ನವದೆಹಲಿ: ಕೋಟ್ಯಂತರ ಹಿಂದೂಗಳ ಆರಾಧ್ಯ ದೈವವಾದ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣ ಅಯೋಧ್ಯೆಯಲ್ಲಿಯೇ ಆಗುವ ಸಾಧ್ಯತೆಗಳು ದಟ್ಟವಾಗಿರುವ ಬೆನ್ನಲ್ಲೇ, ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆ ಎಂದು ಮುಸ್ಲಿಂ ಪ್ರಭಾವಿ ಮುಖಂಡರೊಬ್ಬರು ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ.
ಈ ಕುರಿತಂತೆ ರಾಷ್ಟ್ರೀಯ ಹಿಂದೀ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಬಾಬರ್ ವಂಶಸ್ತ ಯಾಕೂವ್ ಹಬೀಬುದ್ದೀನ್ ತುಸ್ಸಿ ಅವರೇ ಈ ಘೋಷಣೆ ಮಾಡಿದ್ದು, ಇದು ಈಗ ತೀವ್ರ ಸಂಚಲನ ಸೃಷ್ಠಿಸಿದೆ.
ಇತ್ತೀಚೆಗೆ ಯಾಕೂವ್ ಗಂಗಾ ಆಶ್ರಮಕ್ಕೆ ತೆರಳಿ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರನ್ನು ಭೇಟಿಯಾಗಿ, ಚರ್ಚೆ ನಡೆಸಿದ್ದಾನೆ. ಈ ವೇಳೆ ಮಾತನಾಡಿರುವ ಯಾಕೂವ್, ಒಂದು ವೇಳೆ ಸುಪ್ರೀಂ ಕೋರ್ಟ್ ತೀರ್ಪು ಹಿಂದೂಗಳ ಪರವಾಗಿ ಬಂದು, ಮಂದಿರ ನಿರ್ಮಾಣ ಕಾರ್ಯ ಆರಂಭವಾದರೆ, ನಮ್ಮ ಮನೆತನದ ವತಿಯಿಂದ ಚಿನ್ನದ ಇಟ್ಟಿಗೆಯೊಂದನ್ನು ಕೊಡುಗೆಯಾಗಿ ನೀಡುತ್ತೇವೆ ಎಂದಿದ್ದಾನೆ.
ಇಬ್ಬರ ನಡುವೆ ಆಯೋಧ್ಯೆಯ ವಿವಾದಿತ ಜಾಗದ ಕುರಿತಾದ ವಿಚಾರವಾಗಿ ವಿಸ್ತಾರವಾದ ಮಾತುಕತೆ ನಡೆದಿದೆ. ಬಹಳಷ್ಟು ದಿನಗಳಿಂದ ಶಂಕರಾಚಾರ್ಯರನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿದ್ದೆ ಹಾಗು ಇಂದು ಅವರನ್ನ ಭೇಟಿಯಾಗುವ ಸೌಭಾಗ್ಯ ಒದಗಿ ಬಂತು ಎಂದು ಯಾಕೂಬ್ ಹೇಳಿದ್ದಾನೆ.
ಶಂಕರಾಚಾರ್ಯ ಅವರೂ ಕೂಡ ಯಾಕೂಬ್ ಜೊತೆ ನಡೆದ ಚರ್ಚೆಯ ಬಳಿಕ ಮಾತನಾಡಿದ್ದು, ಈಗ ಪರಸ್ಪರ ವಿರೋಧ ಹಾಗೂ ಚರ್ಚೆಗಳ ಬಳಿಕ ಈ ಸಮಸ್ಯೆ ಸಮಾಪ್ತಿಯಾಗಬೇಕು ಎಂದಿದ್ದಾರೆ.
ಯಾಕೂವ್ ನೀಡಿರುವ ಈ ಹೇಳಿಕೆ ಈಗ ಹಿಂದೂಗಳಲ್ಲಿ ಸಂಚಲನ ಸೃಷ್ಠಿಸಿದ್ದರೆ, ಎಡಪಂಥೀಯರು ಹಾಗೂ ಮುಸ್ಲಿಂ ಮುಖಂಡರಿಗೆ ಮುಖಭಂಗ ಉಂಟು ಮಾಡಿದ್ದು, ತಮ್ಮ ಹಿನ್ನಡೆಗೆ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
Discussion about this post