ಶಿವಮೊಗ್ಗ: ಜಿಲ್ಲಾ ಪಂಚಾಯತ್‌ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಇ. ಕಾಂತೇಶ್ ಪದಗ್ರಹಣ ಮಾಡಿದ್ದು, ಈ ಕಾರ್ಯಕ್ರಮ ಜಿಲ್ಲಾ ಪಂಚಾಯತ್‌ನಲ್ಲಿ ಹೊಸ ಇತಿಹಾಸ ಸೃಷ್ಠಿ ಮಾಡಿದೆ.
ಜಿಲ್ಲಾ ಪಂಚಾಯತಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಕಾಂತೇಶ್, ಒಲಿದುಬಂದಿರುವ ಈ ಅಧಿಕಾರವನ್ನು ಜನರ ಸದ್ಬಳಕೆಗೆ ಬಳಕೆ ಮಾಡುವ ಜೊತೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ಹಗಲಿರುಳು ಶ್ರಮವಹಿಸುವುದಾಗಿ ಅವರು ಭರವಸೆ ನೀಡಿದರು.
ಸಮಾರಂಭದಲ್ಲಿ ಕಾಂತೇಶ್ ತಂದೆ ಶಾಸಕ ಕೆ.ಎಸ್. ಈಶ್ವರಪ್ಪ, ತಾಯಿ ಜಯಲಕ್ಷ್ಮೀ, ಪತ್ನಿ ಶಾಲಿನಿ, ಬಿಜೆಪಿ ಪ್ರಮುಖ ಎಂ.ಬಿ. ಭಾನುಪ್ರಕಾಶ್ ಸೇರಿದಂತೆ ಇಡಿಯ ಕುಟುಂಬಸ್ತರು ಬಂದು ಬಾಂಧವರು, ಸಾವಿರಾರು ಅಭಿಮಾನಿಗಳು ಹಾಜರಿದ್ದರು.
ಇತಿಹಾಸ ಸೃಷ್ಠಿಸಿದ ಕಾರ್ಯಕ್ರಮ:
ಕಾಂತೇಶ್ ಅಧಿಕಾರ ಸ್ವೀಕಾರ ಸಮಾರಂಭ ಶಿವಮೊಗ್ಗ ಜಿಲ್ಲಾ ಪಂಚಾಯತಿಯಲ್ಲೇ ಹೊಸ ಇತಿಹಾಸ ಸೃಷ್ಠಿ ಮಾಡಿದೆ. ಸಾಮಾನ್ಯವಾಗಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಸರಳ ರೀತಿಯಲ್ಲಿ ಪದಗ್ರಹಣ ಮಾಡುವುದು ವಾಡಿಕೆ. ಆದರೆ, ಹೊಳಲೂರು ಕ್ಷೇತ್ರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂತೇಶ್, ಅವರ ಪ್ರತಿ ನಡೆಯೂ ವೈಭವಾಗಿಯೇ ನಡೆದು ಬರುತ್ತಿದೆ.
ಇನ್ನು, ಕಾಂತೇಶ್ ಅವರು ಕೆ.ಎಸ್. ಈಶ್ವರಪ್ಪನವರ ಪತ್ರರಾದ ಕಾರಣವೂ ಅಭಿಮಾನಿಗಳು ಈ ಸಮಾರಂಭವನ್ನು ಕಳೆಗಟ್ಟಿಸಿದ್ದರು. ಕಾಂತೇಶ್ ಅಭಿಮಾನಿ ಬಳಗದ ಕಾರ್ಯಕರ್ತರು, ನಗರದೆಲ್ಲೆಡೆ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ಹಾಕಿ ಸಂಭ್ರಮಿಸಿದ್ದರು. ಹಾಗೆಯೇ, ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಕಾರ್ಯಕ್ರಮದ ಕಳೆಗಟ್ಟಿಸಿದ್ದರು.
Discussion about this post