ಶಿಮ್ಲಾ: ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಇಂದು ಮುಂಜಾನೆ ಲಘು ಭೂಕಂಪನ ಸಂಭವಿಸಿದ್ದು ಯಾವುದೇ ಪ್ರಾಣ ಹಾಗೂ ಆಸ್ತಿ ಹಾನಿಯಾದ ಕುರಿತಾಗಿ ವರದಿಯಾಗಿಲ್ಲ.
ಕಿನ್ನೋರ್ ಜಿಲ್ಲೆಯಲ್ಲಿ ಇಂದು ಮುಂಜಾನೆ 9 ಗಂಟೆ ಸುಮಾರಿಗೆ ಕಂಪನ ಸಂಭವಿಸಿದೆ ಎಂದು ವರದಿಯಾಗಿದ್ದು, ರಿಕ್ಟರ್ ಮಾಪಕದಲ್ಲಿ 3ರಷ್ಟು ತೀವ್ರತೆ ದಾಖಲಾಗಿದೆ.
ಕಿನ್ನೋರ್ ನಲ್ಲಿ ಕಂಪನ ಸಂಭವಿಸಿದ್ದು, ಇಲ್ಲಿಂದ ಸುಮಾರು ದೂರದವರೆಗೂ ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಕಂಪನ ಲಘು ಪ್ರಮಾಣದ್ದಾದ ಪರಿಣಾಮ ಯಾವುದೇ ರೀತಿಯ ಪ್ರಾಣ ಹಾಗೂ ಆಸ್ತಿ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
Discussion about this post