ಶ್ರೀನಗರ: ವರ್ಷವಿಡೀ ತಮ್ಮ ಕುಟುಂಬದಿಂದ ದೂರವುಳಿದು ನಾವು ಆಚರಿಸುವ ಯಾವುದೇ ಹಬ್ಬಗಳನ್ನು ಆಚರಿಸದ ಭಾರತೀಯ ಯೋಧರು ನಮಗಾಗಿ ಸಲ್ಲಿಸುವ ಸೇವೆ ಅನನ್ಯ.
ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದರೆ ಗಡಿಯಲ್ಲಿ ಯೋಧರೂ ಮಾತ್ರ ನಮ್ಮ ಸಂಭ್ರಮ ಹಾಳಾಗದಂತೆ ಕಾಪಾಡಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದರ ನಡುವೆಯೇ, ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಕರ್ತವ್ಯದಲ್ಲಿರುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಯೋಧರು ದೀಪಾವಳಿಯನ್ನು ತಮ್ಮ ಕ್ಯಾಂಪ್‌ನಲ್ಲೇ ಆಚರಿಸಿದರು.
ವೀಡಿಯೋ ನೋಡಿ:
#WATCH: Border Security Force (BSF) personnel celebrate #Diwali in Poonch. #JammuandKashmir pic.twitter.com/gtUcPBswjD
— ANI (@ANI) November 7, 2018
ಯೋಧರೆಲ್ಲಾ ಸೇರಿ ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಹಬ್ಬ ಆಚರಿಸಿದರು.
ವರ್ಷ ಪೂರ್ತಿ ಶಸ್ತ್ರಾಸ್ತ್ರ ಹಾಗೂ ಬಾಂಬ್‌ಗಳೊಂದಿಗೆ ಜೀವನ ಕಳೆಯುವ ಯೋಧರು ಪಟಾಕಿ ಸಿಡಿಸಿದ್ದು ವಿಶೇಷವಾಗಿತ್ತು.
Discussion about this post