ನವದೆಹಲಿ: ಸುಮಾರು 36 ಸಾವಿರ ಕೋಟಿ ರೂ ವೆಚ್ಚದ ಎಸ್-ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆ ಖರೀದಿಸಲು ರಷ್ಯಾದೊಂದಿಗೆ ಇಂದು ಭಾರತ ಸರ್ಕಾರ ಅಧಿಕೃತವಾಗಿ ಸಹಿ ಹಾಕಿದ್ದು, ದೇಶದ ರಕ್ಷಣಾ ವ್ಯವಸ್ಥೆಗೆ ಆನೆ ಬಲ ಬಂದಂತಾಗಿದೆ.
ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದು, ಈ ವೇಳೆ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಅಲ್ಲದೇ, ಇದು ಮಾತ್ರವಲ್ಲದೇ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ.
Welcome to India, President Putin.
Looking forward to our deliberations, which will further enhance India-Russia friendship. @KremlinRussia_E pic.twitter.com/IlGwRrXgAK
— Narendra Modi (@narendramodi) October 4, 2018
ಇನ್ನು, ರಷ್ಯಾದ ಸೈಬೀರಿಯಾ ಬಳಿಯಿರುವ ನೊವೊಸಿಬಿರ್ಸ್‌ಕ್ ನಲ್ಲಿ ಭಾರತೀಯ ಮೇಲ್ವಿಚಾರಣಾ ಕೇಂದ್ರವನ್ನು ನಿರ್ಮಿಸುವ ಕುರಿತಂತೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ರಷ್ಯಾದಿಂದ ಸಮರ ಸಾಮಾಗ್ರಿಗಳನ್ನು ಖರೀಸಿದ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿತ್ತು. ಒಂದು ವೇಳೆ ರಷ್ಯಾದಿಂದ ಎಸ್-400 ಟ್ರಯಂಫ್ ವ್ಯವಸ್ಥೆ ಖರೀದಿಗೆ ಭಾರತ ಮುಂದಾದಲ್ಲಿ ಅದರ ಮೇಲೂ ದಿಗ್ಬಂಧನ ಹೇರುವ ಕುರಿತು ಪರಿಶೀಲನೆ ನಡೆಸುವುದಾಗಿ ಈ ಹಿಂದೆ ಅಮೆರಿಕ ಎಚ್ಚರಿಕೆ ನೀಡಿತ್ತು. ಆದರೆ, ಈ ಒಪ್ಪಂದಕ್ಕೆ ಅಮೆರಿಕಾದಿಂದ ವಿಶೇಷ ವಿನಾಯ್ತಿ ಪಡೆಯುವುದಾಗಿ ಭಾರತ ಹೇಳಿತ್ತು.
Добро пожаловать в Индию, президент Путин! Желаю Вам плодотворного пребывания в Индии. С нетерпением жду наших переговоров, которые несомненно укрепят дружбу между Индией и Россией. @KremlinRussia pic.twitter.com/cEW4y8sDJr
— Narendra Modi (@narendramodi) October 4, 2018
ಇದರ ಪರಿಣಾಮವಾಗಿ ಸುಮಾರು ರೂ.40 ಸಾವಿರ ಕೋಟಿ ಮೌಲ್ಯದ ಎಸ್-400 ಏರ್‌ಡಿಫೆನ್‌ಸ್ ಸಿಸ್ಟಂ ಖರೀದಿಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು.
ಯಾವುದೇ ಒಪ್ಪಂದವು ಅಮೆರಿಕಾ ಅಥವಾ ಅದರ ಮೈತ್ರಿ ದೇಶಗಳ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುವುದಿಲ್ಲ. ಖರೀದಿದಾರರು ರಕ್ಷಣಾ ಉಪಕರಣಗಳ ಆಮದು ಪ್ರಮಾಣ ಕಡಿಮೆ ಮಾಡುತ್ತಿದ್ದರೆ ಮತ್ತು ರಷ್ಯಾದ ಮೇಲೆ ಅವಲಂಬನೆಯಿಂದ ಬಿಡಿಸಿಕೊಳ್ಳುತ್ತಿದಾದರೆ ಎನ್ನುವ ಖಾತ್ರಿ ಇದ್ದರೆ, ಅಮೆರಿಕಾದ ಅಧ್ಯಕ್ಷರು ದಿಗ್ಬಂಧನದಿಂದ ರಿಯಾಯ್ತಿ ಕೊಡಬಹುದಾಗಿದೆ. ಭಾರತ ಈ ಮೂರು ಷರತ್ತುಗಳನ್ನು ಪೂರೈಸುವುದರಿಂದ ಭಾರತಕ್ಕೆ ಅಮೆರಿಕ ಆರ್ಥಿಕ ದಿಗ್ಬಂಧನದಿಂದ ರಿಯಾಯ್ತಿ ನೀಡಬಹುದು ಎಂಬ ಆಶಾಭಾವನೆ ವ್ಯಕ್ತವಾಗತೊಡಗಿವೆ.
Discussion about this post