No Result
View All Result
ಭದ್ರಾವತಿ | ಹೃದಯಾಘಾತದಿಂದ 23 ವರ್ಷದ ಯುವತಿ ಸಾವು! ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು
English Articles

Young Woman Dies of Cardiac Arrest; Parents Give New Life Through Organ Donation

by ಕಲ್ಪ ನ್ಯೂಸ್
June 3, 2026
0

Kalpa Media House  |  Bhadravathi | In a remarkable act of humanity amid grief, the parents of a young woman...

Read moreDetails
ಗುಜರಾತ್’ನಲ್ಲಿ ಭೀಕರ ದುರಂತ | ಮಹಾರಾಷ್ಟ್ರ ಸಾರಿಗೆಯ 2 ಬಸ್’ಗಳ ಮುಖಾಮುಖಿ ಡಿಕ್ಕಿ | 7 ಮಂದಿ ಸಜೀವ ದಹನ

Tragic Accident in Gujarat | Head-on Collision Between Two MSRTC Buses | 7 Burnt Alive

June 3, 2026
ಸಿಂಗಾಪುರ ವಿರುದ್ಧ 25-0 ಅಂತರದ ಜಯದೊಂದಿಗೆ ಭಾರತದ U18 ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆ

India U18 Women Storm into Semifinals with 25–0 Win Over Singapore

June 3, 2026
SWR to run special trains for Good Friday, Easter rush

Regulation, Diversion and Rescheduling of Trains in the Solapur–Wadi Section

June 1, 2026
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
  • Advertise With Us
  • Grievances
  • About Us
  • Contact Us
Thursday, June 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಬದಲಾದ ಸನ್ನಿ`ವೇಷ’ದಲ್ಲಿ ನವಕಾಲದ ನವರಾತ್ರಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 18, 2018
in Special Articles
0
ಬದಲಾದ ಸನ್ನಿ`ವೇಷ’ದಲ್ಲಿ ನವಕಾಲದ ನವರಾತ್ರಿ
Share on FacebookShare on TwitterShare on WhatsApp

ದಿನ ಬೆಳಗಾದರೆ ಅದೇ ಗುಡ್ ಮಾರ್ನಿಂಗ್ ಮೆಸೇಜು, ಅದೇ 11 ಜನರಿಗೆ ಕಳಿಸಿದರೆ ಇವತ್ತು ಸಂಜೆಯೊಳಗೆ ನಿಮಗೆ ಒಳ್ಳೆದಾಗುತ್ತೆ, ಇಲ್ಲ ಅಂದ್ರೆ ನೀವು ಇಷ್ಟಪಡುವವರು ದೂರಾಗುತ್ತಾರೆ ಅನ್ನುವ ಡಬಲ್ ಡಬ್ಬಾ ಮೆಸೇಜು, ನಾನು ನಿನ್ನ ಬೆಸ್ಟ್ ಫ್ರೆಂಡ್ ಆಗಿದ್ದರೆ ನನ್ನ ಫೋಟೋ/ಹೆಸರು ಸ್ಟೇಟಸ್ ಗೆ ಹಾಕು ಅನ್ನುವ ಆನ್ ಲೈನ್ ಅಮರ ಸ್ನೇಹದ ಮೆಸೇಜು ಇವುಗಳನೆಲ್ಲ ನೋಡಿ ನೋಡಿ ಯಾಕೋ ಈ ವಾಟ್ಸಾಪ್, ಫೇಸ್ ಬುಕ್ ಇವುಗಳಿಗಿಂತ ಊರಿನ ಗೂಡಂಗಡಿಗಳೇ ಬೆಸ್ಟ್ ಅಂತ ಅನಿಸೋಕೆ ಶುರುವಾಗಿದೆ..!!

