ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರವಾದಿಗಳ ದಾಳಿ ಹೇಡಿತನದ ಕೃತ್ಯವಾಗಿದೆ ಎಂದು ಇಂಜಿನಿರ‍್ಸ್ ವೇಲ್ ಫೇರ್ ಅಸೋಸಿಯೇಷನ್ ನಿರ್ದೇಶಕಿ ನವ್ಯಶ್ರೀ ಆರ್ ಯೋಧರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀನ ಕೃತ್ಯ ಎಸಗಿರುವವರು ಎಲ್ಲೆ ಹಾಗೂ ಹೇಗೆ ಅಡಗಿದ್ದರೂ ಸುಮ್ಮನೆ ಬಿಡಲು ಸಾಧ್ಯವಿಲ್ಲ, ಅವರಿಗೆ ತಕ್ಕ ಪಾಠ ಕಲಿಸ ಬೇಕು ಅದಕ್ಕಾಗಿಯೇ ದೇಶದ ಭದ್ರತಾ ಪಡೆಗೆ ಪೂರ್ಣ ಸ್ವಾತಂತ್ರ‍್ಯ ನೀಡಿವಂತ ಕೇಂದ್ರ ಸರ್ಕಾರ ಗಮನ ಹರಿಸ ಬೇಕು ಎಂದು ಅಭಿಪ್ರಾಯಪಟ್ಟರು.
ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
Discussion about this post