ಶಿಮ್ಲಾ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್’ವೊಂದು ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಿರ್ಮೌರ್ ಜಿಲ್ಲೆಯಲ್ಲಿ ಇಂದು ಈ ದುರ್ಘಟನೆ ನಡೆದಿದ್ದು, ಅಪಘಾತಕ್ಕೀಡಾದ ಬಸ್ ಮಕ್ಕಳನ್ನು ಹೊತ್ತು ಇಂದು ಬೆಳಿಗ್ಗೆ 8.30 ರ ಸುಮಾರಿಗೆ ಡಿಎವಿ ಪಬ್ಲಿಕ್ ಶಾಲೆಯತ್ತ ತೆರಳುತ್ತಿತ್ತು.
Himachal Pradesh: 7 dead, including 6 children and 11 injured after a bus fell into a gorge in Sirmaur. pic.twitter.com/EOBLh5r7PW
— ANI (@ANI) January 5, 2019
ಮೃತರನ್ನು ಸಮೀರ್ (5), ಆದರ್ಶ್ (7), ಕಾರ್ತಿಕ್ (14), ಅಭಿಷೇಕ್, ಸಂಜನಾ, ನೈತಿಕ್ ಚೌಹಾಣ್ ಹಾಗೂ ಚಾಲಕ ರಾಮ್ ಸ್ವರೂಪ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 12 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

