ಎಲ್ಲೋ ನಡೆದ ಘಟನೆಯನ್ನು ಇಲ್ಲಿಯೇ ನಡೆದಿದೆ ಅನ್ನುವಂತೆ ಬಿಂಬಿಸಿ ಎಡಿಟ್ ಮಾಡಿ ಹರಿಯಬಿಡುವ ಕಪೋಲಕಲ್ಪಿತ ಫೋಟೋ, ವಿಡಿಯೋಗಳು ಒಂದೆಡೆಯಾದರೆ, ಹಿಂಸೆ, ಕ್ರೂರತೆಯನ್ನು ಕೂಡ ಮನರಂಜನೆಯಾಗಿಸಿ ನೋಡುಗರ ಮಾನವೀಯ ಮೌಲ್ಯಗಳನ್ನೆ ಗೆದ್ದಲಿನಂತೆ ತಿನ್ನುತ್ತಿರುವ ವಾಟ್ಸಾಪ್, ಫೇಸ್ ಬುಕ್ ಗಳಿಗಿಂತ ಊರಿನ ಗೂಡಂಗಡಿಗಳು ಎಷ್ಟೋ ಮೇಲೂ…

ಅಂಥದ್ದು ಏನಪ್ಪಾ ಇದೆ ಈ ಗೂಡಂಗಡಿಗಳಲ್ಲಿ ಅಂತ ನಿಮಗೆ ಅನಿಸಿದರೆ ಒಂದು ಸಲ ಬಿಡುವು ಮಾಡಿಕೊಂಡು ಗೂಡಂಗಡಿ ಬಾಗಿಲಲ್ಲಿ ನಿಂತು ನೋಡಿ ಅಲ್ಲೊಂದು ಮಿನಿ ವಿಕಿಪೀಡಿಯ ಸಿಗುತ್ತೆ.

ಅಲ್ಲಿ ನಡೆಯುವ ಮಾತುಕತೆಯಲ್ಲಿ ಖುಶಿಯಿದೆ, ಕಷ್ಟವನ್ನು ಮೀರಿ ನಗುವ ನಗುವಿದೆ, ಟೀ ಆರುವ ಮುನ್ನ ನೊಂದ ಜೀವಕೆ ಆಸರೆಯ ಕೈಗಳು ಸಿಗುತ್ತದೆ. ಒಂದು ಗೂಡಂಗಡಿಯ ಬೆಂಚಿನಮೇಲೆ ಡೋಂಗಿ ಸ್ವಾಮೀಜಿಗಳಿಂದ ಹಿಡಿದು ಡೋನಾಲ್ಡ್ ಟ್ರಂಪ್ ವರೆಗೂ, ದಾಲಾ ಪನ್ಲೆ ಲತಕ್ಕಾನಿಂದ ಹಿಡಿದು ಲಂಡನಲ್ಲಿರುವ ಇಂಗ್ಲೆಂಡ್ ರಾಣಿಯವರೆಗೂ ಲೋಕದ ಎಲ್ಲಾ ಸುದ್ದಿ ಸಮಾಚಾರಗಳ ಸಂಪೂರ್ಣ ವಿಶ್ಲೇಷಣೆಗಳು ನಡೆದು ಎಲ್ಲಾ ಮಾಹಿತಿಗಳು ಒಂದೇ ಸೂರಿನಡಿ ಸಿಗುತ್ತದೆ:

ಹೀಗೆ ಒಂದು ಗೂಡಂಗಡಿಯಲ್ಲಿ ನಡೆದ ಮಾತುಕತೆಯ ವಿಚಾರವೇ ಈ ಲೇಖನ ಹುಟ್ಟಲು ಕಾರಣ. ಅಂದ ಹಾಗೆ ಇತ್ತೀಚೆಗೆ ನಾನು ಅಪರೂಪಕ್ಕೆ ಗೂಡಂಗಡಿ ಬೆಂಚಿನ ಮೇಲೆ ಕುಳಿತಿದ್ದಾಗ ನಮ್ಮ ಊರಿನ ಸುಮಾರು ಎಪ್ಪತ್ತರ ಹರೆಯದ ಹಿರಿಯರೊಬ್ಬರು ಈರೆನ ಇಲ್ಲಗ್ ಪಿಲಿ ಬತ್ತ್‍ಂಡ…?

