ರಕ್ತ ಕುದಿಯುತ್ತಿದೆ, ಆಕ್ರೋಶ ಉಕ್ಕುತ್ತಿದೆ, ಅಯ್ಯೋ ನಾನು ಸೇನೆಯಲ್ಲಿಲ್ಲವಲ್ಲ ಎಂದು ವ್ಯಥೆಯಾಗುತ್ತಿದೆ… ಸೇನೆಯಲ್ಲಾದರೂ ಇದ್ದಿದ್ದರೆ ಕನಿಷ್ಠ ಓರ್ವ ಉಗ್ರನನ್ನಾದರೂ ಬಲಿ ಹಾಕಿ ಹೊಟ್ಟೆ ಉರಿ ಕಡಿಮೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಸಂಕಟವಾಗುತ್ತಿದೆ….
ನಿಜಕ್ಕೂ ತಾಯಿ ಭಾರತಿಯ ಒಡಲು ಇಂದು ಎಷ್ಟು ನೊಂದಿದೆಯೋ ಗೊತ್ತಿಲ್ಲ. ಆದರೆ, ನಮ್ಮೆಲ್ಲರ ಪಾಲಿಗೆ ಇಂದು ಅತ್ಯಂತ ನೋವಿನ ದಿನ. ನಮ್ಮನ್ನೆಲ್ಲಾ ಹಗಲಿರುಳು ಕಾಯುತ್ತಿದ್ದ 44 ಯೋಧರು ಅತ್ಯಂತ ಘೋರವಾಗಿ ವೀರಸ್ವರ್ಗ ಸೇರಿದ ಕರಾಳದಿನ.
ಹೌದು.. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಸೇನೆಯ 44 ಯೋಧರು ಬಲಿಯಾಗಿದ್ದು, ಇಡಿಯ ದೇಶವನ್ನು ಕಣ್ಣೀರಿನಲ್ಲಿ ದೂಡಿರುವುದು ಮಾತ್ರವಲ್ಲದೇ, ಭಾರತೀಯರಲ್ಲಿ ಮಲಗಿದ್ದ ಆಕ್ರೋಶವನ್ನು ಬಡಿದೆಬ್ಬಿಸಿದೆ. ನೇರವಾಗಿ ಹೋರಾಟಲು ಗಂಡಸ್ತನವಿಲ್ಲದ ಶಂಡ ಉಗ್ರರು, ಹೊಂಚು ಹಾಕಿ ನಮ್ಮ ಯೋಧರನ್ನು ಬಲಿ ಪಡೆದಿದ್ದಾರೆ. ಅದು ಎಷ್ಟು ಕ್ರೂರವಾಗಿ… ಎಷ್ಟೋ ಯೋಧರ ಗುರುತು ಪತ್ತೆ ಹಚ್ಚುವುದೂ ಸಹ ಕಷ್ಟವಾಗಿದೆ. ಇಷ್ಟಾದ ಮೇಲೆ ನಾವು ಸುಮ್ಮನೆ ಕೂರಬೇಕಾ? ಇಷ್ಟಾದ ನಂತರವೂ ನಮ್ಮ ಹಾಗೂ ಸರ್ಕಾರದ ರಕ್ತ ಕುದಿಯದಿದ್ದರೆ, ಅದನ್ನು ರಕ್ತ ಎನ್ನದೇ, ಗಟಾರದಲ್ಲಿರುವ ಕೊಚ್ಚೆ ಎನ್ನಬೇಕಾಗುತ್ತದೆ.
