ನವದೆಹಲಿ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತತವಾಗಿ ಯೋಜನೆ ರೂಪಿಸಿ, ಇಂದು ನಸುಕಿನಲ್ಲಿ ಎಲ್’ಒಸಿಯಲ್ಲಿರುವ ಜೈಷ್ ಉಗ್ರರ ಕ್ಯಾಂಪ್’ಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ವಾಯು ಸೇನೆ 21 ನಿಮಿಷಗಳಲ್ಲಿ 300ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ದಾಳಿ ಕುರಿತಂತೆ ಭಾರತ ಸರ್ಕಾರ ಅಥವಾ ವಾಯುಸೇನೆ ಇನ್ನೂ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಬೇಕಿದ್ದರೂ, ಮೂಲಗಳ ಪ್ರಕಾರ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಸುಮಾರು 300ಕ್ಕೂ ಅಧಿಕ ಉಗ್ರರು ನಾಶವಾಗಿದ್ದಾರೆ ಎಂದು ಹೇಳಲಾಗಿದೆ.
ಅಧಿಕೃತ ಮೂಲಗಳ ಮಾಹಿತಿಯನ್ವಯ ಅತ್ಯಂತ ವ್ಯವಸ್ಥಿತವಾಗಿ ದಾಳಿ ಯೋಜನೆ ರೂಪಿಸಿದ್ದ ಭಾರತ 21 ನಿಮಿಷಗಳಲ್ಲಿ ದಾಳಿಯನ್ನು ಮುಕ್ತಾಯಗೊಳಿಸಿದ್ದು, ಇದಕ್ಕಾಗಿ 12 ಮಿರಾಜ್ ಯುದ್ದ ವಿಮಾನಗಳನ್ನು ಬಳಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ಭಾರತೀಯ ಪಡೆಗಳು ನಡೆಸಿದ ವಾಯು ದಾಳಿಗೆ ಬಲಾಕೋಟ್’ನ ಮೂರು ಭಾಗಗಳು ಸರ್ವನಾಶವಾಗಿದ್ದು, ನಸುಕಿನ 3.48ಕ್ಕೆ ಈ ಬೆಳವಣಿಗೆ ನಡೆದಿದೆ.
ಭಾರೀ ಮಹತ್ವದ ವಿಚಾರ ಎಂದರೆ ಭಾರತದ ಇತಿಹಾಸದಲ್ಲಿ ಪಾಕ್ ವ್ಯಾಪ್ತಿಯಲ್ಲಿ ಭಾರತೀಯ ವಾಯುಪಡೆಗಳು ನುಗ್ಗಿ ದಾಳಿ ನಡೆಸಿದ್ದು ಇದೇ ಮೊದಲು.
Discussion about this post