ಬೆಂಗಳೂರು: ಕಿರುಚಿತ್ರಗಳ ಇತಿಹಾಸದಲ್ಲಿ ದಾಖಲೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ್ದ ನಟ ಅನಿರುದ್ಧ ಜತಕರ್, ಈಗ ನಾಲ್ಕು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಸಹ ತಮ್ಮ ಹೆಸರನ್ನು ದಾಖಲಿಸುವ ಮೂಲಕ ಕನ್ನಡಿಗರೆಲ್ಲ ಹೆಮ್ಮೆ ಪಡುವಂತೆ ಸಾಧನೆ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅನಿರುದ್ಧ, ಆ ಭಗವಂತನ ಅನುಗ್ರಹ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಆಶೀರ್ವಾದ, ನನ್ನ ಕುಟುಂಬದವರ ಪ್ರೋತ್ಸಾಹ, ಕೀರ್ತಿ ಇನೋವೇಶನ್ಸ್ ತಂಡದ ಬೆಂಬಲ ಹಾಗೂ ಅಭಿಮಾನಿಗಳ ಹಾರೈಕೆಗಳು ಈ ಸಾಧನೆಗೆ ಕಾರಣವಾಗಿದೆ. ನಾನು ಒಬ್ಬ ಕನ್ನಡಿಗನಾಗಿರೋದಕ್ಕೆ ಮತ್ತು ಭಾರತೀಯನಾಗಿರೋದಕ್ಕೆ ನನಗೆ ಅತ್ಯಂತ ಹೆಮ್ಮೆ ಇದೆ. ಈ ಎಲ್ಲಾ ದಾಖಲೆಗಳು ನಾನು ನನ್ನ ಎಲ್ಲಾ ಕನ್ನಡಿಗರಿಗೂ ಮತ್ತು ನನ್ನ ಎಲ್ಲಾ ಭಾರತೀಯರಿಗೂ ಗೌರವಪೂರ್ವಕವಾಗಿ ಅರ್ಪಿಸುತ್ತೇನೆ ಎಂದಿದ್ದಾರೆ.
ಅನಿರುದ್ಧ ಜತಕರ ಅವರ ಸಾಧನೆಯ ಹಾದಿ:
1) ಅತಿ ಹೆಚ್ಚು ಕಿರುಚಿತ್ರಗಳು 6 ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..
2) ಅತಿ ಹೆಚ್ಚು ಕಿರುಚಿತ್ರಗಳು 6 ಸಾಮಾಜದ ಸಮಸ್ಸೆಗಳನ್ನ ಕುರಿತಾಗಿ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..
3) ಅತಿ ಹೆಚ್ಚು ಕಿರುಚಿತ್ರಗಳು 6 ಯಾವುದೇ ಸಂಭಾಷಣೆ ಇಲ್ಲದೆ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..
4) ಅತಿ ಹೆಚ್ಚು ಕಿರುಚಿತ್ರಗಳು 6 ಬೇರೆ ಬೇರೆ ಶೈಲಿಗಳಲ್ಲಿ ಚಿತ್ರೀಕರಣ ಮಾಡಿ ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..
Discussion about this post