ಮೇರೆ ಪ್ಯಾರೆ ಪ್ರಧಾನಿ ಮೋದಿ ಜೀ,
ಇಂದು ನಡೆದ ಉಗ್ರರ ಕೃತ್ಯ ನಿಮಗೆ ತಿಳಿದೇ ಇದೆ. ಅದನ್ನು ನೀವು ಖಂಡಿಸಿದ್ದು, ಪ್ರಾಣಾರ್ಪಣೆ ಮಾಡಿದ ಯಾವ ಯೋಧರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದೀರಿ.. ಸಂತೋಷ…
ಈಗಲೇ ಹೇಳುತ್ತೇನೆ ಮೋದಿ ಜಿ… ಭಾರತೀಯರ ತಾಕತ್ತು ಪ್ರದರ್ಶಿಸುವ ಕಾಲ ಕೂಡಿ ಬಂದಿದೆ. ಇಂದು ಬಲಿಯಾದ ಪ್ರತಿ ಯೋಧರ ಸಾವಿನ ಪ್ರತೀಕಾರವನ್ನು ನಾವು ಪಡೆಯಬೇಕಿದೆ. ಒಂದಕ್ಕೆ ಎರಡರಂತೆ ಶತ್ರುಗಳನ್ನು ಹುಡುಕಿ ತಲೆ ತೆಗೆಯಬೇಕಿದೆ. ಏಳಿ… ಎದ್ದೇಳಿ…
ನಿಮ್ಮನ್ನು ಪ್ರಧಾನಿಯನ್ನಾಗಿ ಆರಿಸುವಾಗಲೇ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ. ಉರಿ ಸೆಕ್ಟರ್ ಮೇಲೆ ದಾಳಿ ನಡೆಸಿದ ನಂತರ ಸರ್ಜಿಕಲ್ ಸ್ಟೈಕ್ ನಡೆಸಿ, ಶತ್ರುಗಳ ಬಿಲವನ್ನು ಹೊಕ್ಕಿ, ನಾಯಿ ನರಿಗಳಂತೆ ಅವರನ್ನು ಹೊಡೆದು ಹಾಕಿಸಿದ ನಿಮ್ಮ ತಾಕತ್ತು ನಮ್ಮ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿದೆ.
ಆದರೆ, ಒಮ್ಮೆ ಇಂದಿನ ಘಟನಾವಳಿಗಳನ್ನು ವೀಕ್ಷಿಸಿ… ಹೊಟ್ಟೆಯೆಲ್ಲಾ ಧಗಧಗನೆ ಉರಿಯುತ್ತಿದೆ. ಇಂದಿನ ಸ್ಫೋಟವನ್ನು ನೋಡಿದರೆ, ಇದಕ್ಕೆ ತೆಗೆದುಕೊಳ್ಳಬೇಕಾದ ಪ್ರತೀಕಾರದ ಮುಂದೆ ಸರ್ಜಿಕಲ್ ಸ್ಟೈಕ್ ಏನೂ ಅಲ್ಲ ಎಂದಾಗಬೇಕು.
ಪಾಕ್ ಪ್ರೇರಿತ ಹಾಗೂ ದೇಶದೊಳಗಿರುವ ಹಿತಶತ್ರುಗಳಿಂದ ಪ್ರೇರಿತ ಉಗ್ರರು ಮಲಗಿದ್ದ ಸಿಂಹವನ್ನು ಕೆಣಕಿ ಗಾಯಗೊಳಿಸಿದ್ದಾರೆ. ಗಾಯಗೊಂಡ ಸಿಂಹದ ಉಸಿರು ಅದರ ಘರ್ಜನೆಗಿಂತಲೂ ಭಯಂಕರ ಎನ್ನುವುದು ಸಾಬೀತಾಗಬೇಕಿದೆ. ನಮ್ಮ ಯೋಧರ ಬಲಿದಾನಕ್ಕೆ ಉತ್ತರ ಕೊಡಬೇಕಿದೆ.
ಒಳ್ಳೆಯ ದೇವರಿಗೆ ಹಾಲು ತುಪ್ಪದ ನೈವೇದ್ಯ, ಚಂಡಿ ದೇವರಿಗೆ ರಕ್ತ ಮಾಂಸದ ನೈವೇದ್ಯ.. ಹಾಗೆ, ಈಗ ಕೆರಳಿರುವ ಭಾರತೀಯರಿಗೆ ಪಾಕ್ ಉಗ್ರರ ರಕ್ತವೇ ಬೇಕಿದೆ. ರಕ್ತಕ್ಕೆ ರಕ್ತ, ಹತ್ಯೆಗೆ ಹತ್ಯೆಯೇ ಮದ್ದು. ಪುಲ್ವಾಮಾದಲ್ಲಿ ಚೆಲ್ಲಾಡಿದ ನಮ್ಮ ಯೋಧರ ರಕ್ತದ ಪ್ರತಿ ಹನಿ ಹನಿಗೂ ಬೆಲೆ ಸಿಗುವಂತೆ, ಉಗ್ರರ ರಕ್ತದ ಕೋಡಿಯೇ ಹರಿಯಬೇಕಿದೆ.
ಈಗ ವೀರಸ್ವರ್ಗ ಸೇರಿದ ಯೋಧರ ಚಿತೆ ಆರುವ ಮುನ್ನ, ಸ್ಮಾರಕದ ಮಣ್ಣಿನ ಹಸಿ ಆರುವ ಮುನ್ನ ಶತ್ರುಗಳ ರುಂಡವನ್ನು ಚೆಂಡಾಡಬೇಕಿದೆ.
