ನವದೆಹಲಿ: ಇಡಿಯ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುತ್ತಾ, ಯುಪಿಎ ಸರ್ಕಾರವನ್ನು 10 ವರ್ಷ ಆಡಿಸಿದ ಕಾಂಗ್ರೆಸ್ ಪ್ರಶ್ನಾತೀತ ನಾಯಕಿ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಸುಮಾರು 100 ಕೋಟಿ ರೂ.ಗಳಷ್ಟು ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನೋಟೀಸ್ ಜಾರಿ ಮಾಡಲಾಗಿದೆ.
2011-12ರಲ್ಲಿ 100 ಕೋಟಿ ರೂ. ಆದಾಯ ತೆರಿಗೆಯನ್ನು ಪಾವತಿ ಮಾಡಿದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿರುವ ಐಟಿ, ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.
ನ್ಯಾಶನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರೂ ನಾಯಕರು ಈಗಾಗಲೇ ಕ್ರಿಮಿನಲ್ ತನಿಖೆ ಎದುರಿಸುತ್ತಿದ್ದಾರೆ. ಇದರ ನಡುವೆಯೇ, ಹೊಸ ಆರೋಪದಿಂದಾಗಿ ಕಾಂಗ್ರೆಸ್ ಪಕ್ಷ ತತ್ತರಿಸಿದೆ.
ಈ ಕುರಿತಂತೆ ರಾಷ್ಟಿçÃಯ ಮಾಧ್ಯಮವೊಂದು ವರದಿ ಮಾಡಿದ್ದು, 2011-12ರಲ್ಲಿ ಸೋನಿಯಾ ಗಾಂಧಿ 155 ಕೋಟಿ ರೂಪಾಯಿ ಹಾಗೂ ರಾಹುಲ್ ಗಾಂಧಿ 155.4 ಕೋಟಿ ರೂಪಾಯಿ ಆದಾಯ ಘೋಷಿಸಿದ್ದರೂ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರು ಎಂದು ಉಲ್ಲೇಖಿಸಿದೆ. ಅಂದಿನ ವರ್ಷದಲ್ಲಿ ರಾಹುಲ್ ಅವರ ಆದಾಯ 155.4 ಕೋಟಿ ರೂ.ಗಳಾಗಿದ್ದು, ಇದಕ್ಕೆ 68.12 ಲಕ್ಷ ರೂ.ಗಳನ್ನು ಮಾತ್ರ ತೆರಿಗೆ ಘೋಷಿಸಿದ್ದಾರೆ.
ಅಲ್ಲದೇ, ಸೋನಿಯಾಗಾಂಧಿ ಅವರ ಆದಾರ ಸರಾಸರಿ 155 ಕೋಟಿ ರೂ.ಗಳಾಗಿದ್ದವು. ಆದರೆ ಒಟ್ಟು, ಸುಮಾರು 300 ಕೋಟಿ ರೂಪಾಯಿ ಆದಾಯಕ್ಕೆ ಸುಮಾರು 100 ಕೋಟಿ ರೂಪಾಯಿಗಳಷ್ಟು ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮರು ಮೌಲ್ಯಮಾಪನ ವೇಳೆ ತಿಳಿದುಬಂದಿದೆ.
ಮುಂದಿನ ವಿಚಾರಣೆ ಇದೇ ತಿಂಗಳ 29ರಂದು ನಡೆಯಲಿದೆ.
Discussion about this post