ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧದಂತಹ ಸನ್ನಿವೇಶ ನಿರ್ಮಾಣವಾಗಿರುವ ಬೆನ್ನಲ್ಲೆ, ಗಡಿಯಲ್ಲಿ ಯಾರೇ ತಂಟೆ ಮಾಡಿದರೂ ದೇಶದ ಭದ್ರತೆ ದೃಷ್ಠಿಯಿಂದ ಮುಲಾಜಿಲ್ಲದೇ ಸುಟ್ಟು ಬಿಸಾಕಿ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ.
ಒಂದೆಡೆ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದ್ದರೆ, ಇನ್ನೊಂದಡೆ ಗಡಿ ಭಾಗದಲ್ಲಿ ಪಾಕ್ ಸೇನೆ ಪದೇ ಪದೇ ಅಪ್ರಚೋದಿತ ದಾಳಿ ನಡೆಸುತ್ತಾ ಭಾರತೀಯ ಯೋಧರನ್ನು ಕೆಣಕುತ್ತಿದೆ. ಅಲ್ಲದೇ, ನಿನ್ನೆ ಪಾಕಿಸ್ಥಾನ ವಿಮಾನಗಳು ಭಾರತದ ವಾಯುಗಡಿಯನ್ನು ದಾಟಿ ಬಂದ ಹಿನ್ನೆಲೆಯಲ್ಲಿ ಅತ್ಯಂತ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಗಡಿ ಭಾಗ ಮಾತ್ರವಲ್ಲ ಯಾವುದೇ ಮಾರ್ಗದಲ್ಲಿ ಶತ್ರುಗಳು ಸೇರಿದಂತೆ ಯಾರೇ ಉಪಟಳ ಮಾಡಲು ಬಂದರೂ ಮುಲಾಜಿಲ್ಲದೇ ಗುಂಡು ಹಾರಿಸಿ, ಸುಟ್ಟು ಬಿಸಾಕಿ ಎಂದು ಕೇಂದ್ರ ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ ನೀಡಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
Discussion about this post