ಭಾರತೀಯ ಸೇನೆಯನ್ನು ಐತಿಹಾಸಿಕ ಎನ್ನುವಂತೆ ಆಧುನೀಕರಣಗೊಳಿಸಿದ ನೀವು, ರಕ್ಷಣಾ ಇಲಾಖೆಗೆ ಮೊದಲು ಮನೋಹರ್ ಪರಿಕ್ಕರ್, ಈಗ ನಿರ್ಮಲಾ ಸೀತಾರಾಮನ್ ಅವರಂತಹ ದಕ್ಷರನ್ನು ಕೂರಿಸಿದ ಯಶಸ್ಸು ನಿಮ್ಮದು. ದೀಪಾವಳಿಯನ್ನು ಯೋಧರೊಂದಿಗೆ ಆಚರಿಸಿದ್ದು ಮಾತ್ರವಲ್ಲ, ರಕ್ಷಣಾ ಜಾಕೆಟ್ ಸೇರಿದಂತೆ ಯೋಧರ ಬೇಡಿಕೆಗಳನ್ನು ಈಡೇರಿಸಿದ್ದೀರಿ. ಈ ಬಾರಿಯ ಬಜೆಟಲ್ಲಿ ಇತಿಹಾಸದಲ್ಲಿ ಎಂದೂ ಇಡದಂತಹ ಮೊತ್ತವನ್ನು ಸೇನೆಗಾಗಿ ಇಟ್ಟಿದ್ದೀರಿ.
ಆದರೆ, ಇಂದಿನ ಘಟನೆಯಿಂದ ಎಲ್ಲೋ ಒಂದು ಕಡೆ ನಮ್ಮ ಯೋಧರ ಆತ್ಮಸ್ಥೈರ್ಯ ಕುಸಿಯಬಾರದು. ಇದರೊಂದಿಗೆ ದೇಶದಲ್ಲಿ ಉಗ್ರರನ್ನು ಬೆಂಬಲಿಸುವ ನಾಯಕರು ಎಂದು ಹೇಳಿಕೊಳ್ಳುವ ಕೆಲವು ನಾಯಿಗಳು ಈಗ ನಿಮ್ಮ ಸಾಮರ್ಥ್ಯ ಬಗ್ಗೆ ಬೊಗಳಲು ಆರಂಭಿಸುತ್ತವೆ. ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರನ್ನು ಜೀಪಿಗೆ ಕಟ್ಟಿ ಸೇನೆ ದಿಟ್ಟ ಉತ್ತರ ಕೊಟ್ಟ ವೇಳೆ ಬೊಗಳಿದ ಬೀದಿ ನಾಯಿಗಳು ಈಗಲೂ ಊಳಿಡಲು ಶುರು ಮಾಡುತ್ತವೆ.
ಇದದೊಂದಿಗೆ ಲೋಕಸಭಾ ಚುನಾವಣೆ ಹತ್ತಿರವೇ ಇದೆ. ಇಂತಹ ವೇಳೆ ಉಗ್ರರು ಮತ್ತೆ ಬಾಲ ಬಿಚ್ಚಿರುವ ಹಿಂದಿನ ಸಂಚಿನಲ್ಲಿ ದೇಶದೊಳಗಿರುವ ನಿಮ್ಮ ಶತ್ರುಗಳ ಕೈವಾಡವೂ ಇಲ್ಲ ಎಂದು ಹೇಳಲು ಸಾಧ್ಯವೂ ಇಲ್ಲ.