(ನಿಮ್ಮ ಮನೆಗೆ ಹುಲಿ ಬಂತಾ)ಎಂದು ಕೇಳಿದರು..!! ಭಯ ಪಟ್ಕೋಬೇಡಿ ಅವರು ಕೇಳಿದ್ದು ಕಾಡಿನ ಹುಲಿಯನ್ನಲ್ಲ ಬದಲಾಗಿ ನಾಡಿನ ಹುಲಿಯನ್ನು.
ಹೌದು ನಮ್ಮ ಕರಾವಳಿಯಲ್ಲಿ ನವರಾತ್ರಿ ಅಂದ್ರೆ ಹುಲಿವೇಷ, ಹುಲಿವೇಷ ಅಂದ್ರೆ ನವರಾತ್ರಿ ಅನ್ನುವಷ್ಟರ ಮಟ್ಟಿಗೆ ಇಲ್ಲಿನ ಹುಲಿವೇಷಗಳು ಫೇಮಸ್ಸು ಕೆಲವರಿಗೆ ಹುಲಿವೇಷ ಕಂಡಾಗಲೆ ಮಾರ್ನೆಮಿ(ನವರಾತ್ರಿ) ಆರಂಭವಾಯಿತೆಂದು ಅರಿವಾಗುವುದು…

ಹುಲಿವೇಷ ಬಂದಿತ್ತಾ ಎಂದು ಅವರು ಕೇಳಿದ ಪ್ರಶ್ನೆಗೆ ಹಾ ಒಂದು ವೇಷ ಬಂದಿತ್ತು ತಾತಾ ಎಂದು ಉತ್ತರಿಸಿದಾಗ ಇವಾಗೆಲ್ಲ ಎಂಥ ಹುಲಿವೇಷ ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಅವರು ಮರು ಉತ್ತರಿಸಿ ಅವರು ಕಂಡ ಹುಲಿವೇಷವನ್ನು ವಿವರಿಸಲು ಆರಂಭಿಸಿದರು. ಅವರ ಉತ್ಸಾಹವ ಕಂಡು ನಾನು ಅವರ ಮಾತಿಗೆ ಕೇಳುವ ಕಿವಿಯಾದೆ…

ಹಿಂದೆಲ್ಲಾ ಮಾರ್ನೆಮಿ(ನವರಾತ್ರಿ) ಅಂದರೆ ಒಂಬತ್ತು ದಿನವೂ ಎಲ್ಲಿಲ್ಲದ ಸಂಭ್ರಮ, ಸಡಗರ. ಕಿರಿಯರಿಂದ ಹಿರಿಯರವರೆಗೂ ಹುಲಿ ವೇಷದ ಅಬ್ಬರದ ಸದ್ದಿಗೆ, ಭರ್ಜರಿ ಕುಣಿತಕ್ಕೆ ಮಾರು ಹೋಗದವರಿಲ್ಲ. ಇನ್ನೂ ಮಕ್ಕಳಿಗಂತೂ ಒಳಗೊಳಗೆ ಭಯವಿದ್ದರೂ ಹುಲಿ ವೇಷದ ಹಿಂದೆಯೇ ಕುಣಿಯುತ್ತಾ ನಲಿಯುತ್ತಾ ಸಾಗುವ ಆ ಕುಶಿ ಅದನ್ನು ಅನುಭವಿಸಿದ ನನ್ನಂತವರಿಗೆ ಗೊತ್ತು ಆ ಕುಶಿ ಗಮ್ಮತ್ತು…

ಹಾಗೆ ಕುಣಿಯುವಾಗ ಎಲ್ಲಾದರೂ ಹುಲಿ ತಿರುಗಿದರೆ ಮುಗಿಯತು. ಮಕ್ಕಳೆಲ್ಲ ಓಲಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ ಓಡಿದಂತೆ ಓಡಿ ಮನೆ ಸೇರುತ್ತವೆ…
ಆದರೆ ಈಗ ಎಲ್ಲಿದೆ ಆ ನವರಾತ್ರಿಯ ಹುಲಿವೇಷದ ಸಡಗರ…!? ಎಲ್ಲಿದೆ ಆ ಖುಶಿ ಆ ಸಂಭ್ರಮ..!!?

