ಹರಿಯಾಣ: ಪಾಪಿ ಪಾಕಿಸ್ಥಾನದ ಯೋಧರಿಂದ ಅತ್ಯಂತ ಬರ್ಬರವಾಗಿ ಹತ್ಯೆಗೀಡಾಗಿ, ವೀರಸ್ವರ್ಗ ಸೇರಿದ ಬಿಎಸ್‌ಎಫ್ ಯೋಧನ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಇಂದು ನೆರವೇರಿಸಲಾಯಿತು.
ಜಮ್ಮು ಕಾಶ್ಮೀರದ ರಾಮಘಡ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧ ನರೇಂದರ್ ಸಿಂಗ್ ಅವರನ್ನು ಪಾಕಿಸ್ಥಾನ ಯೋಧರು ಗುಂಡಿಕ್ಕಿ ಕೊಂದು, ಆನಂತರ ಅವರ ಕತ್ತು ಸೀಳಿ, ಕಣ್ಣು ಕಿತ್ತು ಭೀಕರವಾಗಿ ಹತ್ಯೆ ಮಾಡಿದ್ದರು.
ನರೇಂದರ್ ಅವರ ಪಾರ್ಥಿವ ಶರೀರವನ್ನು ಇಂದು ಅವರ ಹುಟ್ಟೂರಾದ ಹರಿಯಾಣದ ಸೋನಿಪಥ್‌ಗೆ ತಂದು ಸಕಲ ಸರ್ಕಾರಿ ಗೌರವ ಹಾಗೂ ಸೇನಾ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿ, ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಸಾವಿರಾರು ಸಾರ್ವಜನಿಕರು ಗಲಿದ ಯೋಧನ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು.
Discussion about this post