ಇಂದಿನ ಯುವ ಜನತೆ ಮೊಬೈಲ್ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೂರದರ್ಶನ ಇವುಗಳ ದಾಸರಾಗಿದ್ದಾರೆ. ಇವುಗಳನ್ನು ಹೊರತು ಪಡಿಸಿದರೆ ಬೇರೇನೂ ಅವಶ್ಯಕತೆ ಇಲ್ಲದಂತೆ ಇವುಗಳಲ್ಲಿ ಮುಳುಗಿರುತ್ತಾರೆ.
ಸಾಂಸ್ಕೃತಿಕ ಕಲೆಯಿಂದ ಸಿಗುವ ಮನೋರಂಜನೆಯಲ್ಲಾಗಲಿ ಅಥವಾ ಗ್ರಾಮೀಣ ಕ್ರೀಡೆಗಳಲ್ಲಾಗಲಿ ಅಭಿರುಚಿ ಸಾಯುತ್ತಿದೆ. ಇಂತಹ ಒಂದು ಸಾಂಸ್ಕೃತಿಕ ಕಲೆಯೇ ಯಕ್ಷಗಾನ. ಆದರೆ ಇದು ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಉಸಿರಾಡುತ್ತಿದೆ. ಇದು ಬಹು ನೋವಿನ ಸಂಗತಿ.
ಗಂಡು ಕಲೆ ಎಂದೆ ಹೆಸರು ಪಡೆದ ಯಕ್ಷಗಾನದ ಒಂದು ಪ್ರಕಾರವೇ ನೃತ್ಯರೂಪಕ. ಇದರಲ್ಲಿ ಸಂಭಾಷಣೆ ಇರುವುದಿಲ್ಲ ಕೇವಲ ಮುಕ್ಕಾಲು ಗಂಟೆಯಲ್ಲಿ ಮುಗಿದು ಹೋಗುವ ಇದು ಜನರಿಗೆ ಹೊಸದೊಂದು ಲೋಕಕ್ಕೆ ಕೊಂಡುಯ್ಯುತ್ತದೆ. ಇದು ಕ್ಲಿಷ್ಟಕರವಾಗಿದ್ದು ಇದರಲ್ಲಿ ಹಿರಿಯ ಕಲಾವಿದರೇ ಎಡುವುದುಂಟು.
ಅಂತಹದರಲ್ಲಿ ವರ್ಷ ಮತ್ತು ದಿಶಾ ಎಂಬ ಯುವ ಪ್ರತಿಭೆಗಳು ರಾಧಾ ವಿಲಾಸ ಯಕ್ಷಗಾನ ನೃತ್ಯ ರೂಪಕದಲ್ಲಿ ಪುರುಷರಿಗೆ ಸಮಾನವಾಗಿ ವೇಷ ತೋಟ್ಟಿದ್ದಲ್ಲದೆ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಪಾತ್ರ ನಿರ್ವಹಿಸಿ ನೃತ್ಯ ರೂಪಕ ಪ್ರದರ್ಶನಕ್ಕೆ ಶತದಿನದ ಆಚರಣೆಗೆ ಕಾರಣರಾಗಿದ್ದಾರೆ.
ಇದಕ್ಕೆ ಸಹೋದರಿಯರ ಪ್ರತಿಭೆ ಕಾರಣವೇ ಹೊರತು ಬೇರೇನೂ ಅಲ್ಲ. ಕಾಲೇಜು ವಿದ್ಯಾರ್ಥಿನಿಯಾದ ಯುವ ಪ್ರತಿಭೆ ದಿಶಾ ಮತ್ತು ಈಕೆಯ ಸಹೋದರಿ ವೈದ್ಯರಾದ ವರ್ಷ ಅವರು(ತನ್ನ ಸಹೋದರಿಗೆ ನೆರವು ನೀಡಲು) ಈ ರಂಗದಲ್ಲಿ ತೊಡಿಸಿಕೊಂಡಾಗ ಅವರಿಗೆ ಸಾಹಿತ್ಯ ಪ್ರೇಮಿಗಳು ಬೆಂಬಲ ನೀಡಿದ್ದರೂ ಅವರಿಂದ ಹೆಚ್ಚಿನ ನೀರಿಕ್ಷೆ ಇಟ್ಟುಕೊಂಡಿರಲಿಲ್ಲ.
ಆದರೆ ಇಂದು ಅವರು ಪಾತ್ರ ಮಾಡಿದ ರಾಧಾ ವಿಲಾಸ ನೃತ್ಯ ರೂಪಕ ಎಲ್ಲರ ನೀರಿಕ್ಷೆ ಸುಳ್ಳು ಮಾಡಿ ಶತದಿನದ ಪ್ರದರ್ಶನದ ಸಂಭ್ರಮ ಆಚರಣೆ ಮಾಡಿಕೊಳ್ಳುತ್ತಿದೆ.
ಈ ಸಹೋದರಿಯರ ಕಲಾಸೇವೆ ಹೀಗೆಯೇ ಮುಂದುವರಿಯಲಿ ಇವರ ಹೆಸರಿನ ಕೀರ್ತಿ ದಶ ದಿಕ್ಕಿಗೆ ಹರಡಲಿ ಇವರು ಮಾಡಲಿರುವ ಮುಂದಿನ ಹೊಸ ಪ್ರಯೋಗಕ್ಕೆ ಶುಭವಾಗಲಿ ಎಂದು ಹಾರೈಸುತ್ತೇವೆ.
ಲೇಖನ ಮತ್ತು ಚಿಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post