ಡಿಂಬ ಸಹೋದರರೆಂಬ ಒಂದು ಗೂಂಡಾಗಳ ತಂಡ ಮಗಧ ರಾಜ್ಯಾಧಿಪ ಮಗಧನ ಬಳಿಯಲ್ಲಿತ್ತು. ಅವರು ಈಗಿನ ಮತಾಂಧರಂತೆ ಊರೂರು ಅಲೆದು ಎಲ್ಲೆಲ್ಲಿ ಸಾತ್ವಿಕರಿಗೆ, ಋಷಿ ಮುನಿಗಳು ಯಾಗ ಯಜ್ಞಗಳಿಗೆ, ಸಂಶೋಧನಾ ಕಾರರಿಗೆ ಉಪಟಳ ನೀಡುತ್ತಿದ್ದರು. ಇದಕ್ಕೆ ಮಗಧನ ಪೂರ್ಣ ಬೆಂಬಲವಿತ್ತು. ಅದು ಹೇಗೆಂದರೆ ಯಾವ ಶೋಷಿತರ ಪಿರ್ಯಾದು ದಾಖಲಾಗದೆ, ಪಿರ್ಯಾದು ನೀಡಿದವರಿಗೆ ಗೂಸ ಬೀಳುತ್ತಿತ್ತು.
ಈಗಿನ ಮಮತಾ ಸರಕಾರ, ಕರ್ನಾಟಕದ ಕಾಂಗೀ ಸರಕಾರಗಳು ಉತ್ತಮ ಉದಾಹರಣೆ. ಮಗಧನಿಗೆ ಶ್ರೀಕೃಷ್ಣನೂ ಅನೇಕ ಸಲ ಹಿಂದೇಟು ಹಾಕಿದ್ದಿದೆ. ಆದರೂ ಸಮಯ ಕಾಯುತ್ತಿದ್ದ ಶ್ರೀ ಕೃಷ್ಣ. ಒಮ್ಮೆ ದೂರ್ವಾಸ ಮುನಿಗಳನ್ನು ಈ ಡಿಂಬರು ತಡೆದು, ಅವರ ದಂಡ ಕಮಂಡಲಗಳನ್ನು ಒಡೆದು, ನಗ್ನರನ್ನಾಗಿಸಿ ಅಪಹಾಸ್ಯ ಮಾಡಿದರು. ದೂರ್ವಾಸರಿಗೆ ಅವರನ್ನು ನಾಶ ಮಾಡುವ ಸಾಮರ್ಥ್ಯ ಇದ್ದರೂ ರಾಜ್ಯದ ಶಾಸನ ಮೀರುವಂತಿರಲಿಲ್ಲ. ಆ ಬಾರಿಯೂ ದೂರ್ವಾಸರ ಪಿರ್ಯಾದುಗಳಿಗೆ ಮನ್ನಣೆ ಸಿಗದೆ ಕೊನೆಗೆ ಕೃಷ್ಣನನ್ನೇ ಮರೆಹೊಕ್ಕರು. ನಗ್ನರನ್ನು ನೋಡಿದ ಶ್ರೀಕೃಷ್ಣನು ತನ್ನ ಉತ್ತರೀಯವನ್ನೇ ಹರಿದು ಋಷಿಗಳಿಗೆ ಕೌಪೀನವಾಗಿ ಕೊಟ್ಟ. ನಂತರ ಅವರನ್ನು ಉಪಚರಿಸಿ, ಮಗಧ ರಾಜ್ಯದ ಅನ್ಯಾಯಗಳ ಬಗ್ಗೆ ಸವಿವರ ಪಡೆಯುತ್ತಾನೆ.
