ಹೌದು… ತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‌ಗೆ ಕರೆ ನೀಡಿದ್ದ ಕಾಂಗ್ರೆಸ್ ಹಾಗೂ ಇತರೇ ಪಕ್ಷಗಳಿಗೆ ಹಾಗೂ ಅತ್ಯಂತ ಪ್ರಮುಖವಾಗಿ ಜೆಡಿಎಸ್‌ಗೆ ಅನಂತಾನಂತ ಧನ್ಯವಾದಗಳು, ಸಾಷ್ಟಾಂಗ ಪ್ರಣಾಮಗಳು…
ಬೆಳಕು ಎನ್ನುವುದಕ್ಕೆ ಬೆಲೆ ಕತ್ತಲೆ ಕಂಡಾಗ ಮಾತ್ರ, ಅಮೃತ ಎನ್ನುವುದಕ್ಕೆ ಬೆಲೆ ವಿಷವಿದ್ದಾಗ ಮಾತ್ರ, ಚಿನ್ನ ಎನ್ನುವುದಕ್ಕೆ ಬೆಲೆ ತುಕ್ಕು ಹಿಡಿದ ಕಬ್ಬಿಣವಿದ್ದಾಗ ಮಾತ್ರ, ಹಾಗೆಯೇ ಮೋದಿ ಎಂಬ ಶಕ್ತಿಗೆ ಬೆಲೆ ಅವರ ಹಿಂಬಾಲಕರಿಂದಲ್ಲ ಅವರ ವಿರೋಧಿಗಳಿಂದಲೇ.
ಯಾವಾಗ ದೇಶದಲ್ಲಿ ಭ್ರಷ್ಟಾಚಾರ, ದಬ್ಬಾಳಿಕೆ, ದೇಶದ್ರೋಹಿಗಳಿಗೆ ಸಹಕಾರಗಳು ಮಿತಿ ಮೀರಿದವೋ ಆಗ ಸಂಕಷ್ಟದಲ್ಲಿದ್ದ ತಾಯಿ ಭಾರತಿಯನ್ನು ರಕ್ಷಿಸಲು ಪ್ರಜ್ವಲಿಸಿ ಬಂದಿದ್ದೇ ನರೇಂದ್ರ ದಾಮೋದರ ದಾಸ್ ಮೋದಿ…
2014ರ ನಂತರ ಭಾರತದ ವರ್ಚಸ್ಸು ಬದಲಾಗುತ್ತಾ ಹೋದಂತೆ, ಭಾರತ ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಾ, ನಮ್ಮೆಲ್ಲರ ಪ್ರಧಾನ ಸೇವಕ ವಿಶ್ವನಾಯಕನಾಗುವತ್ತ ವಿಜೃಂಭಿಸುತ್ತಾ ಇರುವುದು ಕಾಂಗ್ರೆಸ್ ಹಾಗೂ ಪಟಾಲಂ ಪಕ್ಷಗಳಿಗೆ ಕೆಂಡದ ಮೇಲೆ ನಿಂತಂತಾಗಿದೆ. ಆದರೆ, ಮೋದಿ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಯಾವುದೇ ಹಗರಣ ಇಲ್ಲದ್ದಕ್ಕೆ ಈ ದುಷ್ಟಕೂಟ ಆರಿಸಿಕೊಂಡಿದ್ದೇ ಪೆಟ್ರೋಲ್ ಬೆಲೆ ಏರಿಕೆಯ ನೆಪ ಹೂಡಿ, ಭಾರತ್ ಬಂದ್ ಆಚರಣೆ ಮಾಡುವುದು.
ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ವಿರುದ್ಧವಾಗಿ ಕೋಟ್ಯಂತರ ಮೋದಿ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಾಯಿಗೆ ಬಂದಂತೆ ದೂರುತ್ತಿದ್ದಾರೆ. ನಾನು ಆತ್ಮಸಾಕ್ಷಿಯಾಗಿ ಹೇಳುತ್ತೇನೆ ‘ನೀವು ನಿಜಕ್ಕೂ ಮೋದಿ ಭಕ್ತರಾ? ಹಾಗಿದ್ದರೆ ಭಾರತ್ ಬಂದ್ ಮಾಡಿದ್ದಕ್ಕೆ ಕಾಂಗ್ರೆಸ್‌ನ್ನು ಅಭಿನಂದಿಸಿ’…
ಯಾಕೆ ಅಭಿನಂದಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿತೇ? ಉತ್ತರ ಮುಂದಿದೆ ಓದಿ….
