ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ನಿನ್ನೆ ಭೇಟಿ ನೀಡಿದ್ದ ವೇಳೆ ಪ್ರತಿಭಟನೆ ಕರೆ ನೀಡಿದ್ದ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಆಂಧ್ರ ಪ್ರದೇಶ ಮರುಸಂಘಟನೆ ಕಾಯ್ದೆ 2014ರ ಅನ್ವಯ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನವದೆಹಲಿಯ ಆಂಧ್ರ ಪ್ರದೇಶ ಭವನದಲ್ಲಿ ಇಂದು ಟಿಡಿಪಿ ಪಕ್ಷ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದೆ.
ಸತ್ಯಾಗ್ರಹಕ್ಕೂ ಮೊದಲು ಸಿಎಂ ನಾಯ್ಡು ಮಹಾತ್ಮ ಗಾಂಧಿ ಸಮಾಧಿ ರಾಜ್ ಘಾಟ್ ಗೆ ತೆರಳಿ ಪುಷ್ಪನಮನ ಸಲ್ಲಿಸಿದರು.
ನಾಯ್ಡು ಅವರ ಪ್ರತಿಭಟನೆಗೆ ಇಂದು ಪ್ರತಿಪಕ್ಷಗಳ ಪ್ರಮುಖ ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
Delhi: Congress President Rahul Gandhi at the Andhra Pradesh CM N Chandrababu Naidu's day-long hunger strike against the central government. pic.twitter.com/rKCjz9wz2l
— ANI (@ANI) February 11, 2019
ಇನ್ನು ಇಂದಿನ ಸತ್ಯಾಗ್ರಹದಲ್ಲಿ ಆಂಧ್ರ ಪ್ರದೇಶದ ಸಚಿವರು, ಟಿಡಿಪಿ ಶಾಸಕರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
Congress President Rahul Gandhi: I stand with the people of Andhra Pradesh. What kind of a PM is he? He did not fulfill the commitment made to the people of Andhra Pradesh. Mr Modi, tells a lie wherever he goes. He has got no credibility left. pic.twitter.com/LdW5923O4T
— ANI (@ANI) February 11, 2019
Discussion about this post