ನಂತರ ಒಂದು ದಿನ ಭೀಮ ಸೇನ ಮತ್ತು ಅರ್ಜುನನೊಡನೆ ಮಗಧನ ಅರಮನೆಗೆ ವಿಪ್ರ ವೇಷದಲ್ಲಿ ಮುಸ್ಸಂಜೆಯ ವೇಳೆಗೆ, ಅಪ ಮುಹೂರ್ತದಲ್ಲಿ, ಅಪರಧ್ವಾರದ ಮೂಲಕ ಪ್ರವೇಶಿಸಿ ಅಲ್ಲಿದ್ದ ರಣ ಘಂಟೆಯನ್ನು ಬಾರಿಸಿದ.
ತಕ್ಷಣ ಮಗಧನು ಈ ಮೂವರನ್ನು ಬರಮಾಡಿಕೊಂಡ. ಮಗಧನ ಎದೆ ಡವ ಡವ ಎನ್ನುತ್ತಿತ್ತು. ಯಾರಿವರು? ಅಕಾಲದಲ್ಲಿ, ಅಪರಧ್ವಾರದಲ್ಲಿ ಬಂದ ಈ ಮೂವರು ಯಾರು ಎಂದು ಒಂದು ರೀತಿಯ ಅಪಶಕುನ ಉಂಟಾಯಿತು. ಕೊನೆಗೆ ಕೇಳಿಯೇ ಬಿಟ್ಟ.’ ಯಾರು ನೀವು? ಈ ಮುಸ್ಸಂಜೆಯ ಅಪಮೂರ್ತದಲ್ಲಿ ಯಾಕೆ ಬಂದಿರಿ? ಆಗ ಕೃಷ್ಣನು(ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಕೃಷ್ಣನೆಂದರೆ ನರೇಂದ್ರ ಮೋದಿ ಎಂದು ಅರ್ಥೈಸಿಕೊಳ್ಳಬಹುದು) ಭೀಮಸೇನನ್ನು(ಇಂದಿನ ಕಾಲಮಾನದಲ್ಲಿ ಭೀಮಸೇನನೆಂದರೆ ಅಜಿತ್ ಧೋವಲ್ ಎಂದು ತಿಳಿಯಬಹುದು) ತೋರಿಸಿ, ಅಯ್ಯಾ ರಾಜಾ, ಈ ಬ್ರಾಹ್ಮಣನಿಗೆ ಮಲ್ಲ ಯುದ್ಧದ ಹುಚ್ಚು. ಹಾಗಾಗಿ ನೀನೇ ಸೂಕ್ತ ಇದಿರಾಳಿ ಎಂದು ಇಲ್ಲಿಗೆ ಕರೆತಂದೆ. ತಪ್ಪಾಯ್ತೇನು? ಗಹಗಹಿಸಿ ನಕ್ಕ ಮಗಧನು,’ ಯಮಪುರಿಯ ಆಹ್ವಾನ ಇದ್ದವರು ಒಳಗೆ ಬಂದರೆ ತಪ್ಪಿಲ್ಲ. ತಪ್ಪು ಒಪ್ಪು ಆಮೇಲೆ ತಿಳಿದೀತು.
