ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ ಬೆನ್ನಲ್ಲೆ ದೇಶ ಮಾತ್ರವಲ್ಲ, ಈ ಕ್ರೂರ ದಾಳಿಗೆ ವಿಶ್ವದ ಪ್ರಮುಖ ರಾಷ್ಟ್ರಗಳು ಸಂತಾಪ ಸೂಚಿಸುವ ಜೊತೆಯಲ್ಲಿ ಖಂಡನೆಯನ್ನೂ ಸಹ ವ್ಯಕ್ತಪಡಿಸಿವೆ.
ಪಾಕಿಸ್ಥಾನ ಕೃಪಾಪೋಷಿತ ಉಗ್ರರ ಉಪಟಳ ಅನುಭವಿಸಿರುವ ಪ್ರಮುಖ ರಾಷ್ಟ್ರಗಳು ಈಗ ಭಾರತದ ಬೆಂಬಲಕ್ಕೆ ನಿಂತಿದ್ದು, ಪಾಕಿಸ್ಥಾನವನ್ನು ಜಾಗತಿಕವಾಗಿ ಬೆತ್ತಲಾಗಿಸಿ, ಅನಾಥ ರಾಷ್ಟ್ರ ಮಾಡಲು ಪಣತೊಟ್ಟಿವೆ.
ಪುಲ್ವಾಮಾ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವ ಮುನ್ನ ಜಾಗತಿಕ ಬೆಂಬಲವನ್ನು ಪಡೆದುಕೊಳ್ಳಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ಚಾಣಕ್ಷತನಕ್ಕೆ ಭರ್ಜರಿ ಯಶಸ್ಸು ದೊರೆತಿದ್ದು, ಪಾಕ್ ವಿರುದ್ಧದ ಹೋರಾಟಕ್ಕೆ ಪ್ರಮುಖ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತಿವೆ.
ಭಯೋತ್ಪಾದನೆಯನ್ನು ಉಗ್ರವಾಗಿ ವಿರೋಧಿಸುವ, ಉಗ್ರರ ವಿಚಾರದಲ್ಲಿ ಅತ್ಯಂತ ಕ್ರೂರವಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಪಾಕಿಸ್ಥಾನಕ್ಕೆ ನೀಡುತ್ತಿದ್ದ ಹಲವು ಹಣಕಾಸಿನ ನೆರವನ್ನು ಕಡಿತ ಮಾಡಿದ್ದರು. ಈಗ, ಇದೇ ಅಮೆರಿಕಾ ಭಾರತ ಬೆಂಬಲಕ್ಕೆ ನಿಂತಿದೆ.
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಮೊದಲ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಇದೊಂದು ಅತ್ಯಂತ ಕ್ರೂರ ಹಾಗೂ ಹೇಯ ಕೃತ್ಯವಾಗಿದೆ. ಇಂತಹ ರಾಕ್ಷಸರ ವಿರುದ್ದ ಒಂದಾಗಿ ಹೋರಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ಭಾರತದ ಬೆಂಬಲಕ್ಕೆ ಇದ್ದೇವೆ ಎಂದಿದ್ದಾರೆ.
ಇನ್ನು, ಪಾಕಿಸ್ಥಾನ ಉಗ್ರರಿಂದ ಕಳೆದವಾರವಷ್ಟೆ ತಮ್ಮ ಸೇನೆಯ 25 ಯೋಧರನ್ನು ಕಳೆದುಕೊಂಡ ಇರಾನ್ ಈಗಾಗಲೇ ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆ ನೀಡಿದೆ. ಈಗ, ಇರಾನ್ ಸಹ ಭಾರತಕ್ಕೆ ಬೆಂಬಲ ಸೂಚಿಸಿದ್ದು, ಈ ಹೋರಾಟದಲ್ಲಿ ನಾವಿದ್ದೇವೆ ಎಂದಿದೆ.
ಅಲ್ಲದೇ, ಪಾಕ್ ಉಗ್ರರಿಂದ ಇನ್ನಿಲ್ಲದಂತೆ ತೊಂದರೆ ಅನುಭವಿಸಿ, ತಮ್ಮ ನೂರಾರು ನಾಗರಿಕರನ್ನು ಕಳೆದುಕೊಂಡ ಬ್ರಿಿಟನ್, ಫ್ರಾನ್ಸ್ ಸೇರಿದಂತೆ ಪ್ರಮುಖ ರಾಷ್ಟçಗಳು ಭಾರತಕ್ಕೆ ಬೆಂಬಲ ಘೋಷಿಸಿವೆ.
ಅಣುಬಾಂಬ್’ನ್ನು ಹೊಂದಿರುವ ಮತಿಗೇಡಿ ಪಾಕ್ ವಿರುದ್ಧ ಹೋರಾಡಲು ವಿಶ್ವದ ಪ್ರಮುಖ ರಾಷ್ಟ್ರಗಳ ಬೆಂಬಲ ಅಗತ್ಯ ಎಂದು ಅರಿತಿರುವ ಪ್ರಧಾನಿ ಮೋದಿ ಈ ನಿಟ್ಟಿನಲ್ಲಿ ಅತ್ಯಂತ ಚಾಣಾಕ್ಷತನದಿಂದ ವ್ಯವಹರಿಸಿದ್ದರು. ಈಗ ಈ ಪ್ರಯತ್ನಕ್ಕೆ ವಿಶ್ವ ನಾಯಕರ ಬೆಂಬಲ ದೊರೆತಿದ್ದು, ಇನ್ನು ಮುಂದೆ ಪಾಕಿಸ್ಥಾನದ ಬುಡ ಅಲ್ಲಾಡುವುದು ನಿಶ್ಚಿತ.

















