈಯಿಂದ ಹತ್ಯೆಯಾದವರು.
ಮಾತಿನಲ್ಲೇ ವ್ಯಕ್ತಿತ್ವ ತಿಳಿಯುತ್ತದೆ
ಮಾತಿನಲ್ಲೇ ಗೊತ್ತಾಗುತ್ತೆ ವ್ಯಕ್ತಿತ್ವ ಎಂದು ನಾನು ಟಿವಿ ಕಾರ್ಯಕ್ರಮದಲ್ಲೇ ಹೇಳಿದ್ದೇನೆ. ನಮಗೆ ಈ ದೇಶದ ಮಾನ್ಯತೆ ಪಡೆದ ಎಲ್ಲಾ ಪಕ್ಷಗಳ ಮೇಲು ಅಗಾಧ ಗೌರವಗಳಿದೆ. ಅದು ನೀಚಸ್ಥಿತಿಗೆ ಹೋಗುವುದನ್ನು ಬಯಸುವುದಿಲ್ಲ. ಬಿಜೆಪಿ ಆಡಳಿತ ಮಾಡಿದ್ದರೂ ಬಲಿಷ್ಟವಾದ, ಪ್ರಾಮಾಣಿಕವಾದ ವಿರೋಧಪಕ್ಷ ಇರಲೇಬೇಕು. ಆದರೆ ಇಂತಹ ಮೂರ್ಖರ ನಾಯಕತ್ವದ ಪಕ್ಷ ಆಡಳಿತವಿದ್ದರೂ, ವಿರೋಧ ಪಕ್ಷದಲ್ಲಿದ್ದರೂ ಫಲ ಶೂನ್ಯ. ಆಡಳಿತ ಮಾಡಿದರೆ ಕೊಳ್ಳೆ ಹೊಡೆಯಬಹುದು. ವಿರೋಧ ಪಕ್ಷದಲ್ಲಿದ್ದರೆ ಕೊಳ್ಳೆ ಹೊಡೆಯುವವರಿಗೆ ಬೆಂಬಲ ನೀಡಬಹುದು.
ಎರಡನೆಯದ್ದಾಗಿ ರಾಹುಲ್ ಗಾಂಧಿಗೆ ಪ್ರಧಾನ ಮಂತ್ರಿಯಾಗುವ ಯಾವ ಯೋಗವೂ ಸದ್ಯಕ್ಕಿಲ್ಲ ಎಂಬುದು ಅವನ ಜಾತಕವೇ ಹೇಳುತ್ತದೆ. ಯಾವುದೋ ಬಕೆಟ್ ಹಿಡಿಯುವ ಜ್ಯೋತಿಷಿಗಳು ಯೋಗ ಇದೆ ಎಂದರೆ ಒಪ್ಪಲಾಗದು. ಜ್ಯೋತಿಷ್ಯ ಯಾಕೆ. ಅವನ ನಿತ್ಯ ನಡತೆಗಳನ್ನು ರಾಜತಾಂತ್ರಿಕರು ನೋಡಿ ವಿಶ್ಲೇಷಣೆ ಮಾಡಬಹುದು. ಹಾಗಾಗಿ ಕಾಂಗ್ರೆಸ್ಸಿಗರೇ ನಿಮಗೆ ನಿಮ್ಮ ಪಕ್ಷದ ಹಿತ ಮುಖ್ಯವಾಗಿದ್ದಲ್ಲಿ ಈ ಕುಟುಂಬವನ್ನು ಹೊರಗಿಟ್ಟು ಪಕ್ಷವನ್ನು ಮುಂದುವರಿಸಿರಿ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post