ಭದ್ರಾವತಿ: ಕಾಂಗ್ರೆಸ್ ಪಕ್ಷಕ್ಕೆ ಗಂಡು ಮೆಟ್ಟಿದ ನೆಲ ಭದ್ರಾವತಿ ಕ್ಷೇತ್ರ. ದೊಡ್ಡ ಪಡೆಯನ್ನೇ ಸೃಷ್ಟಿಸಿಕೊಂಡಿರುವ ಶಾಸಕ ಸಂಗಮೇಶ್ ಅನಿವಾರ್ಯ ಸ್ಥಿತಿಯಲ್ಲಿಂದು ಜೆಡಿಎಸ್ ಮತ್ತು ಕಾಂಗ್ರೆಸ್ ಎಂಬ ಬೇದ ತೋರದೆ ಪರಸ್ಪರರು ಒಗ್ಗೂಡಿ ಮಧು ಬಂಗಾರಪ್ಪ ರವರನ್ನು ಗೆಲ್ಲಿಸುವ ನಂಬಿಕೆ ಇದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಭರವಸೆ ವ್ಯಕ್ತಪಡಿಸಿದರು.
ಅವರು ಸೋಮವಾರ ಹಳೇನಗರದ ವೀರಶೈವ ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಕ್ಷದಲ್ಲಿ ಮುಂದಿನ ದಿನದಲ್ಲಿ ಯೋಗ್ಯ ಸ್ಥಾನ ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ. ಯುಪಿಎ ಸರಕಾರದ ಅವಧಿಯಲ್ಲಿ ರೈತರ 76 ಸಾವಿರ ಕೋಟಿ ರೂ ಮನ್ನ ಮಾಡಿದರೆ, ಸಿದ್ದರಾಮಯ್ಯ ಸರಕಾರದಲ್ಲಿ ಎರಡುವರೆ ಸಾವಿರ ಕೋಟಿ ಹಾಗು ಇಂದಿನ ಎಚ್.ಡಿ.ಕೆ ಸರಕಾರದಲ್ಲಿ 10 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ ಎಂದರು.
ರಾಷ್ಟ್ರದ ಹಿತಕ್ಕಾಗಿ ಸಮಿಶ್ರ ಸರಕಾರ ರಚಿಸುವ ಮೂಲಕ ಪ್ರಸ್ತುತ ನಡೆಯುವ ಮಂಡ್ಯ, ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಮಧ್ಯಂತರ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳು ನಮ್ಮ ಪರವಾಗಲಿದೆ. ಕಾರ್ಯಕರ್ತರು ಮನೆ-ಮನೆಗೆ ತೆರಳಿ ಮತಯಾಚಿಸಿ ಮಧು ಬಂಗಾರಪ್ಪ ರವರನ್ನು ದೆಹಲಿಗೆ ಆರಿಸಿ ಕಳುಹಿಸಿ ಎಂದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post