ನವದೆಹಲಿ: 70ನೆಯ ಗಣರಾಜ್ಯೋತ್ಸವ ದೇಶ ಸಜ್ಜಾಗಿದ್ದು ನವದೆಹಲಿಯಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ.
ಗಣರಾಜ್ಯೋತ್ಸವ ಪೆರೇಡ್ ನಡೆಯುವ ಹಿನ್ನೆಲೆಯಲ್ಲಿ ರಾಜ್’ಪಥ್’ನಿಂದ ಮಧ್ಯ ದೆಹಲಿಯ ಕೆಂಪು ಕೋಟೆಗೆ ಎಂಟು ಕಿಲೋಮೀಟರ್ ಉದ್ದದ ರಿಪಬ್ಲಿಕ್ ಡೇ ಮೆರವಣಿಗೆ ಮಾರ್ಗದಲ್ಲಿ ಮಹಿಳಾ ಕಮಾಂಡೊಗಳು, ಮೊಬೈಲ್ ಹಿಟ್ ತಂಡಗಳು, ವಿರೋಧಿ ವಿಮಾನ ಗನ್ ಮತ್ತು ಶಾರ್ಪ್ ಶೂಟರ್’ಗಳ ನಿಯೋಜನೆ ಮಾಡಿ ಭದ್ರತಾ ಕಾರ್ಯತಂತ್ರದ ರೂಪಿಸಲಾಗಿದೆ.
ಅಲ್ಲದೇ ಎನ್’ಎಸ್’ಜಿ ತರಬೇತಿ ಪಡೆದಿರುವ ಕಮಾಂಡೊಗಳು ನಡೆಸುತ್ತಿರುವ ಪರಕ್ರಂ ವ್ಯಾನ್’ಗಳು ರಕ್ಷಣಾ ದೃಷ್ಠಿಯಿಂದ ಗಸ್ತು ತಿರುಗುತ್ತಿವೆ. ನವದೆಹಲಿಯಲ್ಲಿ ಭದ್ರತೆಗಾಗಿ ಸುಮಾರು 25,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವ ಭಯೋತ್ಪಾದಕರ ಟಾರ್ಗೆಟ್ ಆಗಿದೆ. ಅಲ್ಲದೇ, ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಜೆಇಎಂ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇಡಿಯ ಪ್ರದೇಶದಲ್ಲಿ ಬಹುಪದರ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ನವದೆಹಲಿ ಪೊಲೀಸ್ ವಿಭಾಗದ ಎಸ್’ಡಬ್ಲೂಎಟಿಗೆ ಸೇರಿದ ಮೂವತ್ತಾರು ಮಹಿಳಾ ಕಮಾಂಡೋಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಕಳೆದ ಆಗಸ್ಟ್’ನಿಂದ ಇವರಿಗೆ ವಿಶೇಷ ಭದ್ರತಾ ತರಬೇತಿ ನೀಡಲಾಗಿದೆ.
ಅಲ್ಲದೇ, ಸ್ನೈಪರ್’ಗಳನ್ನೂ ಸಹ ಭದ್ರತೆಗಾಗಿ ನಿಯೋಜನೆ ಮಾಡಲಾಗಿದ್ದು, ಎತ್ತರದ ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪ್ರತಿಯೊಂದು ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ.
ವಿಜಯ ಚೌಕ್’ನಿಂದ 9.50 ಗಂಟೆಗೆ ಈ ಮೆರವಣಿಗೆ ಪ್ರಾರಂಭವಾಗಲಿದ್ದು ಮತ್ತು ರಜಪತ್, ತಿಲಕ್ ಮಾರ್ಗ, ಬಹದ್ದೂರ್ ಶಾ ಜಾಫರ್ ಮಾರ್ಗ, ನೇತಾಜಿ ಸುಭಾಷ್ ಮಾರ್ಗ ಮತ್ತು ಕೆಂಪು ಕೋಟೆಗೆ ಮುಂದುವರೆಯುತ್ತದೆ. ಇಂಡಿಯಾ ಗೇಟ್ ಬಳಿ 9 ಗಂಟೆಗೆ ಸಮಾರಂಭ ನಡೆಯಲಿದೆ.
Discussion about this post