ಮುಂಬೈ: 20 ವರ್ಷದ ಯುವ ಮಾಡೆಲ್ ಮಾನ್ಸಿ ದೀಕ್ಷಿತ್ ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಿ, ಸೂಟ್‌ಕೇಸ್‌ನಲ್ಲಿ ತುಂಬಿ, ಬಿಸಾಡಿರುವ ಘಟನೆ ನಡೆದಿದೆ.
20 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಮಾಡಲೆ ಹತ್ಯೆ ಮಾಡಿ ಅಂಧೇರಿಯಿಂದ ಮಲಾಡ್ ಗೆ ಶವವನ್ನು ಸೂಟ್ ಕೇಸ್ ನಲ್ಲಿ ತೆಗೆದುಕೊಂಡು ಹೋಗಿ ಬಿಸಾಕಿದ್ದಾನೆ ಎಂದು ವರದಿಯಾಗಿದೆ.
ಈಕೆ ರೂಪದರ್ಶಿಯಾಗಿ ತನ್ನ ಅದೃಷ್ಟ ಪರೀಕ್ಷಿಸಲು ರಾಜಸ್ಥಾನದ ಕೋಟಾದಿಂದ ಮುಂಬೈಗೆ ಬಂದಿದ್ದಳು. ವಿದ್ಯಾರ್ಥಿನಿಯಾಗಿದ್ದ ಈಕೆ ಈವೆಂಟ್ ವ್ಯಾನೇಜ್ಮೆಂಟ್, ಡಿಸೈನಿಂಗ್ ಮುಂತಾದ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು. ಈಕೆ ಕಚೇರಿಯು ಅಂಧೇರಿಯಲ್ಲಿನ ಇನ್ಫಿನಿಟಿ ಮಾಲ್ ಪಕ್ಕದಲ್ಲೇ ಇದೆ ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ ಅಂಧೇರಿಯಲ್ಲಿರುವ ಸೈಯಿದ್ ಅಪಾರ್ಟ್ ಮೆಂಟ್ ನಲ್ಲಿ ಭೇಟಿಯಾಗಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದು ಸೈಯಿದ್ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಾನ್ಸಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ಇದರಿಂದ ಗಾಬರಿಗೊಂಡ ಸೈಯಿದ್ ಕ್ಯಾಬ್ ನಲ್ಲಿ ಅಂಧೇರಿಯಿಂದ ಮಲಾಡ್ ಗೆ ಸೂಟ್ಕೇಸ್ ನಲ್ಲಿ ಶವವನ್ನು ಸಾಗಿಸಿದ್ದಾನೆ. ನಂತರ ಮಲಾಡ್ ನ ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಆಟೋ ರಿಕ್ಷಾದಲ್ಲಿ ಸೈಯಿದ್ ಹೊರಟಿದ್ದನ್ನು ಗಮನಿಸಿದ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಯೀದ್‌ನಲ್ಲಿ ಬಂಧಿಸಿದ್ದಾರೆ.
Discussion about this post