ಭದ್ರಾವತಿ: ಹಳೇನಗರದ ತಾಲೂಕು ಕಛೇರಿ ರಸ್ತೆಯ ನಿರ್ಮಲ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಕೈಗೊಳ್ಳಲಾಗಿರುವ ನಗರೋತ್ಥೋನ ಯೋಜನೆಯ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಗುರುವಾರ ಅಧಿಕಾರಿಗಳು ಪರಿಶೀಲಿಸಿದರು.
ನಗರಸಭೆ ಕೈಗೆತ್ತಿಕೊಂಡಿರುವ 29 ಕೋಟಿ ರೂ ವೆಚ್ಚದ ಅಭಿವೃದ್ದಿ ಕಾಮಗಾರಿಗಳ ಪ್ಯಾಕೇಜ್ ಪೈಕಿ ಹಾಳು ಬಿದ್ದಿದ್ದ ಹಾಗು ಕಿಸ್ಕಿಂದ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸಿ ಅಭಿವೃದ್ದಿ ಮಾಡಲಾಯಿತು.
ಕಾಮಗಾರಿಯ ಗುಣಮಟ್ಟ ಪರಿಶೀಲಿಸಲು ಸಂಸ್ಥೆಯ ಉನ್ನತ ಅಧಿಕಾರಿಗಳಾದ ಮುನಿರಾಮರೆಡ್ಡಿ, ವೀರಣ್ಣ, ನಗರಸಭೆಯ ಸಹಾಯಕ ಕಾರ‌್ಯಪಾಲಕ ಇಂಜಿನಿಯರ್ ಶಿವಲಿಂಗ ಮುಂತಾದ ಅಧಿಕಾರಿಗಳ ಸಮಕ್ಷಮ ಗುಣಮಟ್ಟ ಪರಿಶೀಲನೆ ನಡೆಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರು ಈ ಗುಣಮಟ್ಟ ಪರಿಶೀಲನೆ ಕಾರ್ಯವನ್ನು ಆಶ್ಚರ್ಯ ಚಕಿತವಾಗಿ ವೀಕ್ಷಿಸಿದರು. ಅಲ್ಲದೆ ನಗರದಲ್ಲಿ ಹಿಂದೆಂದು ಇಂತಹ ಪರಿಶೀಲನೆ ಕಾರ್ಯ ನಡೆದಿದ್ದು ಕಂಡು ಬಂದಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
















