ಬೆಂಗಳೂರು: ನೆರೆ ಸಂತ್ರಸ್ತರಿಗೆ ರಾಜ್ಯದ ಮುಜರಾಯಿ ದೇವಾಲಯಗಳ ಹಣದ ಮೇಲೆ ಕೈಯಿಟ್ಟಿದ್ದ ಎಚ್.ಡಿ. ಕುಮಾರಸ್ವಾಮಿ ನೇತೃತ್ವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮಜರಾಯಿ ದೇಗುಲಗಳೆಲ್ಲವೂ ಇಂತಿಷ್ಟೇ ಹಣ ಸಂದಾಯ ಮಾಡಬೇಕು ಎಂಬ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಭಾರತೀಯ ಪುನರುತ್ಥಾನ ಟ್ರಸ್ಟ್ ನ ಗಿರೀಶ್ ಭಾರದ್ವಾಜ್, ಹೇಮಾ ನಾಯ್ಡು ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿದ್ದು, ಇದು ಹೆಚ್ಚಾಗಿ ಸುದ್ದಿಯಾಗಿದೇ ಇದ್ದದ್ದು ಮಾತ್ರ ವಿಪರ್ಯಾಸ.
ಪ್ರಕರಣ ಕುರಿತಂತೆ ವಿಚಾರಣೆ ನಡೆಸಿರುವ ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ, ರಾಜ್ಯ ಸರ್ಕಾರದ ಕ್ರಮದ ವಿರುದ್ದ ತೀವ್ರ ಟೀಕೆ ವ್ಯಕ್ತಪಡಿಸಿದೆ.
ನೆರೆ ಸಂತ್ರಸ್ತರಿಗೆ ಪಡೆದ ಹಣವನ್ನು ಈಗ ಅದಕ್ಕೆ ಬಳಸಬೇಕು. ಪರಿಹಾರ ಬಳಕೆ ಸಂಬಂಧ ಪ್ರಮಾಣಪತ್ರ ಸಲ್ಲಿಸಬೇಕು ಎಂದಿರುವ ನ್ಯಾಯಾಧೀಶರು, ಸರ್ಕಾರ ಇನ್ನು ಮುಂದೆ ಒತ್ತಡ ಹೇರಿ ಹಣ ತೆಗೆದುಕೊಳ್ಳಬಾರದು ಎಂದು ತಾಕೀತು ಮಾಡಿದೆ.
ಸರ್ಕಾರದ ಆದೇಶದ ಮೇರೆಗೆ ರಾಜ್ಯದ 81 ಅಧಿಸೂಚಿತ ದೇವಾಲಯಗಳ 12.30 ಕೋಟಿ ರೂ. ಹುಂಡಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾವಣೆ ಮಾಡಬೇಕಿತ್ತು. ಈಗಾಗಲೇ ಮುಜರಾಯಿ ಇಲಾಖೆ ವ್ಯಾಪ್ತಿಯ 74 ದೇವಾಲಯಗಳಿಂದ ಆ.30ರ ಒಳಗಾಗಿ 12.23 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಗ್ರಹಿಸಿದೆ. ಇದೀಗ ಹೈಕೋರ್ಟ್ ಬೀಸಿದ ಚಾಟಿಗೆ ಹೆದರಿದ ರಾಜ್ಯ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಆದೇಶವನ್ನು ಮಾರ್ಪಾಟುಮಾಡಿದೆ.
ದೇವಾಲಯಗಳಿಗೆ ಇಂತಿಷ್ಟೇ ಹಣ ಕೊಡಬೇಕು ಎಂದು ಎಲ್ಲೂ ಇಲ್ಲ. ದಾನ ಮಾಡಿದ ಮೇಲೆ ಮತ್ತೆ ಅಪೇಕ್ಷಿಸುವುದು ಭಕ್ತರ ತಪ್ಪು. ದೇವಾಲಯಗಳಿಗೆ ನೀವು ದೇಣಿಗೆ ನೀಡಿದ್ದೀರೋ, ಠೇವಣಿ ಇಟ್ಟಿದ್ದೀರೋ ಎಂದು ವಕೀಲರಿಗೆ ಮುಖ್ಯನ್ಯಾಯಮೂರ್ತಿಗಳು ಪ್ರಶ್ನಿಸಿದರು.
Discussion about this post