ಎಲೈ ಸಸ್ಯಾಹಾರಿ ಬ್ರಾಹ್ಮಣನೇ, ತಡವೇಕೆ. ಒಂದು ಕೈ ನೋಡಿ ಬಿಡುವ ಎಂದು ಭೀಮಸೇನನ ಮೇಲೆರಗಿದ. ದೊಡ್ಡ ಗೂಳಿ ಕಾಳಗವೇ ನಡೆಯಿತು. ಕೊನೆಗೆ ಭೀಮಸೇನನು ಮಗಧನನ್ನು ಎರಡು ಸೀಳಾಗಿಸಿ ಕಿತ್ತೊಗೆದ. ಆದರೆ ಕ್ಷಣದಲ್ಲೇ ಅದು ಮತ್ತೆ ಒಟ್ಟಿಗೆ ಸೇರುತ್ತದೆ. ಎಲೈ ಬ್ರಾಹ್ಮಣ ಕುನ್ನೀ, ಇದು ಜರಾಸಂಧನ ದೇಹ ನೀನು ಸೀಳಿದಂತೆ ಒಂದಾಗುತ್ತದೆ. ಇದನ್ನು ಘಾಸಿ ಮಾಡಿದವರಿಲ್ಲ. ನೀನು ಯಾರು, ಆ ರಣ ಆಹ್ವಾನ ತಂದವ ಯಾರು ಎಂದು ಆಗಲೇ ತಿಳಿದಿದ್ದೆ. ಇದೋ ನನ್ನ ಹೊಡೆತ’ ಎಂದು ಭೀಮ ಸೇನನಿಗೆ ಗುದ್ಧಿದ. ಆಗ ಸಿಡಿದೆದ್ದ ಭೀಮ ಸೇನ ತನ್ನ ಕೈಗಳಿಂದ ಮತ್ತೊಮ್ಮೆ ಮಗದನನ್ನು ಸೀಳಿ ಎಸೆಯುವಷ್ಟರಲ್ಲಿ ಶ್ರೀ ಕೃಷ್ಣನು ನಗುತ್ತಾ, ಕೈಯಲ್ಲಿದ್ದ ದರ್ಭೆಯನ್ನು ಸೀಳಿ ವಿರುದ್ಧ ದಿಕ್ಕಿಗೆಸೆದು, ಹೀಗೆ ಎಸೆಯಬೇಕು ಎಂದು ಸಂಜ್ಞೆ ನೀಡಿದ.
ಕೃಷ್ಣನಾಜ್ಞೆಯಂತೆ ಜರಾಸಂಧನ ಕಾಯವನ್ನು ಸೀಳಿದ ಭೀಮ ಸೇನ ಆ ಸೀಳಿದ ಭಾಗವನ್ನು ವಿರುದ್ಧ ದಿಕ್ಕಿಗೆಸೆದ. ಮತ್ತೆ ಕಾಯ ಒಂದಾಗದೆ ಜರಾಸಂಧನ ಮೃತ್ಯುವಾಯ್ತು.
ಅದೇ ರೀತಿ ಪಾಕಿಗಳ ಮತ್ತು ದೇಶದೊಳಗಿನ ಪಾಕಿ ಬೆಂಬಲಿಗ ದೇಶದ್ರೋಹಿಗಳನ್ನು ಹೇಗೆ ಕಿತ್ತೊಗೆಯಬೇಕು ಎಂದು ಸೈನಿಕರಿಗೆ ಮೋದಿಯವರು ತಿಳಿಸಿಯಾಗಿದೆ.
ಮೋದಿಯವರು ಸೈನ್ಯಕ್ಕೆ ಪೂರ್ಣಾಧಿಕಾರ ಕೊಟ್ಟರು. ಇದನ್ನು ಸದುಪಯೋಗ ಪಡಿಸಿಕೊಂಡ ಭಾರತೀಯ ಸೇನೆ, ವಾಯುಪಡೆ ಇಂದು ಶತ್ರುರಾಷ್ಟ್ರದ ಪರಿಧಿಯಲ್ಲಿ ನುಗ್ಗಿ ವಿಶ್ವವೇ ತಿರುಗಿನೋಡುವಂತ ಯಶಸ್ಸನ್ನು ಕೇವಲ 21 ನಿಮಿಷದಲ್ಲಿ ಸಾಧಿಸಿಕೊಂಡು ಬಂದಿದ್ದಾರೆ. ಇದು ಆರಂಭವಷ್ಟೆ. ಮುಂದೆ ದುಷ್ಟರ ನಾಶವೂ ಆಗುತ್ತದೆ. ಹಾಗೆಯೇ ಇಮ್ರಾನನೂ ಪಾಕ್ ಸೈನಿಕರಿಗೆ ಪೂರ್ಣಾಧಿಕಾರ ಕೊಟ್ಟು, ರಣ ತಂತ್ರವನ್ನು ತಿಳಿಸಲು ವಿಫಲನಾಗಿ ಎಡವಟ್ಟು ಮಾಡಿಕೊಳ್ಳುತ್ತಾನೆ ಎನ್ನುವುದು ನಿಶ್ಚಿತ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post