ಹೀಗಾಗಿ, ಎಲ್ಲದಕ್ಕೂ ಉತ್ತರ ಕೊಡುವ ಕಾಲ ಈಗ ಪಕ್ವವಾಗಿದೆ. ಈಗ ಕೊಂಚವೂ ತಡ ಮಾಡದೇ ದಿಟ್ಟ ನಿರ್ಧಾರ ಕೈಗೊಳ್ಳಿ ಮೋದಿ ಜೀ…. ರಕ್ತಕ್ಕೆ ರಕ್ತವೇ ಉತ್ತರ ನಿಮ್ಮ ನಿರ್ಧಾರವಾಗಬೇಕು. ಈ ಬಾರಿ ನೀವು ತೆಗೆದುಕೊಂದು ಕಾರ್ಯಗತವಾಗುವ ನಿರ್ಧಾರ ಹೇಗಿರಬೇಕು ಎಂದರೆ, ನಮ್ಮ ಸೇನೆ ಉಗ್ರರ ನೆಲೆಗಳಿಗೆ ನುಗ್ಗಿ ಅಟ್ಟಾಡಿಸಿ, ಬೀದಿ ನಾಯಿಗಳಿಗಿಂತಲೂ ಕಡೆಯಾಗಿ ಉಗ್ರರನ್ನು ಬೇಟೆಯಾಡುವ ಹೊಡೆತಕ್ಕೆ ಮತ್ತೊಮ್ಮೆ ಉಗ್ರರು ಬಂದೂಕು, ಬಾಂಬ್ ಮುಟ್ಟುವುದಿರಲಿ, ದೀಪಾವಳಿ ಗರ್ನಲ್ ಮುಟ್ಟುವುದಕ್ಕೂ ಹೆದರಿ ಉಚ್ಚೆ ಹೊಯ್ದುಕೊಳ್ಳಬೇಕು. ಭಾರತದ ಯೋಧರು ತಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಸಂದೇಶ ಉಗ್ರರ ಮೆದುಳಿಗೆ ತಲುಪಿ, ಅವರ ಬೆರಳುಗಳು ಟ್ರಿಗರ್ ಹತ್ತಿರ ಬರುವ ಮುನ್ನವೇ, ಉಗ್ರರ ರಕ್ತ ತಾಯಿ ಭಾರತಿಯ ಪಾದಪದ್ಮಗಳಿಗೆ ಅಭಿಶೇಕವಾಗಬೇಕು.
ಉಗ್ರರಿಗೆ ಪಾಠ ಕಲಿಸಲು ನೀವು ಯಾವ ನಿರ್ಧಾರ ಕೈಗೊಳ್ಳುತ್ತೀರೋ ಕೈಗೊಳ್ಳಿ. ಆದರೆ, ಆದಷ್ಟು ಶೀಘ್ರ ಕೈಗೊಳ್ಳಿ. ನಿಮ್ಮ ನಿರ್ಧಾರಕ್ಕೆ ಇಡಿಯ ಭಾರತದ ಬೆಂಬಲವಿದೆ. ದೇಶದೊಳಗಿರುವ ಯಾವ ದ್ರೋಹಿ ನಾಯಿಗಳು ಏನೇ ಬೊಗಳಿದರೂ ತಲೆ ಕೆಡಿಸಿಕೊಳ್ಳಬೇಡಿ. ಸಮಯ ಬಂದರೆ ಅವುಗಳನ್ನೂ ಹೊಸಕಿ ಹಾಕಿ. ಆದರೆ, ಈಗ ನೀವು ಕೈಗೊಳ್ಳುವ ನಿರ್ಧಾರದೊಂದಿಗೆ ಕೋಟ್ಯಂತರ ಭಾರತೀಯರು ಹಾಗೂ ನಮ್ಮಲ್ಲಿ ಕುದಿಯುತ್ತಿರುವ ರಕ್ತ ಇದೆ ಎಂಬುದನ್ನು ಮರೆಯದಿರಿ.
ನೆನಪಿಡಿ, ನೀವು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಆದರೆ, ನಿಮ್ಮ ನಿರ್ಧಾರ ರಕ್ತಕ್ಕೆ ರಕ್ತ ಎಂಬುದೇ ಆಗಿರಲಿ ಎನ್ನುವುದು ನಮ್ಮ ವಿನಮ್ರ ಮನವಿ. ನಮಗೆ ನಿಮ್ಮ ಮೇಲೆ ಹಾಗೂ ಭಾರತೀಯ ಸೇನೆಯ ತಾಕತ್ತಿನ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಹೀಗಾಗಿ, ಶೀಘ್ರ ನಿರ್ಧಾರ ಕೈಗೊಳ್ಳಿ.. ನಿಮ್ಮ ನಿರ್ಧಾರ ಯುದ್ಧವೇ ಆದರೂ ಅದರಿಂದ ಏನಾಗುತ್ತದೋ ಆಗಲಿ.. ಏನೇ ಬಂದರೂ ಒಟ್ಟಾಗಿ ಎದುರಿಸುವ. ಆದರೆ, ನಮ್ಮ ಸಹೋದರ ಯೋಧರ ರಕ್ತವನ್ನು ಕಂಡಿರುವ ನಮ್ಮ ನೆಲ ಕುದಿಯುತ್ತಿದೆ. ಇದನ್ನು ಶತ್ರುಗಳ ರಕ್ತದಿಂದಲೇ ಶಾಂತಗೊಳಿಸಿ ಎನ್ನುವುದು ನನ್ನ ಮನವಿ…
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post