ಕೊಚ್ಚಿ: ಪವಿತ್ರ ಶಬರಿಮಲೆ ಪ್ರವೇಶಿಸಲು ಯತ್ನಿಸಿ ಲಕ್ಷಾಂತರ ಹಿಂದೂಗಳ ಮನಸ್ಸಿಗೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಳ್ಳುವ ರೆಹಾನಾ ಫಾತಿಮಾಳನ್ನು ಮುಸ್ಲಿಂ ಸಮುದಾಯದಿಂದ ಹೊರಹಾಕಲಾಗಿದೆ.
ಈ ಕುರಿತಂತೆ ನಿರ್ಣಯ ಕೈಗೊಂರು ನಂತರ ಮಾತನಾಡಿರುವ ಕೇರಳ ಮುಸ್ಲಿಂ ಜಮಾತ್ ಕೌನ್ಸಿಲ್ ಅಧ್ಯಕ್ಷ ಎ. ಪೂನ್ಕುಂಜು, ರೆಹಾನಾ ಫಾತಿಮಾಳನ್ನು ಮುಸ್ಲಿಂ ಸಮುದಾಯದಿಂದ ಹೊರ ಹಾಕಲಾಗಿದೆ ಎಂದಿದ್ದಾರೆ.
ಎರ್ನಾಕುಲಂ ಸೆಂಟ್ರಲ್ ಮುಸ್ಲಿಂ ಜಮಾತ್ ಗೆ ಕೌನ್ಸಿಲ್ ನಿರ್ದೇಶನ ನೀಡಿದ್ದು, ಆಕೆ ಹಾಗೂ ಆಕೆಯ ಕುಟುಂಬವನ್ನು ಮಹಾಲು ಸದಸ್ಯತ್ವದಿಂದ ರದ್ದು ಮಾಡಲು ಸೂಚಿಸಲಾಗಿದೆ ಎಂದಿರುವ ಪೂನ್ಕುಂಜು, ಆಕೆಯ ನಡೆ ಲಕ್ಷಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಅಲ್ಲದೇ, ಆಕೆಯ ಕೃತ್ಯ ಹಿಂದೂ ಸಂಪ್ರದಾಯಕ್ಕೆ ವಿರುದ್ಧವೂ ಸಹ ಆಗಿದೆ ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯಕ್ಕೆ ಸೇರಿದ ಈಕೆಯನ್ನು ಸಮುದಾಯದಿಂದ ಹೊರ ಹಾಕಲಾಗಿದೆ ಎಂದಿದ್ದಾರೆ.
ಕಿಸ್ ಆಫ್ ಲವ್ ಎಂಬ ಕೆಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಕೆ, ನೀಲಿ ಚಿತ್ರಗಳನ್ನೂ ಸಹ ನಟಿಸಿ ನೈತಿಕತೆಯನ್ನು ಕಳೆದುಕೊಂಡಿರುವ ಆಕೆ, ಮುಸ್ಲಿಂ ಸಮುದಾಯದ ಹೆಸರನ್ನೂ ಸಹ ಬಳಸಿಕೊಳ್ಳಲು ಯಾವುದೇ ರೀತಿಯ ಹಕ್ಕನ್ನು ಹೊಂದಿಲ್ಲ ಎಂದಿದ್ದಾರೆ.
Discussion about this post