ಹಿಂದಿನಂತೆ ಇಂದು ಅಪಾರ ಸಂಖ್ಯೆಯ ಹುಲಿವೇಷಗಳು ಇಲ್ಲ ಅದನ್ನು ಕಂಡು ಮಾರುಹೋಗುವ ಜನರೂ ಇಲ್ಲ…!

ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಸಾಗಿದರೆ ಕಾರಣಗಳು ಅನೇಕ ಆದ್ದರಿಂದ ಅವರ ಅನುಭವದ ಮಾತುಗಳನ್ನೇ ಇಲ್ಲಿ ಬರೆದಿದ್ದೇನೆ…. ಅಂದಿನ ಜನರು ಮತ್ತು ಜನಜೀವನದಲ್ಲಿ ಸಾಮರಸ್ಯ, ಒಗ್ಗಟ್ಟು, ಪ್ರಮುಖ ಭಾಗವಾಗಿತ್ತು. ಜನರಲ್ಲಿ ಮುಗ್ಧತೆಯಿತ್ತು, ನಾವೆಲ್ಲರೂ ಒಂದೇ ಎಂಬ ಏಕತೆಯಿತ್ತು ಪರಸ್ಪರ ಸಹಕಾರ ಮನೋಭಾವವಿತ್ತು, ನಂಬಿಕೆಯಿತ್ತು. ಹಾಗಾಗಿ ಅಲ್ಲಿ ಮೋಸ, ವಂಚನೆಗೆ ಅವಕಾಶವಿರಲಿಲ್ಲ. ಆದ್ದರಿಂದ ವೇಷ ಅನ್ನುವುದು ಅಪರೂಪವಾಗಿತ್ತು, ಹಾಗಾಗಿ ಅಲ್ಲಿ ಬಣ್ಣದ ವೇಷಗಳನ್ನು ಬೆರಗುಗಣ್ಣಿಂದ ನೋಡುವ ಕಣ್ಣುಗಳಿದ್ದವು…

ಆದರೆ ಇಂದಿನ ಜನರಲ್ಲಿ ಇಂತಹ ಮಾನವೀಯ ಮೌಲ್ಯಗಳು ಕ್ಷೀಣವಾಗಿ ದಿನ ಬೆಳಗಾದರೆ ಬರೀ ಮೋಸ, ವಂಚನೆ, ಕಪಟ ಮುಖವಾಡಗಳೇ ಜಾಸ್ತಿಯಾಗಿದೆ.. ದಿನಾ ನೋಡುವ ಪರಿಚಯಸ್ಥರಿಂದಲೇ ಮೋಸ, ವಂಚನೆ, ಎದುರಾದರೂ ಆಶ್ಚರ್ಯವೇನಿಲ್ಲ…

ಅಂದು ಮಿತ್ರನಾಗಿದ್ದವನು, ಒಂದೇ ತಟ್ಟೆಯ ಅನ್ನ ತಿಂದವನು ಮುಂದೊಂದು ದಿನ ಶತ್ರುವಾಗಿ ಕಾಡಿದಂತಹ ಉದಾಹರಣೆಗಳು ಸಾಕಷ್ಟಿವೆ…

