ಶ್ರೀನಗರ: ಕಣಿವೆ ರಾಜ್ಯದ ರಾಜಧಾನಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ನ್ಯಾಶನಲ್ ಕಾನ್ಫರೆನ್‌ಸ್ ಪಾರ್ಟಿಯನ್ನು ಟಾರ್ಗೆಟ್ ಮಾಡಿ, ಗುಂಡಿನ ದಾಳಿ ನಡೆಸಿದ್ದಾರೆ.
ಇಂದು ಮುಂಜಾನೆಯಿಂದಲೇ ದಾಳಿ ನಡೆಸಿದ್ದು, ಉಗ್ರರ ಗುಂಡಿಗೆ ಇಬ್ಬರು ನಾಗರಿಕರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳ ಗುಂಡಿಗೆ ಓರ್ವ ಉಗ್ರ ಗಾಯಗೊಂಡಿದ್ದಾನೆ.
ಈ ಕುರಿತಂತೆ ಸ್ಥಳೀಯ ಅಧಿಕಾರಿಗಳು ಮಾತನಾಡಿದ್ದು, ಉಗ್ರರ ಗುಂಡಿಗೆ ಬಲಿಯಾಗಿರುವ ಇಬ್ಬರು ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಬೇಕಿದೆ ಎಂದಿದ್ದಾರೆ.
ಎನ್‌ಸಿಪಿಯನ್ನು ಟಾರ್ಗೆಟ್ ಮಾಡಿ ಉಗ್ರರು ದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ.. ಇದೇ ಜುಲೈನಲ್ಲಿ ಇದೇ ರೀತಿ ದಾಳಿ ನಡೆಸಿ, ಭದ್ರತಾ ಪಡೆಗಳ ಮೇಲೂ ಸಹ ದಾಳಿ ನಡೆಸಿದ್ದರು.
Discussion about this post