ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಲೋಕಸಭಾ ಉಪ ಚುನಾವಣೆ ಸಂಬಂಧಿಸಿದಂತೆ ಯಾವುದೇ ಲೋಪ ದೋಷಗಳಾಗಬಾರದೆಂದು ಚುನಾವಣಾ ಸಿಬ್ಬಂದಿಗಳಿಗೆ ಮುಂಜ್ರಾಗತ ಕ್ರಮವಾಗಿ ಚುನಾವಣೆ ಪ್ರಕ್ರಿಯೆಗೆ ತರಬೇತಿ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಎಂ.ಆರ್.ನಾಗರಾಜ್ ಹೇಳಿದರು.
ಅವರು ಹಳೇನಗರದ ಸಂಚಿಹೊನ್ನಮ್ಮ ಶಾಲೆಯಲ್ಲಿ ಚುನಾವಣೆಗೆ ನಿಯೋಜಿತರಾದ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಚುನಾವಾಣ ಪೂರ್ವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ತರಬೇತಿಯಲ್ಲಿ ಭಾಗವಹಿಸಿರುವವರು ಮತದಾನದ ಪೂರ್ವದಲ್ಲಿ, ಮತದಾನದ ದಿನ ಮತ್ತು ಮತದಾನದ ನಂತರ ಯಾವ ಯಾವ ಕಾರ್ಯವನ್ನು ಹೇಗೆ ನಿರ್ವಹಿಸಬೇಕೆಂದು ಅರ್ಥೈಸಿಕೊಂಡು ಕಾರ್ಯನಿರ್ವಹಿಸುವ ಅಗತ್ಯತೆ ಇದೆ. ಅದಕ್ಕಾಗಿ ಚುನಾವಣಾ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ಸೂಕ್ತ ವ್ಯವಸ್ಥೆ:
ಚುನಾವಣೆಯಲ್ಲಿ ಮಾಡಿರುವ ವ್ಯವಸ್ಥೆಗಳ ಕುರಿತಂತೆ ಪತ್ರಿಕೆಗೆ ಮಾಹಿತಿನೀಡಿ ತಾಲ್ಲೂಕಿನ ಒಟ್ಟು 206541 ಮತದಾರರು ಮತಚಲಾಯಿಸಲಿದ್ದು ಇದಕ್ಕಾಗಿ 4 ಹೆಚ್ಚುವರಿ ಮತಗಟ್ಟೆಗಳೂ ಸೇರಿದಂತೆ 248 ಮತಗಟ್ಟೆಗಳನ್ನು ವ್ಯವಸ್ಥೆಮಾಡಲಾಗಿದೆ, ಅದರಲ್ಲಿ 69 ಸೂಕ್ಷ್ಮ ಮತಗಟ್ಟೆಗಳು, 62 ಅತಿಸೂಕ್ಷ್ಮ ಮತಗಟ್ಟೆಗಳು ಉಳಿದಂತೆ 117 ಸಾಮಾನ್ಯ ಮತಗಟ್ಟೆಗಳು ಇರುತ್ತವೆ. 24 ಜನ ಸೆಕ್ಟಾರ್ ಅಧಿಕಾರಿಗಳು ಸೇರಿದಂತೆ 819 ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈಸಂಧರ್ಭದಲ್ಲಿ ಉಪ ವಿಭಾಗಾಧಿಕಾರಿ ಪ್ರಕಾಶ್ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿವಿಪ್ಯಾಟ್ ಬಳಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಳನ್ನು ಪ್ರತ್ಯಕ್ಷಿಕೆಯ ಮೂಲಕ ತೋರಿಸಿ ವಿವರಿಸಲಾಯಿತು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post