ಮೋಸಗಾರರಲ್ಲಿ ಹುಲಿ ವೇಷಗಳಂತ ಬಣ್ಣಬಣ್ಣದ ವೇಷ ಭೂಷಣಗಳಿಲ್ಲದಿದ್ದರೂ ಬಣ್ಣ ಬಣ್ಣದ ಮಾತುಗಳ ಮೂಲಕ ಮುಗ್ಧರನ್ನು ಯಾಮಾರಿಸುವ ಕಪಟತನ ಹೆಚ್ಚಾಗಿದೆ. ತಾನೊಬ್ಬ ಬದುಕಿದರೆ ಸಾಕೆನ್ನುವ ಸ್ವಾರ್ಥ ಅತಿಯಾಗಿದೆ. ನೋಡುವ ಕಂಗಳಿಗೆ ಸೌಮ್ಯವಾಗಿ ಕಾಣುವ ಮುಖದ ಹಿಂದಿರುವ ವ್ಯಾಘ್ರ ಸ್ವಭಾವದ ಜನರನ್ನು ನೋಡಿ ನೋಡಿ ಸಾಕಾಗಿ ಹೋಗಿರುವುದರಿಂದ ಇಂತಹ ಯಾವುದೇ ವೇಷಭೂಷಣಗಳಿಲ್ಲದಿದ್ದರೂ ವೇಷ ಬದಲಾಯಿಸುವ ಮನಃಸ್ಥಿತಿಯ ಮೋಸಗಾರರನ್ನು ನೋಡಿ ನೋಡಿ ಅಭ್ಯಾಸವಾಗಿ ಹೋಗಿರುವುದರಿಂದ ಈ ಹುಲಿ ವೇಷಗಳ ಅಷ್ಟೇನು ವಿಶೇಷವಲ್ಲವೆಂಬ ಭಾವನೆ ಮೂಡಿ, ಹುಲಿವೇಷವನ್ನು ಕಂಡು ಮಾರುಹೋಗುವ ಜನರು ಕಡಿಮೆಯಾಗಿದ್ದಾರೆ… ಎಂದು ಹೇಳಿದಾಗ ಮುಪ್ಪಾದ ಅವರ ಮುಖಭಾವದಲ್ಲಿ ಗಾಢವಾದ ಬೇಸರವೊಂದು ಎದ್ದು ಕಾಣಿಸುತಿತ್ತು.

ಆ ಎಪ್ಪತ್ತರ ಹರೆಯದ ಹಿರಿಯರು ಹೇಳಿದ ಮಾತು ಯಾಕೋ ನಮ್ಮಂತ ಇಂದಿನ ಪೀಳಿಗೆಯ ಜನರು ಬದುಕುತ್ತಿರುವ ಬದುಕಿಗೆ ಹಿಡಿದ ಕೈಗನ್ನಡಿಯಂತಿತ್ತು…!
ಇಂದು ಅಳಿಸಿ ಹೋಗುತ್ತಿರುವುದು ಕೇವಲ ನಮ್ಮ ಸಂಸ್ಕೃತಿಗಳು ಮಾತ್ರವಲ್ಲ ನಮ್ಮೊಳಗಿನ ನಾವೇ ಇಂದು ಕಳೆದುಹೋಗುತ್ತಿರುವೆವು. ನಾವೆಲ್ಲ ಇಂದು ಬದುಕುತ್ತಿರುವ ಬದುಕು ಅರ್ಥಕಳೆದುಕೊಳ್ಳುತ್ತಿದೆ ಎಂದು ಅನಿಸುತಿದೆ, ಯೋಚಿಸಬೇಕಿದೆ ಮನ ನಮ್ಮೊಳಗಿನ ನಾವು ಸಂಪೂರ್ಣವಾಗಿ ಅಳಿಸಿಹೋಗುವ ಮುನ್ನ…!

