ಶ್ರೀಹರಿಕೋಟಾ: ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತಿ ಹೆಚ್ಚು ತೂಕದ ಜಿಎಸ್‌ಎಲ್‌ವಿ-ಮಾರ್ಕ್ ತ್ರಿ ರಾಕೇಟನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿ, ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
📡LIVE Now: Launch of GSLV Mk-III D2/ GSAT-29 Mission from Satish Dhawan Space Centre (SHAR), Sriharikota https://t.co/nIwBVLhaBx
— PIB India (@PIB_India) November 14, 2018
ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಇಂದು ಸಂಜೆ ಯಶಸ್ವಿ ಉಡಾವಣೆ ನಡೆದಿದ್ದು, ನಿನ್ನೆ ಅಂದರೆ ಮಂಗಳವಾರ ಮಧ್ಯಾಹ್ನ 2.50ರಿಂದ ಕೌಂಟ್ ಡೌನ್ ಆರಂಭವಾಗಿತ್ತು.
Andhra Pradesh: Indian Space Research Organisation (ISRO) launches GSLV-MK-III D2 carrying GSAT-29 satellite from Satish Dhawan Space Centre in Sriharikota pic.twitter.com/9QPIzshi7R
— ANI (@ANI) November 14, 2018
ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಜಿಎಸ್‌ಎಲ್‌ವಿ-ಮಾರ್ಕ್ ತ್ರಿ)ನ್ನು ಉಡಾಯಿಸಲಾಗಿದ್ದು, ಇದು 43.4 ಮೀಟರ್ ಎತ್ತರ ಹಾಗೂ 640 ಟನ್ ಭಾರ ಹೊಂದಿದೆ.
ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ಉಡಾಯಿಸುವ ಮೂಲಕ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದ್ದಾರೆ.
Update #8#ISROMissions#GSLVMkIIID2#GSAT29
Watch the live telecast on @DDNational at 16:45 (IST) and live streaming on our website https://t.co/PM74Oc8f2u
Updates to follow. pic.twitter.com/H8neLg2rXm
— ISRO (@isro) November 14, 2018
ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಅತಿ ಹೆಚ್ಚು ತೂಕದ ಸ್ಯಾಟಲೈಟ್ ಉಡಾವಣೆ ಮಾಡುವ ಮೂಲಕ ಹೊಸ ಭಾಷ್ಯ ಬರೆದಿರುವ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
My heartiest congratulations to our scientists on the successful launch of GSLV MK III-D2 carrying GSAT-29 satellite. The double success sets a new record of putting the heaviest satellite in orbit by an Indian launch vehicle. @isro
— Narendra Modi (@narendramodi) November 14, 2018
Discussion about this post