ವಾರಣಾಸಿ: ತಮ್ಮ ಜನ್ಮದಿನದ ಉಡುಗೊರೆಯನ್ನಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಬಂಪರ್ ಬಹುಮಾನ ಘೋಷಣೆ ಮಾಡಿದ್ದು, ಬರೋಬ್ಬರಿ 550 ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ವಾರಣಾಸಿಯಲ್ಲಿ ಇಂದು ನಡೆದ ಭಾರೀ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ, 550 ಕೋಟಿ ರೂ. ಮೊತ್ತದ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿರುವುದು ಇಂದು ನನಗೆ ಸಂತೋಷ ತಂದಿದೆ. ಈ ಅನುದಾನದಲ್ಲಿ ಕೇವಲ ವಾರಣಾಸಿ ಮಾತ್ರವಲ್ಲ ಬದಲಾಗಿ ಸನಿಹ ಇರುವ ಸ್ಥಳಗಳ ಅಭಿವೃದ್ಧಿಯೂ ಸಹ ಆಗಲಿದೆ ಎಂದಿದ್ದಾರೆ.
Inaugurating key development projects in Kashi. Watch. https://t.co/0jFvIq0RTi
— Narendra Modi (@narendramodi) September 18, 2018
ವಾರಣಾಸಿಯ ಮೂಲ ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಯಾವುದೇ ರೀತಿಯಲ್ಲೂ ಸಹ ಧಕ್ಕೆ ಬಾರದಂತೆ ಅಭಿವೃದ್ಧಿ ಮಾಡಲು ಸಂಪೂರ್ಣವಾಗಿ ಪ್ರಯತ್ನಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿನ ಸಂಸ್ಕೃತಿಗೆ ಯಾವುದೇ ಕಾರಣಕ್ಕೆ ಧಕ್ಕೆ ಬಾರಲು ನಾವು ಬಿಡುವುದಿಲ್ಲ ಎಂದಿದ್ದಾರೆ.
Discussion about this post