ಭದ್ರಾವತಿ: ಶಿವಮೊಗ್ಗದಲ್ಲಿ ಇತ್ತೀಚಿಗೆ ನಡೆದ ಕುವೆಂಪು ವಿವಿ ಮಟ್ಟದ 32 ನೆಯ ಅಥ್ಲೆಟಿಕ್ ಕ್ರೀಡಾಕೂಟದ ಹಾಫ್ ಮ್ಯಾರಥಾನ್ ಕ್ರೀಡಾ ಸ್ಫರ್ಧೆಯಲ್ಲಿ ನಗರದ ಪ್ರತಿಭೆಗೆ ಬಂಗಾರದ ಪದಕ ಸಂದಿದೆ.
ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಹಾಗೂ ದೊಡ್ಡೇರಿ ಗ್ರಾಮದ ವಾಸಿ ಜಿ.ಎ. ವಿಠ್ಠಲರಾವ್ 21.975 ಕಿಲೋಮೀಟರ್ ದೂರವನ್ನು 1:9:37 (1 ಗಂಟೆ, 9 ನಿಮಿಷ, 37 ಸೆಕೆಂಡುಗಳಲ್ಲಿ) ಕ್ರಮಿಸಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಗಳಿಸಿಕೊಂಡಿದ್ದಾರೆ.
ಇವರು ವಿವಿಯ ಕಳೆದ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ನೂತನ ಕ್ರೀಡಾಕೂಟದ ದಾಖಲೆ ನಿರ್ಮಿಸಿಕೊಂಡಿದ್ದಾರೆ. ಕಾಲೇಜಿನ ಅಭಿವೃದ್ದಿ ಸಮಿತಿ, ಪ್ರಾಂಶುಪಾಲರು, ದೈಹಿಕ ಶಿಕ್ಷಣ ಬೋಧಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post