- ಮೊಟ್ಟ ಮೊದಲನೆಯದಾಗಿ ಕಾಂಗ್ರೆಸ್ ಕರೆ ನೀಡಿದ್ದ ಬಂದ್ ದೇಶದಲ್ಲಿ ಅರಾಜಕತೆ ಸೃಷ್ಠಿಸಿ, ಮೋದಿಯನ್ನು ಹಣಿಯುವುದೇ ಆಗಿತ್ತು ಎನ್ನುವುದು ಅರಿತಿದ್ದ ಈ ದೇಶದ ಜನ ತಾವಾಗಿಯೇ ಬಂದ್‌ಗೆ ವಾರಕ್ಕೂ ಮೊದಲೇ ವಿರೋಧಿಸಿದ್ದರು. ಜನರ ವಿರೋಧವನ್ನೇ ವಿರೋಧಿಸಿ ಬಂದ್ ಮಾಡಿ ತೊಂದರೆ ಮಾಡಿದ್ದರಿಂದ ಕಾಂಗ್ರೆಸ್ ತನ್ನ ಗೋಮುಖವ್ಯಾಘ್ರತನವನ್ನು ಮತ್ತೊಮ್ಮೆ ದೇಶಕ್ಕೆ ತೋರಿಸಿದೆ. ಇದು ಯಾರಿಗೆ ಲಾಭ ಹೇಳಿ?
- ರಾಜ್ಯದಲ್ಲಿ ಬಂದ್‌ಗೆ ವ್ಯಾಪಕ ವಿರೋಧವಿತ್ತು. ಹೀಗಾಗಿ, ಹೇಗಾದರೂ ಮಾಡಿ ಯಶಸ್ವಿ ಮಾಡಿಸಲೇಬೇಕು ಎಂದು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿಸಿದ್ದನ್ನು ರಾಜ್ಯವೇ ನೋಡಿ ಛೀಮಾರಿ ಹಾಕಿದೆ. ಇದು ಯಾರಿಗೆ ಲಾಭ ಹೇಳಿ?
- ಇನ್ನು, ಹಾನಿಯಾಗಬಹುದು ಎಂಬ ಕಾರಣಕ್ಕೆ ಸಾರಿಗೆ ನಿಗಮದ ಬಸ್‌ಗೆ ರಸ್ತೆಗೆ ಇಳಿಯಲಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ. ಇದು ಯಾರಿಗೆ ಲಾಭ ಹೇಳಿ?
- ಕಾಂಗ್ರೆಸ್‌ನ ಬಲವಂತದ ಬಂದ್‌ನಿಂದಾಗಿ ರಾಜ್ಯ ಸರ್ಕಾರಕ್ಕೆ 190 ಕೋಟಿ ರೂ.(ರಾಜ್ಯದ ಒಟ್ಟಾರೆ ನಷ್ಟ 3400 ಕೋಟಿ ಎನ್ನಲಾಗಿದೆ) ಪ್ರತ್ಯಕ್ಷ ಹಾಗೂ ಪರೋಕ್ಷ ನಷ್ಟವಾಗಿದ್ದನ್ನು ಕರುನಾಡಿಗರು ನೋಡಿದ್ದಾರೆ. ಇದು ಯಾರಿಗೆ ಲಾಭ ಹೇಳಿ?
- ಬಂದ್ ವೇಳೆ 8 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಗೂಂಡಾಗಳನ್ನು ಪೊಲೀಸರು ಬಂಧಿಸಿದ್ದಕ್ಕೆ ಹಲವು ರಾಜ್ಯಗಳು ಸಾಕ್ಷಿಯಾಗಿವೆ. ಈ ಘಟನೆ ಯಾರಿಗೆ ಲಾಭ ಹೇಳಿ?
- ಬಂದ್‌ಗಿಂತಲೂ ಮುನ್ನ ದುಡ್ಡು ಕೊಟ್ಟು ಕರೆತಂದಿದ್ದ ಜನರು ಬಂದ್‌ಗೂ ಮುನ್ನ ಕುಡಿದು ಹಾವಳಿ ಎಬ್ಬಿಸಿದ್ದನ್ನು ದೇಶವೇ ನೋಡಿದೆ. ಇದರ ಲಾಭ ಯಾರಿಗೆ ಹೇಳಿ?
- ರಾಜ್ಯದ ಹಲವು ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಬಡ ವ್ಯಾಪಾರಿಗಳ ಪದಾರ್ಥಗಳನ್ನು ಬಂದ್ ಹೆಸರಿನಲ್ಲಿ ಬೀದಿಗೆ ಚೆಲ್ಲಿ ಗೂಂಡಾಗಿರಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರದರ್ಶಿಸಿದರು. ಇದರ ಲಾಭ ಯಾರಿಗೆ ಹೇಳಿ?
- ಬಿಹಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಂಬುಲೆನ್‌ಸ್ ತಡೆದಿದ್ದರಿಂದ 2 ವರ್ಷದ ಬಾಲಕಿ ಬಲಿಯಾಗಿದ್ದಕ್ಕೆ ಇಡಿಯ ದೇಶವೇ ಕಣ್ಣೀರಿಟ್ಟು, ಕಾಂಗಿ ಗೂಂಡಾಗಳಿಗೆ ಛೀಮಾರಿ ಹಾಕಿದೆ. ಇದರ ಲಾಭ ಯಾರಿಗೆ ಹೇಳಿ?
- ಈ ಪ್ರಾಮಾಣಿಕ ವ್ಯಾಪಾರಿಗಳ ಆಹಾರವನ್ನು ಬೀದಿಗೆ ಚೆಲ್ಲಿ ರಾಕ್ಷಸೀ ಪ್ರವೃತ್ತಿ ಪ್ರದರ್ಶಿಸಿದ ಕಾಂಗಿಗಳ ಕೃತ್ಯ ಯಾರಿಗೆ ಲಾಭ ಹೇಳಿ?
- ಈ ಕೆಳಗಿನ ಚಿತ್ರ ಹಾಗೂ ವೀಡಿಯೋಗಳನ್ನು ನೋಡಿ. ಇದರ ಲಾಭ ಯಾರಿಗೆ ಹೇಳಿ?
ಇಷ್ಟೆಲ್ಲಾ ಓದಿದಿರಿ, ನೋಡಿದಿರಲ್ಲ? ಈಗ ಹೇಳಿ ಇದರ ಲಾಭ ಯಾರಿಗೆ? ಘಂಟಾಘೋಷವಾಗಿ ಹೇಳುತ್ತೇನೆ ಇದರ ಲಾಭ ನರೇಂದ್ರ ದಾಮೋದರ ದಾಸ್ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಮ್ಮೆಲ್ಲರ ಪ್ರಯತ್ನಕ್ಕೆ ಲಾಭವೇ ಹೊರತೂ ಕಾಂಗ್ರೆಸ್‌ಗಲ್ಲ…
ಕೆರೆ ಮೇಲೆ ಮುನಿಸಿಕೊಂಡು ಅಂಡು ತೊಳೆದುಕೊಳ್ಳದೇ ಕುಳಿತರೆ ನಾರುವುದು ಯಾರದ್ದು? ಹಾಗೆಯೇ, ಪ್ರತಿಬಾರಿಯೂ ಮುಠ್ಠಾಳತನವನ್ನೇ ಪ್ರದರ್ಶನ ಮಾಡುವ ಕಾಂಗ್ರೆಸ್ ಮೋದಿ ಮೇಲಿನ ಜಿದ್ದಿಗೆ ತನ್ನ ಬುಡಕ್ಕೆ ತಾನೇ ಬೆಂಕಿ ಇಟ್ಟುಕೊಂಡಿದೆ.
ಬಂದ್ ಮಾಡುವುದು ಕಾಂಗ್ರೆಸ್‌ನ ಉದ್ದೇಶವಾಗಿರಲಿಲ್ಲ. ಬದಲಾಗಿ ಬಂದ್ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಠಿಸಿ, ಅದನ್ನು ಮೋದಿ ತಲೆಗೆ ಕಟ್ಟಿ, ಅಧಿಕಾರದಿಂದ ಇಳಿಸಬೇಕು ಎನ್ನುವುದು.
ಆದರೆ, ನನ್ನ ಭಾರತ ಈಗ ಬದಲಾಗಿದೆ, ನನ್ನ ಭಾರತೀಯನೂ ಸಹ ಬದಲಾಗಿದ್ದೇನೆ. ಈಗ ದೇಶಕ್ಕಾಗಿ ತನ್ನ ವೈಯಕ್ತಿಕ ಜೀವನವನ್ನೂ ಸಹ ಮಾರ್ಪಾಟು ಮಾಡಿಕೊಳ್ಳುವ, ಒಂದಷ್ಟು ತ್ಯಾಗಗಳನ್ನು ಮಾಡುವ ಮನಃಸ್ಥಿತಿಯನ್ನು ಬೆಳೆಸಿಕೊಂಡಿದ್ದಾನೆ… ಹೀಗಾಗಿ, ಕಾಂಗ್ರೆಸ್ ಹಳೆಯ ತುಕಾಲಿ ರಾಜಕೀಯ ಆಟಗಳು ಈಗ ನಡೆಯುವುದಿಲ್ಲ.
