ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲು ಹತ್ತುವಾಗ ಕಾಲು ಜಾರಿ ರೈಲಿನಡಿಗೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರ ಜೀವವನ್ನು ರೈಲ್ವೆ ರಕ್ಷಣಾ ಪಡೆಯ #RailwayProtectionForce ಪೋಸ್ಟ್ ಕಮಾಂಡರ್ ಬಿ.ಕೆ. ಪ್ರಕಾಶ್ ಅವರು ರಕ್ಷಿಸಿದ್ದು, ಇವರ ಈ ಸಾಹಸ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಶಿವಮೊಗ್ಗ #Shivamogga ಟೌನ್ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೈಲ್ವೆ ರಕ್ಷಣಾ ಪಡೆಯ ಪೋಸ್ಟ್ ಕಮಾಂಡರ್ ಬಿ.ಕೆ. ಪ್ರಕಾಶ ಅವರು ಆಪರೇಷನ್ ಜೀವನ್ ರಕ್ಷಾ’ ಅಡಿಯಲ್ಲಿ ಪ್ರಯಾಣಿಕರ ಜೀವ ರಕ್ಷಿಸಿ ಶ್ಲಾಘನೀಯ ಕಾರ್ಯ ನಿರ್ವಹಿಸಿದ್ದಾರೆ.
Also Read>> ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 10 ಸಾವಿರ ಭಾರತ್ ಜೋಡೋ ಯೂಥ್ ಕ್ಲಬ್ | ಸಿಎಂ ಶಿವಕುಮಾರ್ ಘೋಷಣೆ
ಮೇ 31ರಂದು ಸಂಜೆ ಸುಮಾರು 4:48 ಗಂಟೆಗೆ, ರೈಲು ಸಂಖ್ಯೆ 16205 ಶಿವಮೊಗ್ಗ ಟೌನ್ ರೈಲು ನಿಲ್ದಾಣದ ಪ್ಲಾಟ್ ಫಾರಂ ಸಂಖ್ಯೆ 1ರಿಂದ ಹೊರಟಿತ್ತು. ಈ ವೇಳೆ ಒಬ್ಬ ಪುರುಷ ಪ್ರಯಾಣಿಕ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿದರು. ರೈಲು ಹತ್ತುವಾಗ ಅವರು ಕಾಲು ಜಾರಿ ಸಮತೋಲನ ಕಳೆದುಕೊಂಡು ರೈಲು ಮತ್ತು ಪ್ಲಾಟ್ ಫಾರಂ ನಡುವಿನ ಜಾಗಕ್ಕೆ ಬೀಳುವ ಅಪಾಯದ ಸ್ಥಿತಿಗೆ ತಲುಪಿದರು.
ಅದೇ ಸಮಯದಲ್ಲಿ ಪ್ಲಾಟ್ ಫಾರಂ ಸಂಖ್ಯೆ 1ರಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಆರ್’ಪಿಎಫ್ ಪೋಸ್ಟ್ ಕಮಾಂಡರ್ ಬಿ.ಕೆ. ಪ್ರಕಾಶ ಅವರು ಈ ಘಟನೆ ಗಮನಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವರು, ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಪ್ರಯಾಣಿಕರನ್ನು ಹಿಡಿದು ಸುರಕ್ಷಿತವಾಗಿ ರೈಲಿನ ಬೋಗಿಯೊಳಗೆ ತಳ್ಳಿದರು. ಇದರಿಂದ ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿ, ಪ್ರಯಾಣಿಕರ ಜೀವ ಉಳಿಯಿತು.
ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿತು. ರೈಲು ಈಗಾಗಲೇ ನಿಲ್ದಾಣವನ್ನು ಬಿಟ್ಟಿದ್ದರಿಂದ ಆ ಪ್ರಯಾಣಿಕರ ವಿವರಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.
Also Read>> ರಾಜ್ಯ ವಿಧಾನ ಪರಿಷತ್ ಚುನಾವಣೆ | 4 ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ
ಬಿ.ಕೆ. ಪ್ರಕಾಶ ಅವರು ತೋರಿದ ಜಾಗರೂಕತೆ, ತಕ್ಷಣದ ಕಾರ್ಯಪ್ರವೃತ್ತಿ, ಧೈರ್ಯ ಮತ್ತು ಕರ್ತವ್ಯನಿಷ್ಠೆ ಶ್ಲಾಘನೀಯವಾಗಿದೆ. ಅವರ ಈ ಕಾರ್ಯವು ಆಪರೇಷನ್ ಜೀವನ್ ರಕ್ಷಾ’ ಅಭಿಯಾನದ ಉದ್ದೇಶವಾದ ಪ್ರಯಾಣಿಕರ ಜೀವ ರಕ್ಷಣೆ ಮತ್ತು ಅಪಘಾತ ತಡೆಗೆ ಉತ್ತಮ ಉದಾಹರಣೆಯಾಗಿದೆ.
ಪ್ರಯಾಣಿಕರ ಜೀವವನ್ನು ರಕ್ಷಿಸುವಲ್ಲಿ ತೋರಿದ ಅವರ ಆದರ್ಶ ಸೇವೆಯನ್ನು ರೈಲ್ವೆ ರಕ್ಷಣಾ ಪಡೆ ಹೃತ್ಪೂರ್ವಕವಾಗಿ ಪ್ರಶಂಸಿಸಿ, ಅವರ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವವನ್ನು ಮೆಚ್ಚಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್




















