ಇಸ್ಲಾಮಾಬಾದ್: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಸೇನಾ ಪಡೆಗಳು ನಮ್ಮ ನೆಲೆಗಳ ಮೇಲೆ ದಾಳಿ ನಡೆಸಿ, ನಮ್ಮ ಸದಸ್ಯರನ್ನು ಕೊಂದಿರುವುದು ಸತ್ಯ ಎಂದು ಜೈಷ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಒಪ್ಪಿಕೊಂಡಿದ್ದು, ಈ ಮೂಲಕ ಪಾಕಿಸ್ಥಾನಕ್ಕೆ ಮುಖಭಂಗವಾಗಿದೆ.
ಈ ಕುರಿತಂತೆ ಪಾಕ್ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತ ದಾಳಿ ಮಾಡಿ ನಮ್ಮ ನೆಲೆಗಳನ್ನು ಧ್ವಂಸ ಮಾಡಿರುವುದು ಸತ್ಯ. ಈ ಘಟನೆಯಲ್ಲಿ ನಮ್ಮ ಸಂಬಂಧಿಯೂ ಸೇರಿ ನೂರಾರು ಸಂಖ್ಯೆಯಲ್ಲಿ ನಮ್ಮವರನ್ನು ಕಳೆದುಕೊಂಡಿರುವುದು ಸತ್ಯ ಎಂದಿದ್ದಾನೆ.
ಭಾರತ ನಡೆದ ದಾಳಿಯಿಂದ ನಮ್ಮಲ್ಲಿ ಯಾವುದೇ ಸ್ಥಳ ಧ್ವಂಸವಾಗಿಲ್ಲ ಹಾಗೂ ಯಾರೂ ಸತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಪಾಕಿಸ್ಥಾನಕ್ಕೆ ಮಸೂದ್’ನಿಂದಲೇ ಜಾಗತಿಕವಾಗಿ ಮುಖಭಂಗವಾಗಿದೆ.