ಹೀಗಾಗಿ, ಭಾರತ್ ಬಂದ್ ಮಾಡುವ ಮೂಲಕ ಕಾಂಗ್ರೆಸ್ ತನ್ನ ಕೊನೆಯ ಮೊಳೆಯನ್ನು ತಾನೇ ಹೊಡೆದುಕೊಂಡಿದೆ… ಇನ್ನೊಂದೇ ಕೆಲಸ ಬಾಕಿ ಇರುವುದು… ಅದಕ್ಕೆ ಅದರ ಅಂತಿಮ ವಿಧಿವಿಧಾನಗಳನ್ನು ಪೂರೈಸುವುದು. ಅದಕ್ಕೆ 2019ರಲ್ಲಿ ವೇದಿಕೆ ಸಿದ್ದವಾಗುತ್ತಿದೆ.
ಈ ಹಂತದಲ್ಲೇ ಸ್ನೇಹಿತರೇ ನಮ್ಮೆಲ್ಲರ ಜವಾಬ್ದಾರಿ ನಿರ್ವಹಣೆ ಮುಖ್ಯವಾಗಿರುವುದು… ಹೇಗೂ ತನ್ನ ಕೊನೆಯ ಮೊಳೆಯನ್ನು ಕಾಂಗ್ರೆಸ್ ತಾನೇ ಹೊಡೆದುಕೊಂಡಿದೆ. ಉಳಿದ ಕೊನೆಯ ವಿಧಿವಿಧಾನಗಳನ್ನು ಸಂತೋಷ, ಧೈರ್ಯ, ತ್ಯಾಗ ಹಾಗೂ ದೇಶಪ್ರೇಮದಿಂದ ನಿರ್ವಹಿಸಿ, ಐತಿಹಾಸಿಕ ಪಕ್ಷವನ್ನು ಕರಾಳ ಇತಿಹಾಸದ ಪುಟಗಳನ್ನು ಸೇರಿಸೋಣ… ನರೇಂದ್ರ ದಾಮೋದರ ದಾಸ್ ಮೋದಿ ಅವರನ್ನು ಮೊತ್ತೊಮ್ಮೆ ಪ್ರಧಾನಿ ಮಾಡೋಣ… ಅಟಲ್ ಜೀ ಕಂಡ ಭಾರತದ ಕನಸನ್ನು ಎಲ್ಲರೂ ಒಟ್ಟಾಗಿ ನನಸು ಮಾಡೋಣ…
ಈಗ ಹೇಳಿ ಕಾಂಗ್ರೆಸ್ ನಡೆಸಿದ ಬಂದ್ ಲಾಭ ಯಾರಿಗೆ?
ಕೊನೆಯಲ್ಲಿ ಒಂದೇ ಒಂದು ಮಾತನ್ನು ಆಣೆ ಮಾಡಿ ಹೇಳುತ್ತೇನೆ… 2019ರಲ್ಲಿ ಭಾರತೀಯರ ನಿರ್ಣಯ ಹೇಗಿರಬೇಕು ಎಂದರೆ
‘ಹೈಪವರ್ ಕರೆಂಟ್ ವಯರ್ ಮೇಲೆ ಸೂಸೂ ಮಾಡಿದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇರಬೇಕು’…
(ಅರಿಕೆ: ಕಾಂಗ್ರೆಸ್ ನಡೆಸಿದ ಬಂದ್ ಒಂದು ದಿನವಾಗಿದ್ದರೂ ಕೋಟ್ಯಂತರ ಜನರಿಗೆ ತೊಂದರೆಯಾಗಿದ್ದು, ಲಕ್ಷಾಂತರ ಬಡ ವ್ಯಾಪಾರಿಗಳ ಒಂದು ದಿನ ನಷ್ಟ ತುಂಬಿಕೊಳ್ಳಲು ತಿಂಗಳುಗಳೇ ಬೇಕು. ಬಿಹಾರದಲ್ಲಿ ಪುಟ್ಟ ಕಂದಮ್ಮವೊಂದು ನಮ್ಮನ್ನು ಬಿಟ್ಟು ಹೋಗಿದ್ದು ತೀರಾ ದುಃಖದ ಸಂಗತಿ.. ಈ ಲೇಖನದಲ್ಲಿ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ಇದರ ಲಾಭ ಯಾರಿಗೆ ಹೇಳಿ? ಎಂದು ಹೇಳಿರುವುದು ರಾಜಕೀಯ ಲಾಭದ ಉದ್ದೇಶದಿಂದಲ್ಲ. ಯಾಕೆಂದರೆ ನಾನು ರಾಜಕೀಯ ವ್ಯಕ್ತಿಯಲ್ಲ… ಇದರ ಲಾಭ ಯಾರಿಗೆ ಹೇಳಿ? ಎಂದು ವ್ಯಂಗ್ಯ ಮಿಶ್ರಿತವಾಗಿ ಹೇಳಿ ಕಾಂಗ್ರೆಸ್‌ನ ಕರಾಳಕೃತ್ಯವನ್ನು ತೆರೆದಿಡುವುದೇ ಆಗಿದೆ. ಇಲ್ಲಿ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ?)
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post