ಲೇಖನ: ಭರತ್ ಕುಮಾರ್

Tags: #Navarathriಕರಾವಳಿಕರಾವಳಿ ನವರಾತ್ರಿನವರಾತ್ರಿಹುಲಿವೇಷ
Share196Tweet123Send
Previous Post

ಶಬರಿಮಲೆ: ಪೊಲೀಸರಿಂದಲೇ ದ್ವಿಚಕ್ರ ವಾಹನಗಳ ಧ್ವಂಸ: ವೀಡಿಯೋ ನೋಡಿ

Next Post

ಭದ್ರಾವತಿ: ನಾಳೆ ದಸರಾ ಭವ್ಯ ಮೆರವಣಿಗೆಗೆ ಉಕ್ಕಿನ ನಗರಿ ಸಜ್ಜು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ: ನಾಳೆ ದಸರಾ ಭವ್ಯ ಮೆರವಣಿಗೆಗೆ ಉಕ್ಕಿನ ನಗರಿ ಸಜ್ಜು

ಭದ್ರಾವತಿ: ನಾಳೆ ದಸರಾ ಭವ್ಯ ಮೆರವಣಿಗೆಗೆ ಉಕ್ಕಿನ ನಗರಿ ಸಜ್ಜು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಅಧಿಕ ಮಾಸ | ಶಿವಮೊಗ್ಗದಲ್ಲಿ ಶ್ರೀಧರ ಸ್ವಾಮಿಗಳ ಚರಿತ್ರೆ ಪ್ರವಚನ | ಚಿಂತಾಮಣಿ ಸ್ವಾಮೀಜಿ ಸಾನ್ನಿಧ್ಯ

ಅಧಿಕ ಮಾಸ | ಶಿವಮೊಗ್ಗದಲ್ಲಿ ಶ್ರೀಧರ ಸ್ವಾಮಿಗಳ ಚರಿತ್ರೆ ಪ್ರವಚನ | ಚಿಂತಾಮಣಿ ಸ್ವಾಮೀಜಿ ಸಾನ್ನಿಧ್ಯ

June 4, 2026
33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ!, ಏನಿದು ಕೇಸ್?

ನೈಋತ್ಯ ರೈಲ್ವೆಯಲ್ಲಿ ವಂಚಿಸುತ್ತಿದ್ದ ನಕಲಿ ಟಿಟಿಇ ಶಿವಮೊಗ್ಗದ ರಕೀಬುದ್ದೀನ್ ಬಂಧನ

June 4, 2026
ವಿರಾಟ್ ಕೊಹ್ಲಿಗೆ ಗಂಭೀರ ಭದ್ರತಾ ಬೆದರಿಕೆ | RCB ಅಭ್ಯಾಸ ಪಂದ್ಯ ರದ್ದು

ಭಾರತ ಕ್ರಿಕೆಟ್ ತಂಡಕ್ಕೆ ಆಘಾತ | ಅಫ್ಘಾನಿಸ್ತಾನ ವಿರುದ್ಧ ಸರಣಿಯಿಂದ ವಿರಾಟ್ ಕೊಹ್ಲಿ ಹೊರಕ್ಕೆ

June 4, 2026
ಶಿವಮೊಗ್ಗ | ಫೆ.21ರಂದು ಉದ್ಯೋಗ ಮೇಳ

MNC ಕಂಪೆನಿಯಲ್ಲಿ ಸಾವಿರಾರು ಉದ್ಯೋಗ | ಶಿವಮೊಗ್ಗದಲ್ಲಿ ಸಂದರ್ಶನ | ಯಾರೆಲ್ಲಾ ಅರ್ಹರು? ನೊಂದಣಿ ಹೇಗೆ?

June 4, 2026
ಭಾರತೀಯ ಸೇನೆ ಮೇಜರ್ ಅಭಿಲಾಷಾ ಬರಾಕ್’ಗೆ ಪ್ರತಿಷ್ಠಿತ UN ಮಿಲಿಟರಿ ಜೆಂಡರ್ ಪ್ರಶಸ್ತಿ

ಭಾರತೀಯ ಸೇನೆ ಮೇಜರ್ ಅಭಿಲಾಷಾ ಬರಾಕ್’ಗೆ ಪ್ರತಿಷ್ಠಿತ UN ಮಿಲಿಟರಿ ಜೆಂಡರ್ ಪ್ರಶಸ್ತಿ

June 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL