ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಇಂದು ನಸುಕಿನಲ್ಲಿ ಎಲ್’ಒಸಿಯ ಬಾಲಾಕೋಟ್ ಬಳಿಯಲ್ಲಿದ್ದ ಜೈಷ್ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿ 245 ಉಗ್ರರನ್ನು ಹೊಸಕಿ ಹಾಕಿದ್ದ ಬೆನ್ನಲ್ಲೆ, ದಾಳಿಗೂ ಮುನ್ನ ತೆಗೆಯಲಾದ ಫೊಟೋಗಳು ಈಗ ಬಹಿರಂಗಗೊಂಡಿದೆ.

ಅತ್ಯಂತ ಮಹತ್ವದ ಫೋಟೋಗಳು ಈಗ ಬಹಿರಂಗಗೊಂಡಿದ್ದು, ದಾಳಿಗೂ ಮುನ್ನ ತೆಗೆಯಲಾದ ಉಗ್ರರ ಕ್ಯಾಂಪ್’ಗೆ ಸೇರಿದ್ದ ಕಟ್ಟಡದ್ದಾಗಿವೆ.
ಈವರೆಗೂ ಒಟ್ಟು ಫೋಟೋಗಳು ಬಹಿರಂಗಗೊಂಡಿದ್ದು, ದಾಳಿಗೂ ಮುನ್ನ ಅವರ ಸ್ಥಳ ಹೇಗಿತ್ತು ಎಂಬುದನ್ನು ಇವು ಸ್ಪಷ್ಟವಾಗಿಸುತ್ತವೆ.

ಇದೆಲ್ಲಕ್ಕೂ ಮಿಗಿಲಾಗಿ, ಉಗ್ರರ ಅಡಗುತಾಣದಲ್ಲಿ ನಿರ್ಮಿಸಿಕೊಳ್ಳಲಾಗಿರುವ ಓಡಾಡುವ ದಾರಿ ಹಾಗೂ ಮೆಟ್ಟಿಲುಗಳಿಗೆ ಅಮೆರಿಕಾ ಹಾಗೂ ಯುಕೆ ಸೇರಿದಂತೆ ಪ್ರಮುಖ ರಾಷ್ಟಗಳ ಧ್ವಜವನ್ನು ಚಿತ್ರಿಸಲಾಗಿದೆ. ಈ ರೀತಿ ಚಿತ್ರಗಳನ್ನು ಬರೆದು ಅದರ ಮೇಲೆ ನಡೆದಾಡುವ ಮೂಲಕ ಕಿಚ್ಚು ಹೊತ್ತಿಸಿಕೊಳ್ಳುವ ಉಗ್ರರ ಈ ಮನಃಸ್ಥಿತಿ ಎಂತಹ ಭೀಕರವಾಗಿದೆ ಎಂಬ ಆಘಾತಕಾರಿ ಅಂಶ ಈ ಫೋಟೋಗಳಿಂದ ಬಹಿರಂಗಗೊಂಡಿದೆ.


















