ನವದೆಹಲಿ: ಭೀಮಾ ಕೊರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂಬಂತೆ ಸಾಮಾಜಿಕ ಹೋರಾಟಗಾರರ ಬಂಧನದ ವಿಷಯವಾಗಿ ಮಧ್ಯಪ್ರವೇಶಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಐವರು ಮಾನವ ಹಕ್ಕು ಕಾರ್ಯಕರ್ತರು ಮತ್ತೆ ನಾಲ್ಕು ವಾರಗಳವರೆಗೆ ಗೃಹ ಬಂಧನದಲ್ಲಿಯೇ ಉಳಿಯಲಿದ್ದಾರೆ.
ವರ ವರ ರಾವ್ ಸೇರಿದಂತೆ ಒಟ್ಟು 5 ಸಾಮಾಜಿಕ ಹೋರಾಟಗಾರರು ಬಂಧನಕ್ಕೊಳಗಾಗಿರುವುದನ್ನು ರೋಮಿಲಾ ಥಾಪರ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಬಂಧನದ ವಿಷಯವಾಗಿ ಮಧ್ಯಪ್ರವೇಶಿಸುವುದಕ್ಕೆ ನಿರಾಕರಿಸಿದೆ.
ಇನ್ನು, ಭಿನ್ನಾಭಿಪ್ರಾಯ ಹೊಂದಿರುವ ಸಾಮಾಜಿಕ ಕಾರ್ಯಕರ್ತರು ಎಂಬ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿಲ್ಲ ಎಂದಿರುವ ಕೋರ್ಟ್, ಮೇಲ್ನೋಟಕ್ಕೆ ಅವರು ನಿಷೇಧಿತ ಸಿಪಿಐ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದರ ಬಗ್ಗೆ ಕೆಲವು ಸಾಕ್ಷ್ಯಗಳಿದ್ದವು ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದಿದೆ.
Discussion about this post